ಪ್ರಧಾನಿ ಮೋದಿಗೆ ಆಪತ್ತಿದೆ ಎಂದು ಮತ್ತೆ ಮತ್ತೆ ಭವಿಷ್ಯ ನುಡಿಯುತ್ತಿರುವ ಜ್ಯೋತಿಷಿ!; ಭದ್ರತೆ ಹೆಚ್ಚಿಸಲಿಕ್ಕೂ ಸಲಹೆ

PM Modi (1)
Published on

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಪತ್ತು ಇದೆ ಎಂಬುದಾಗಿ ಜ್ಯೋತಿಷಿಯೊಬ್ಬರು ಮತ್ತೆ ಮತ್ತೆ ಭವಿಷ್ಯ ನುಡಿಯುತ್ತಿರುವುದು ಕಂಡುಬಂದಿದೆ. ಇದೀಗ ಇನ್ನೊಮ್ಮೆ ಆಪತ್ತಿನ ಕುರಿತು ಎಚ್ಚರಿಕೆ ನೀಡಿರುವ ಅವರು ಭದ್ರತೆ ಹೆಚ್ಚಿಸುವ ಸಲಹೆಯನ್ನೂ ನೀಡಿದ್ದಾರೆ.

ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಈ ಜ್ಯೋತಿಷಿ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಗೆ ಆಪತ್ತಿದೆ ಎಂದು ಎಕ್ಸ್​ನಲ್ಲಿನ ತಮ್ಮ ಖಾತೆಯಲ್ಲಿ ಅವರು ಹೇಳಿಕೊಂಡಿದ್ದರು.

‘ಪ್ರೀತಿಯ ಭಾರತದ ಪ್ರಧಾನಮಂತ್ರಿಯವರೇ.. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಬರಲಿವೆ, ನಿಮ್ಮ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನಿಮ್ಮ ಸಹಾಯಕನ ವೇಷದಲ್ಲಿರುವ ಕೆಲವರು ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಾರೆ ಮತ್ತು ನಿಮಗೆ ಹಾನಿ ಮಾಡಲು ಸಹ ಪ್ರಯತ್ನಿಸಬಹುದು. ಜಾಗರೂಕರಾಗಿರಿ..’ ಎಂದು ಅ. 9ರಂದು ಎಕ್ಸ್​ನಲ್ಲಿ ಹೇಳಿಕೊಂಡಿದ್ದರು.

ಮೋದಿಗೆ ಆಪತ್ತಿದೆ ಎಂದು ಅವರೇ ನಿನ್ನೆ ಮತ್ತೊಮ್ಮೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಕ್ಟೋಬರ್​ನಲ್ಲಿ ಎರಡು ಗ್ರಹಣಗಳ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರಿಗೆ ಇದು ದುರದೃಷ್ಟಕರ ಅವಧಿಯಾಗಿದೆ. ಈಗಿನಿಂದ ಮುಂದಿನ ಮಾರ್ಚ್ ವರೆಗೆ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರ ಭದ್ರತೆಯನ್ನು ಬಲಗೊಳಿಸಬೇಕು ಎಂದು ಅನಿರುದ್ಧ್​ ಭವಿಷ್ಯ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net