More

  ಭದ್ರಾವತಿ, ಸಾಗರದಲ್ಲಿ ಬಿರುಸಿನ ಪ್ರಚಾರ

  ಭದ್ರಾವತಿ: ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಶನಿವಾರ ನೂರಾರು ಬೆಂಬಲಿಗರೊಂದಿಗೆ ನಗರದಲ್ಲಿ ಮತಯಾಚನೆ ಮಾಡಿದರು.

  ಅಂಡರ್‌ಬ್ರಿಡ್ಜ್‌ನಿಂದ ಬಿ.ಎಚ್.ರಸ್ತೆ, ಚನ್ನಗಿರಿ ರಸ್ತೆೆ, ರಂಗಪ್ಪವೃತ್ತದವರೆಗೂ ತೆರೆದ ವಾಹನದಲ್ಲಿ ಮತಯಾಚನೆ ಮಾಡಿದ ಅವರು, ಈ ಬಾರಿ ನನ್ನ ಗೆಲುವು ಖಚಿತವಾಗಿದ್ದು, ಮೋದಿ ಕೈಬಲ ಪಡಿಸುವುದು ನಿಶ್ಚಿತವಾಗಿದೆ. ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ ನನ್ನ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಇತ್ತು. ಆದರೆ ಈಗ ಗೆಲುವಿಗಾಗಿ ನನ್ನ ಹೋರಾಟವಾಗಿದೆ ಎಂದರು.
  ರಾಷ್ಟ್ರಭಕ್ತರ ಬಳಗದ ಎಂ.ಪ್ರಭಾಕರ್, ಬಿ.ಎಸ್.ನಾರಾಯಣಪ್ಪ. ಮಂಜುನಾಥ್, ಚಂದನ್‌ರಾವ್, ವಿಜಯ ಸಿದ್ದಾರ್ಥ, ಹೇಮಾವತಿ, ಶಾರದಮ್ಮ, ಸುರೇಶ್ ಇತರರಿದ್ದರು.
  ರೋಡ್ ಶೋ:
  ಸಾಗರದ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ, ಬಳಿಕ ನಗರದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ಪ್ರಮುಖರಾದ ತೀ.ನ.ಶ್ರೀನಿವಾಸ್, ಎಸ್.ವಿ.ಕೃಷ್ಣಮೂರ್ತಿ, ಎಸ್.ಎಲ್.ಮಂಜುನಾಥ್, ಕಸ್ತೂರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts