More

    ಸೀಮಾ-ಸಚಿನ್​ ಮದ್ವೆ ಫೋಟೋಗಳು ವೈರಲ್​: ಭಾರತದ ಪೌರತ್ವ ಕೋರಿ ರಾಷ್ಟ್ರಪತಿಗೆ ಅರ್ಜಿ

    ನವದೆಹಲಿ: ಪಬ್​ಜಿ ಲವರ್​ಗಾಗಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿರುವ ಪಾಕಿಸ್ತಾನ ಮೂಲದ ಸೀಮಾ ಹೈದರ್​ ನಡೆ ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ತನ್ನ ಪ್ರಿಯಕರ ಸಚಿನ್​ ಮೀನಾ ಜತೆ ಸೀಮಾ ಮದುವೆ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

    ಸೀಮಾ ನಡೆಯೇ ಅನುಮಾನ

    ದೆಹಲಿ ಸಮೀಪ ಇರುವ ಗ್ರೇಟರ್​ ನೋಯ್ಡಾದ ನಿವಾಸಿ ಸಚಿನ್​ ಮೀನಾಗಾಗಿ ಪಾಕಿಸ್ತಾನದ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದಾಳೆ. ಈಕೆಯ ಸ್ಪಷ್ಟ ಇಂಗ್ಲಿಷ್​, ಹಲವು ಪಬ್​ಜಿ ಖಾತೆಗಳು ಮತ್ತು ಆಕೆಯ ಚಿಕ್ಕಪ್ಪ ಪಾಕ್​ ಸೇನೆಯಲ್ಲಿರುವ ಸಂಗತಿ ಬಯಲಾಗಿದ್ದು, ನಾನಾ ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಇಷ್ಟೇ ಅಲ್ಲದೆ, ಆಕೆಯ ಸಹೋದರ ಸಹ ಪಾಕ್​ ಸೇನೆ ಸೇರಲಿದ್ದಾನೆ. ಈ ಹಿಂದೆ ಸಾಕಷ್ಟು ಭಾರತೀಯ ಯುವಕರನ್ನು ಸೀಮಾ ಸಂಪರ್ಕಿಸಲು ಯತ್ನಿಸಿರುವ ಸಂಗತಿ ಬಯಲಾಗಿದ್ದು, ಆಕೆಯ ಮೇಲೆ ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ ತಯಾರಿಗೆ ಕೈಹಾಕಿದ ಕಾಂಗ್ರೆಸ್: 28 ಕ್ಷೇತ್ರಗಳ ಚಿತ್ರಣ ಪಡೆಯಲು ಜವಾಬ್ದಾರಿ ಹಂಚಿಕೆ

    Seema 2

    ಕ್ಷಮಾಧಾನ ಅರ್ಜಿ

    ಸೀಮಾ ಪ್ರಕರಣವನ್ನು ನೋಯ್ಡಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ. ಹಲವು ಬಾರಿ ಸೀಮಾಳನ್ನು ವಿಚಾರಣೆ ಮಾಡಿದ್ದಾರೆ. ಇದರ ನಡುವೆ ಸೀಮಾ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದಾಳೆ. ಅಲ್ಲದೆ, ಭಾರತೀಯ ಪೌರತ್ವ ನೀಡುವಂತೆಯೂ ಕೇಳಿಕೊಂಡಿದ್ದಾಳೆ. ಸಚಿನ್​ ಜೊತೆ ಮದುವೆ ಆಗಿರುವ ಸಂಬಂಧ ಫೋಟೋಗಳನ್ನು ಸಹ ಅರ್ಜಿಯಲ್ಲಿ ಸೇರಿಸಿದ್ದಾಳೆ.

    ಒಂದೊಂದು ಫೋಟೋ ವಿಭಿನ್ನ

    ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಚಿನ್​ ಮತ್ತು ಸೀಮಾ ಪರಸ್ಪರ ಹಾರ ಬದಲಾಯಿಸಿಕೊಂಡಿರುವ ದೃಶ್ಯವಿದೆ. ಸೀಮಾ ಸೀರೆ ಹುಟ್ಟಿಕೊಂಡಿದ್ದರೆ, ಸಚಿನ್​ ಸ್ಯೂಟ್​ ಧರಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಸೀಮಾ, ಭಾರತೀಯ ಸಂಪ್ರದಾಯದಂತೆ ಆಶೀರ್ವಾದ ಪಡೆಯಲು ಸಚಿನ್​ ಪಾದವನ್ನು ಸ್ಪರ್ಶಿಸುತ್ತಿರುವ ದೃಶ್ಯವಿದೆ. ಮತ್ತೊಂದು ಫೋಟೋದಲ್ಲಿ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಸೇರಿ ಸಚಿನ್​ ಜತೆ ಗ್ರೂಪ್​ ಫೋಟೋ ತೆಗೆಸಿಕೊಂಡಿದ್ದಾಳೆ. ಇದಿಷ್ಟು ಫೋಟೋಗಳನ್ನು ರಾಷ್ಟ್ರಪತಿಗಳ ಮುಂದೆ ಸಲ್ಲಿಸಿದ್ದಾಳೆ.

    Seema 1

    ಏನಿದು ಪ್ರಕರಣ?

    30 ವರ್ಷದ ಸೀಮಾ ಮತ್ತು 22 ವರ್ಷದ ಸಚಿನ್​ ಮೀನಾ 2019ರಲ್ಲಿ ಕರೊನಾ ಸಂದರ್ಭದಲ್ಲಿ ಆನ್​ಲೈನ್​ ಗೇಮ್​ ಪಬ್​ಜಿ ಮುಖಾಂತರ ಪರಿಚಯವಾಗಿದ್ದಾಗಿ ಮತ್ತು ಈ ವರ್ಷದಲ್ಲಿ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ನೇಪಾಳದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಸೀಮಾಳನ್ನು ಮತ್ತು ಆಕೆಗೆ ಆಶ್ರಯ ಕೊಟ್ಟ ಆರೋಪದ ಮೇಲೆ ಸಚಿನ್​ ಮತ್ತು ಆತನ ತಂದೆಯನ್ನು ಜುಲೈ 4ರಂದು ಬಂಧಿಸಲಾಗಿತ್ತು. ಮೂವರಿಗೂ ಜಾಮೀನು ದೊರೆತ ಹಿನ್ನೆಲೆ ಜುಲೈ 7ರಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

    ಇದನ್ನೂ ಓದಿ: 8 ತಿಂಗಳಲ್ಲಿ 2 ಮಹಾ ಸಂಚು!; ತಪ್ಪಿದ ಸಂಭಾವ್ಯ ಉಗ್ರ ದಾಳಿಗಳು ಬೆಂಗಳೂರು, ಮಂಗಳೂರಿನಲ್ಲಿ ವಿಧ್ವಂಸಕ್ಕೆ ಪ್ಲಾನ್

    Seema 3

    ಪಾಕ್​ಗೆ ವಾಪಸ್​ ಕಳುಹಿಸಿ

    ಪಾಕಿಸ್ತಾನಕ್ಕೆ ಮರಳಲು ಸೀಮಾ ಹಿಂದೇಟು ಹಾಕುತ್ತಿದ್ದಾರೆ. ಸಚಿನ್​ ಜತೆಯೇ ಮುಂದಿನ ಜೀವನ ಕಳೆಯುವುದಾಗಿ ಹೇಳುತ್ತಿದ್ದಾಳೆ. ಆದರೆ, ಇದಕ್ಕೆ ಕೆಲವು ಹಿಂದು ಸಂಘಟನೆಗಳು ವಿರುದ್ಧವಾಗಿವೆ. ಆಕೆ ಪಾಕ್​ನ ಏಜೆಂಟ್​ ಎಂದು ಆರೋಪಿಸಿದ್ದಾರೆ. ಆಕೆ ಇಲ್ಲಿಯೇ ಇದ್ದರೆ ದೇಶದ ರಕ್ಷಣೆಗೆ ಅಪಾಯವಿದೆ. ಕೂಡಲೇ ಆಕೆಯನ್ನು ಪಾಕ್​ಗೆ ಕಳುಹಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಅತ್ತ ಪಾಕ್​ನಲ್ಲೂ ಸೀಮಾ ವಾಪಸಾತಿಗೆ ಆಗ್ರಹಗಳು ಕೇಳಿಬರುತ್ತಿವೆ. ಒಂದು ವೇಳೆ ಬರದಿದ್ದರೆ ಭಾರತದಲ್ಲಿ ದಾಳಿಗಳು ನಡೆಯಲಿವೆ ಎಂಬ ಬೆದರಿಕೆ ಸಹ ಹಾಕುತ್ತಿದ್ದಾರೆ.

    ಇಷ್ಟೆಲ್ಲ ಬೆಳವಣಿಗೆ ನಡುವೆ ಸೀಮಾ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    8 ತಿಂಗಳಲ್ಲಿ 2 ಮಹಾ ಸಂಚು!; ತಪ್ಪಿದ ಸಂಭಾವ್ಯ ಉಗ್ರ ದಾಳಿಗಳು ಬೆಂಗಳೂರು, ಮಂಗಳೂರಿನಲ್ಲಿ ವಿಧ್ವಂಸಕ್ಕೆ ಪ್ಲಾನ್

    500ನೇ ಪಂದ್ಯದಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ವಿರಾಟ್​ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts