More

    ಸೋಲಿನ ಸುಳಿಯಲ್ಲಿ ಅಕ್ಷಯ್​; ‘ಸೆಲ್ಫೀ’ ಚಿತ್ರದ ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

    ಮುಂಬೈ: ಯಾಕೋ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರ ಅದೃಷ್ಟ ಸರಿ ಇರುವ ಹಾಗೆ ಕಾಣುತ್ತಿಲ್ಲ. ಈಗಾಗಲೇ ನಾಲ್ಕು ಬ್ಯಾಕ್​ ಟು ಬ್ಯಾಕ್​ ಸೋಲುಗಳನ್ನು ಕಂಡಿರುವ ಅಕ್ಷಯ್​ ಕುಮಾರ್​ಗೆ ಈಗ ಇನ್ನೊಂದು ಸೋಲಿನ ಭೀತಿ ಎದುರಾಗಿದೆ.

    ಇದನ್ನೂ ಓದಿ: ಬಿಕಿನಿಯಲ್ಲಿ ಗುಡ್ಡ ಏರಿ ಜಿಗಿದ ಅಮಲಾ ಪೌಲ್:​ ಸೌತ್​ ಬ್ಯೂಟಿಯ ಸಾಹಸಕ್ಕೆ ಅಭಿಮಾನಿಗಳು ಫಿದಾ

    ಬಾಕ್ಸ್​ ಆಫೀಸ್​ನಲ್ಲಿ ಕಡೆಯದಾಗಿ ದೊಡ್ಡ ಹಿಟ್​ ಆದ ಚಿತ್ರವೆಂದರೆ, ಅದು ‘ಸೂರ್ಯವಂಶಿ’. ಆ ನಂತರ ಅದ್ಯಾಕೋ ಅಕ್ಷಯ್​ ಅಭಿನಯದ ಯಾವ ಚಿತ್ರವೂ ಗೆದ್ದ ಉದಾಹರಣೆಯಿಲ್ಲ. ಕಳೆದ ವರ್ಷವನ್ನೇ ತೆಗೆದುಕೊಂಡರೆ, ಅಕ್ಷಯ್​ ಅಭಿನಯದ ನಾಲ್ಕು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದವು. ‘ಸಾಮ್ರಾಟ್​ ಪೃಥ್ವಿರಾಜ್​’, ‘ಬಚ್ಚನ್​ ಪಾಂಡೆ’, ‘ರಕ್ಷಾ ಬಂಧನ್​’ ಮತ್ತು ‘ರಾಮ್​ ಸೇತು’ ಚಿತ್ರಗಳು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದವು. ಈ ನಾಲ್ಕೂ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸೋಲನುಭವಿಸಿದ್ದವು.

    ಈಗ ಈ ವರ್ಷದ ಅಕ್ಷಯ್​ ಕುಮಾರ್​ ಅವರ ಮೊದಲ ಚಿತ್ರವಾಗಿ ಶುಕ್ರವಾರವಷ್ಟೇ ‘ಸೆಲ್ಫೀ’ ತೆರೆಕಂಡಿದೆ. ಈ ಚಿತ್ರವು ಹಿಂದಿನ ಚಿತ್ರಗಳಂತೆ ಸೋಲುವಂತೆ ಕಾಣುತ್ತಿದೆ. ಇದಕ್ಕೆ ಮುನ್ನುಡಿಯಾಗಿ, ಚಿತ್ರವು ಮೊದಲ ದಿನ ಬಹಳ ಕೆಟ್ಟ ಓಪನಿಂಗ್​ ಪಡೆದಿದೆ. ಅಂದಹಾಗೆ, ‘ಸೆಲ್ಫೀ’ ಚಿತ್ರದ ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ? ಕೇವಲ ಎರಡೂವರೆ ಕೋಟಿ ರೂ. ಇತ್ತೀಚಿನ ವರ್ಷಗಳಲ್ಲೇ ಅಕ್ಷಯ್​ ಅಭಿನಯದ ಯಾವೊಂದು ಚಿತ್ರವೂ ಇಷ್ಟೊಂದು ಕಡಿಮೆ ಕಲೆಕ್ಷನ್​ ಮಾಡಿದ ಉದಾಹರಣೆ ಇಲ್ಲ. ಮೊದಲ ದಿನವೇನೋ ಹೀಗಾಯಿತು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಯಾರಿಗೂ ಇಲ್ಲ.

    ಇದನ್ನೂ ಓದಿ: ಮಾರ್ಟಿನ್​’ ಜತೆಗೆ ಸೆಣಸಲು ಬಂದ ಆ ಇಬ್ಬರು ದೈತ್ಯರು!

    ‘ಸೆಲ್ಫೀ’ ಚಿತ್ರವು ಮೂರು ವರ್ಷಗಳ ಹಿಂದೆ ಮಲಯಾಳಂನಲ್ಲಿ ಬಿಡುಗಡೆಯಾಗಿದ್ದ ‘ಡ್ರೈವಿಂಗ್ ಲೈಸೆನ್ಸ್​’ ಚಿತ್ರದ ರೀಮೇಕ್​. ಮೂಲ ಚಿತ್ರದಲ್ಲಿ ಪೃಥ್ವಿರಾಜ್​ ಮತ್ತು ಸೂರಜ್​ ನಟಿಸಿದ್ದರು. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಜತೆಗೆ ಎಮ್ರಾನ್​ ಹಶ್ಮಿ ಸಹ ನಟಿಸಿದ್ದು, ಚಿತ್ರವನ್ನು ರಾಜ್​ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಚಾರ ವೇಳೆ ಮೂರು ನಿಮಿಷಗಳಲ್ಲಿ ಅತೀ ಹೆಚ್ಚು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅಕ್ಷಯ್​ ಕುಮಾರ್​ ಹೊಸ ಗಿನ್ನೆಸ್​ ದಾಖಲೆಯನ್ನು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts