More

    ಜುಲೈ 1ಕ್ಕೆ ಶಾಲೆ ಆರಂಭ ಅನುಮಾನ? ಕ್ಲಾಸ್​ ಬೇಕಾ-ಬೇಡ್ವಾ ಪಾಲಕರೇ ನಿರ್ಧರಿಸ್ತಾರೆ..!

    ಬಾಗಲಕೋಟೆ: ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರದ ನಿರ್ಧಾರಿತ ದಿನಾಂಕ ಅಲ್ಲ. ಪಾಲಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​ ತಿಳಿಸಿದರು.

    ಮೊದಲು ಪಾಲಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಈ ಸಂಬಂಧ ಮೇ 31ರಂದು ಕೇಂದ್ರದಿಂದ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಜೂನ್ 10, 11, 12ರಂದು ಪಾಲಕರ ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

    ಇದನ್ನೂ ಓದಿರಿ ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿ ಸ್ಥಳಾಂತರಿಸಲು ಸಿಎಂ ಗಡುವು

    ಜುಲೈ 1ಕ್ಕೆ ಶಾಲೆ ಆರಂಭ ಎನ್ನುವುದು ಸರ್ಕಾರ ನಿರ್ಧರಿಸಿದ್ದಲ್ಲ. ಶಿಕ್ಷಣ ಇಲಾಖೆ ಯೋಚಿಸಿರುವ ದಿನಾಂಕ ಅಷ್ಟೆ. ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರ ಜತೆ ಸಂವಾದ ನಡೆಸಬೇಕು. ಜೂನ್ 15ರೊಳಗಾಗಿ ಪಾಲಕರು, ಪೋಷಕರು, ಎಸ್​ಡಿಎಂಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಸುರೇಶ್ ಕುಮಾರ್​ ತಿಳಿಸಿದರು

    ಇದನ್ನೂ ಓದಿರಿ ಗ್ರಾಪಂ ಚುನಾವಣೆ ಮುಂದೂಡಿಕೆಗೆ ಕಾಂಗ್ರೆಸ್ ವಿರೋಧ.. ಹೋರಾಟದ ಎಚ್ಚರಿಕೆ ಕೊಟ್ಟ ಸಿದ್ದು!

    ಶಾಲೆ ಆರಂಭಿಸಿದರೆ ಹೇಗೆ ಮಾಡಬೇಕು, ಮುಂದಿನ ತರಗತಿಗಳು, ಮಕ್ಕಳ ಆಟ, ವ್ಯಾಯಾಮ ಹೇಗೆ?.. ಇವುಗಳ ಕುರಿತು ಪಾಲಕರ ಅಭಿಪ್ರಾಯ ಪಡೆಯಲಾಗುವುದು. ಫ್ರೀ ಪ್ರೈಮರಿ ಆರಂಭ ಬೇಡ ಎನ್ನುವ ಅಭಿಪ್ರಾಯ ಇದೆ. ಕೇಂದ್ರದಿಂದ ಸಲಹೆ ಬಂದ ಬಳಿಕ ಶಾಲೆ ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.

    ಇದನ್ನೂ ಓದಿರಿ ‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts