More

    500ನೇ ಪಂದ್ಯದಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ವಿರಾಟ್​ ಕೊಹ್ಲಿ

    ಪೋರ್ಟ್​ ಆಫ್​​ ಸ್ಪೇನ್​: ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 76ನೇ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿದ್ದಾರೆ. ಆಲ್ರೌಂಡರ್​ ರವೀಂದ್ರ ಜಡೇಜಾ (61 ರನ್​, 152 ಎಸೆತ, 5 ಬೌಂಡರಿ) ಜತೆಗೂಡಿ ಭರ್ಜರಿ ಜತೆಯಾಟವಾಡಿದ ವಿರಾಟ್​ ಕೊಹ್ಲಿ (121 ರನ್​, 206 ಎಸೆತ, 11 ಬೌಂಡರಿ) ಭಾರತ ತಂಡ ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯ 2ನೇ ಹಾಗೂ ಅಂತಿಮ ಪಂದ್ಯದಲ್ಲಿ ಬೃಹತ್​ ಮೊತ್ತ ಪೇರಿಸಲು ನೆರವಾದರು. ಜತೆಗೆ ಹಲವು ದಾಖಲೆಗಳನ್ನೂ ಬರೆದರು.

    ಕ್ವೀನ್ಸ್​ ಪಾರ್ಕ್​ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶುಕ್ರವಾರವೂ ವಿಂಡೀಸ್​ ಬೌಲರ್​ಗಳಿಗೆ ಸವಾಲಾದ ಕೊಹ್ಲಿ&ಜಡೇಜಾ ಜೋಡಿ 5ನೇ ವಿಕೆಟ್​ 159 ರನ್​ ಜತೆಯಾಟವಾಡಿತು. ಇದೊಂದಿಗೆ ಭಾರತ ತಂಡ 2ನೇ ದಿನ ಭೋಜನ ವಿರಾಮದ ಬಳಿಕ 400 ಪ್ಲಸ್​ ಮೊತ್ತ ಪೇರಿಸಿದೆ.

    ರೋಹಿತ್​&ಜೈಸ್ವಾಲ್​ ಒದಗಿಸಿಕೊಟ್ಟ ಉತ್ತಮ ಆರಂಭದ ಬಳಿಕ ವಿಂಡೀಸ್​ ಬೌಲರ್​ಗಳಿಂದ ತಿರುಗೇಟು ಎದುರಿಸಿದ ಭಾರತ ತಂಡ ಮತ್ತೆ ಸುಸ್ಥಿತಿ ತಲುಪುವಲ್ಲಿ ಕೊಹ್ಲಿ&ಜಡೇಜಾ ಜೋಡಿ ಶ್ರಮಿಸಿತು. ಚಹಾ ವಿರಾಮದ ನಂತರದ 33 ಓವರ್​ಗಳಲ್ಲಿ ವಿಂಡೀಸ್​ ಬೌಲರ್​ಗಳಿಗೆ ಕಗ್ಗಂಟಾದ ಕೊಹ್ಲಿ ಮತ್ತು ಜಡೇಜಾ ಕ್ರಮವಾಗಿ 87 ಮತ್ತು 36 ರನ್​ಗಳೊಂದಿಗೆ ಮೊದಲ ದಿನದಾಟ ಮುಗಿಸಿದರು. 2ನೇ ದಿನದ 7ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರೆ, ಅದೇ ಓವರ್​ನಲ್ಲಿ ಅವಳಿ ರನ್​ ಕಸಿಯುವ ಮೂಲಕ ಜಡೇಜಾ ಅರ್ಧಶತಕ ಬಾರಿಸಿದರು. ಕೊಹ್ಲಿ ಸಿಂಗಲ್ಸ್​ ಕದಿಯಲು ಯತ್ನಿಸಿದಾಗ ಅಲ್ಜಾರಿ ಜೋಸೆಫ್​ ಅವರ ಡೈರೆಕ್ಟ್​ ಹಿಟ್​ನಿಂದಾಗಿ ಟೆಸ್ಟ್​ನಲ್ಲಿ 3ನೇ ಬಾರಿ ರನೌಟ್​ ಬಲೆಗೆ ಬಿದ್ದರು. ಕೆಲ ಓವರ್​ಗಳ ಬಳಿಕ ಜಡೇಜಾ ಕೂಡ ಪೆವಿಲಿಯನ್​ಗೆ ನಿರ್ಗಮಿಸಿದರು.

    1,680 ದಿನಗಳ ಬಳಿಕ ವಿದೇಶದಲ್ಲಿ ಶತಕ
    ವಿರಾಟ್​ ಕೊಹ್ಲಿ ಸುಮಾರು ನಾಲ್ಕೂವರೆ ವರ್ಷಗಳ ಬಳಿಕ ಅಂದರೆ ಭರ್ತಿ 1,680 ದಿನಗಳ ಬಳಿಕ ವಿದೇಶದಲ್ಲಿ ಟೆಸ್ಟ್​ ಶತಕ ಬಾರಿಸಿದ ಸಾಧನೆ ಮಾಡಿದರು. 2018ರ ಡಿಸೆಂಬರ್​ನಲ್ಲಿ ಆಸ್ಟ್ರೆಲಿಯಾದ ಪರ್ತ್​ನಲ್ಲಿ ಅವರ ಕೊನೆಯ ವಿದೇಶಿ ಟೆಸ್ಟ್​ ಶತಕ ದಾಖಲಾಗಿತ್ತು. ಉಪಖಂಡದ ಹೊರಗೆ ಒಟ್ಟಾರೆ ಗರಿಷ್ಠ 29 ಶತಕ ಸಿಡಿಸಿದ ಸಚಿನ್​ ಸಾಧನೆಯಿಂದ ಕೊಹ್ಲಿ ಈಗ ಕೇವಲ 1 ಶತಕ ಹಿಂದಿದ್ದಾರೆ. ವಿದೇಶಿ ಟೆಸ್ಟ್​ ಪಂದ್ಯದಲ್ಲಿ ಇದು ಅವರ 15ನೇ ಶತಕವಾಗಿದೆ.

    ಬ್ರಾಡ್ಮನ್​ ಸರಿಗಟ್ಟಿದ ಕೊಹ್ಲಿ
    ಟೆಸ್ಟ್​ ಕ್ರಿಕೆಟ್​ನಲ್ಲಿ 29ನೇ ಶತಕ ಸಿಡಿಸುವ ಮೂಲಕ ಕೊಹ್ಲಿ, ಆಸ್ಟ್ರೆಲಿಯಾದ ದಂತಕಥೆ ಡಾನ್​ ಬ್ರಾಡ್ಮನ್​ ಅವರ ಶತಕದ ದಾಖಲೆ ಸರಿಗಟ್ಟಿದರು. ಹಾಲಿ ಕ್ರಿಕೆಟಿಗರ ಪೈಕಿ, ಕೇನ್​ ವಿಲಿಯಮ್ಸನ್​ರನ್ನು (28) ಹಿಂದಿಕ್ಕಿದ ಕೊಹ್ಲಿ, ಸ್ಟೀವನ್​ ಸ್ಮಿತ್​ (32) ಮತ್ತು ಜೋ ರೂಟ್​ (30) ನಂತರದಲ್ಲಿದ್ದಾರೆ. ಭಾರತೀಯರ ಪೈಕಿ ಸಚಿನ್​ ತೆಂಡುಲ್ಕರ್​ (51), ರಾಹುಲ್​ ದ್ರಾವಿಡ್​ (36) ಮತ್ತು ಸುನೀಲ್​ ಗಾವಸ್ಕರ್​ (34), ಕೊಹ್ಲಿಗಿಂತ ಹೆಚ್ಚು ಟೆಸ್ಟ್​ ಶತಕ ಬಾರಿಸಿದ್ದಾರೆ.

    ರನ್​ ಗಳಿಕೆಯಲ್ಲಿ 5ನೇ ಸ್ಥಾನಕ್ಕೇರಿದ ಕೊಹ್ಲಿ
    ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ದಣ ಆಫ್ರಿಕಾದ ಜಾಕ್ಸ್​ ಕಾಲಿಸ್​ (25,534) ಅವರನ್ನು ಹಿಂದಿಕ್ಕುವ ಮೂಲಕ ವಿರಾಟ್​ ಕೊಹ್ಲಿ ಅಗ್ರ 5ರೊಳಗೆ ಪ್ರವೇಶ ಪಡೆದರು. ಮೊದಲ ದಿನ 74 ರನ್​ ಗಳಿಸಿದ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು. ಸಚಿನ್​ ತೆಂಡುಲ್ಕರ್​ (34,357), ಕುಮಾರ ಸಂಗಕ್ಕರ (28,016), ರಿಕಿ ಪಾಂಟಿಂಗ್​ (27,483) ಮತ್ತು ಮಹೇಲ ಜಯವರ್ಧನೆ (25,957) ಮೊದಲ 4 ಸ್ಥಾನದಲ್ಲಿದ್ದಾರೆ.

    ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದನಾ ಬರ್ತ್​ಡೇಗೆ ಬಾಂಗ್ಲಾದೇಶದಲ್ಲಿ ಸಪ್ರ್ರೈಸ್​ ನೀಡಿದ ಬಾಯ್​ಫ್ರೆಂಡ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts