More

    ಮಧುಮೇಹಿಗಳ ಗಾಯಗಳಿಗಾಗಿ ಹೊಸ ಔಷಧ ಕಂಡುಹಿಡಿದ ವಿಜ್ಞಾನಿಗಳು; ಈ ಜೆಲ್​ಗಿದೆ 3 ಪಟ್ಟು ಬೇಗ ಗುಣವಾಗಿಸುವ ಶಕ್ತಿ

    ನವದೆಹಲಿ: ಮಧುಮೇಹಿಗಳಿಗೆಂದೇ ವಿಜ್ಞಾನಿಗಳು ಹೊಸದೊಂದು ಜೆಲ್ ಕಂಡುಹಿಡಿದಿದ್ದು, ಇದು ಮಧುಮೇಹದಿಂದ ಬಳಲುತ್ತಿರುವವರ ಪಾಲಿಗೆ ವರದಾನ ರೀತಿ ಪರಿಣಮಿಸಲಿದೆ ಎನ್ನಲಾಗಿದೆ. ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್ (ಎನ್​ಯುಎಸ್​) ಸಂಶೋಧಕರು ಈ ಜೆಲ್​ ತಯಾರಿಸಿದ್ದಾರೆ.

    ಈ ಜೆಲ್ ಹಚ್ಚಿಕೊಳ್ಳುವುದರಿಂದ ಮಧುಮೇಹಿಗಳ ಗಾಯ ಮೂರು ಪಟ್ಟು ಬೇಗ ಗುಣವಾಗುತ್ತದೆ ಮತ್ತು ಗಾಯ ಮತ್ತೆ ಬಿಗಡಾಯಿಸುವ ಪರಿಸ್ಥಿತಿ ಇರುವುದಿಲ್ಲ. ಇದರಿಂದ ಅಂಗಚ್ಛೇದನದ ಅನಿವಾರ್ಯತೆ ಪ್ರಮಾಣವೂ ತಗ್ಗುತ್ತದೆ ಎಂದು ಎನ್​ಯುಎಸ್ ಹೇಳಿದೆ.

    ಈ ಜೆಲ್ ತ್ವಚೆಯ ಜೀವಕೋಶ ಹಾಗೂ ಕಾಂತೀಯ ಕಣಗಳನ್ನು ಹೊಂದಿದ್ದು, ಈ ಜೆಲ್ ಬ್ಯಾಂಡೇಜ್​ನೊಂದಿಗೆ ಬರಲಿದೆ. ಇದರಲ್ಲಿನ ಕಾಂತೀಯ ಕಣಗಳು ಗಾಯದ ಉಪಶಮನವನ್ನು ಪ್ರಚೋದಿಸುತ್ತವೆ.

    ಇದನ್ನೂ ಓದಿ: ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    ಈ ಕಾಂತೀಯ ಕಣಗಳ ಪ್ರಚೋದಕ ಗುಣ 1 ರಿಂದ 2 ಗಂಟೆಗಳ ಅವಧಿವರೆಗೆ ಇರುತ್ತದೆ. ಅಲ್ಲದೆ ಈ ಕಾಂತೀಯ ಕಣಗಳನ್ನು ಅಗತ್ಯಕ್ಕೆ ತಕ್ಕಂತೆ ಪ್ರಚೋದಿಸುವ ಸಲುವಾಗಿ ಒಂದು ವೈರ್​ಲೆಸ್​ ಕಾಂತೀಯ ಉಪಕರಣವನ್ನು ಕೂಡ ರೂಪಿಸಲಾಗಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಈ ಕುರಿತ ವಿವರ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಎಂಬ ಸೈಂಟಿಫಿಕ್ ಜರ್ನಲ್​ನಲ್ಲಿ ಪ್ರಕಟವಾಗಿದೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಕಾಂತೀಯ ಕಣಗಳೊಂದಿಗೆ ಇರುವ ತ್ವಚೆಯ ಜೀವಕೋಶಗಳು ಎರಡು ರೀತಿಯವಾಗಿದ್ದು, ಅದಕ್ಕೆ ಎಫ್​ಡಿಎ ಮಾನ್ಯತೆ ಕೂಡ ಇದೆ. ಈ ಜೆಲ್​ನಲ್ಲಿ ತ್ವಚೆಯ ದುರಸ್ತಿಗೆ ಅಗತ್ಯವಾಗಿರುವ ಕೆರಾಟಿನೊಸೈಟ್ಸ್​ ಮತ್ತು ಸಂಪರ್ಕಿಸುವ ಅಂಗಾಂಶಗಳನ್ನು ಮೂಡಿಸುವ ಫೈಬ್ರೊಬ್ಲಾಸ್ಟ್​ಗಳು ಇರುತ್ತವೆ ಎಂದು ಹೇಳಿದ್ದಾರೆ.

    ಚಡ್ಡಿ ಧರಿಸಿ ರಸ್ತೆ ಬದಿ ಕಾಣಿಸಿಕೊಂಡ ‘ರಜಿನಿಕಾಂತ್’!: ವಿಡಿಯೋ ವೈರಲ್; ಅಸಲಿ ವಿಷಯ ಏನು? ಇಲ್ಲಿದೆ ವಿವರ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts