More

    ನಿರ್ಣಾಯಕ ಬ್ರಿಸ್ಬೇನ್ ಟೆಸ್ಟ್‌ಗೆ ಆಯ್ಕೆ ಗೊಂದಲದಲ್ಲಿ ಟೀಮ್ ಇಂಡಿಯಾ

    ಸಿಡ್ನಿ: ಗಾಯಾಳು ಪಟ್ಟಿ ಏರಿಕೆಯಿಂದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ 4ನೇ ಹಾಗೂ ಅಂತಿಮ ಟೆಸ್ಟ್‌ಗೆ ಬದಲಾವಣೆ ಮಾಡಿಕೊಳ್ಳುವುದು ಅನಿವಾರ‌್ಯವೆನಿಸಿದೆ. ರವೀಂದ್ರ ಜಡೇಜಾ ಗೈರಿನಲ್ಲೂ ಭಾರತ ಐವರು ಬೌಲರ್‌ಗಳ ಕಾಂಬಿನೇಷನ್ ಉಳಿಸಿಕೊಳ್ಳಲು ಆದ್ಯತೆ ನೀಡಲಿದ್ದು, ಬ್ರಿಸ್ಬೇನ್‌ನ ಬೌನ್ಸಿ ಪಿಚ್ ಗಮನದಲ್ಲಿಟ್ಟುಕೊಂಡು ಶಾರ್ದೂಲ್ ಠಾಕೂರ್ 4ನೇ ವೇಗಿಯಾಗಿ ಕಣಕ್ಕಿಳಿಬಹುದು. ಮತ್ತೋರ್ವ ವೇಗಿ ಟಿ. ನಟರಾಜನ್ ಕೂಡ ಈ ಸ್ಥಾನ ತುಂಬಲು ಸ್ಪರ್ಧೆಯಲ್ಲಿದ್ದಾರೆ.

    ಒಂದು ವೇಳೆ ಅಶ್ವಿನ್ ಕೂಡ ಫಿಟ್ ಆಗದಿದ್ದರೆ ಕುಲದೀಪ್ ಯಾದವ್ ತಂಡದಲ್ಲಿರುವ ಏಕೈಕ ಬದಲಿ ಸ್ಪಿನ್ನರ್ ಆಗಿದ್ದಾರೆ. ವಿಹಾರಿ ಸ್ಥಾನವನ್ನು ತುಂಬಲು ರಿಷಭ್ ಪಂತ್ ಅವರನ್ನು ಕೇವಲ ಬ್ಯಾಟ್ಸ್‌ಮನ್ ಆಗಿ ಆಡಿಸಿ ವೃದ್ಧಿಮಾನ್ ಸಾಹರಿಂದ ಕೀಪಿಂಗ್ ಮಾಡಿಸುವ ಸಾಧ್ಯತೆ ಇದೆ ಅಥವಾ ಕನ್ನಡಿಗ ಮಯಾಂಕ್ ಅಗರ್ವಾಲ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಬಹುದು.

    ಇದನ್ನೂ ಓದಿ: 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳಿದ ಶ್ರೀಶಾಂತ್‌ಗೆ ಗೆಲುವಿನ ಸ್ವಾಗತ ನೀಡಿದ ಕೇರಳ

    ಸಿಡ್ನಿಯಲ್ಲಿ ಯಶ ಕಂಡ ರೋಹಿತ್-ಗಿಲ್ ಆರಂಭಿಕ ಜೋಡಿಯನ್ನು ಬದಲಿಸಲು ಭಾರತ ಒಲವು ಹೊಂದಿಲ್ಲ. ಹೀಗಾಗಿ ಮಯಾಂಕ್ ಮರಳಿ ಅವಕಾಶ ಪಡೆದಾಗ ಮಧ್ಯಮ ಕ್ರಮಾಂಕದಲ್ಲೇ ಆಡಬೇಕಾಗುತ್ತದೆ. ರಿಷಭ್ ಪಂತ್ ಫಿಟ್ ಆಗದಿದ್ದರೆ, ಸಾಹ, ಮಯಾಂಕ್ ಇಬ್ಬರೂ ಸ್ಥಾನ ಪಡೆಯಬಹುದು. ಮೀಸಲು ಬಳಗದಲ್ಲಿರುವ ಕೊನೇ ಆಟಗಾರ ಪೃಥ್ವಿ ಷಾ ಅವರಂತೂ ಯಾವುದೇ ಕಾರಣಕ್ಕೂ ತಂಡಕ್ಕೆ ಮರಳುವ ನಿರೀಕ್ಷೆ ಇಲ್ಲ.

    VIDEO | ಸಿಡ್ನಿ ಟೆಸ್ಟ್​ ಪಂದ್ಯದ ಡ್ರಿಂಕ್ಸ್ ಬ್ರೇಕ್​ನಲ್ಲಿ ದುರ್ಬುದ್ಧಿ ತೋರಿ ಸಿಕ್ಕಿಬಿದ್ದ ಸ್ಟೀವನ್​ ಸ್ಮಿತ್​

    ಗಂಡು ಮಗುವಿಗೆ ಜನ್ಮ ನೀಡಿದ ಕುಸ್ತಿ ತಾರೆ ಬಬಿತಾ ಪೋಗಟ್

    ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಬದುಕಿನ ಪುಸ್ತಕದಲ್ಲಿ ಏನೇನು ಬರೆಯುತ್ತಿದ್ದಾರೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts