More

    ಸೆಂಟ್​ ಬಳಸುವವರ ಬಳಿಯಿದೆ ವಿಶೇಷ ಶಕ್ತಿ; ಅದೇನು ಗೊತ್ತಾ?

    ವಾಷಿಂಗ್ಟನ್​: ಸೆಂಟ್​ ಬಳಕೆ ಮಾಡುವುದು ಅನೇಕರಿಗೆ ಇಷ್ಟದ ಸಂಗತಿಯಾದರೆ ಇನ್ನು ಕೆಲವರಿಗೆ ಅದೊಂದು ಹಿಂಸೆ. ಸೆಂಟ್​ನ ಸುವಾಸನೆ ಕೂಡ ತಲೆ ನೋವು ತರಿಸುತ್ತದೆ ಎಂದು ಸೆಂಟ್​ ಬಳಸುವವರಿಂದ ದೂರವೇ ಉಳಿದುಬಿಡುತ್ತಾರೆ. ಆದರೆ ಈ ಸೆಂಟ್​ ಬಳಸುವರ ಬಳಿ ಒಂದು ವಿಶೇಷ ಶಕ್ತಿ ಇರುತ್ತದೆ ಎನ್ನುವುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

    ಬೇರೆ ವ್ಯಕ್ತಿಗಳಿಗೆ ಹೋಲಿಸಿದರೆ ಸೆಂಟ್​ ಬಳಸುವವರಿಗೆ ಸಾಮಾನ್ಯವಾಗಿ ನೆನಪಿನ ಶಕ್ತಿ ಹೆಚ್ಚಿರುತ್ತದೆಯಂತೆ. ಈ ಸೆಂಟ್​ ಅಥವಾ ಯಾವುದೇ ವಾಸನೆ ಪ್ರಸ್ತುತ ಸನ್ನಿವೇಶ ಮತ್ತು ಮೆದುಳಿನ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೆರಿಕದ ಬೋಸ್ಟನ್​ ವಿಶ್ವವಿದ್ಯಾನಿಲಯ ನಡೆಸಿರುವ ಸಂಶೋಧನೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

    ನಮ್ಮ ಕಣ್ಣೆದುರು ನಡೆಯುವ ದೃಶ್ಯಗಳು ಮೊದಲು ಮೆದುಳಿನ ಹಿಪೊಕ್ಯಾಂಪಸ್​ ಎನ್ನುವಲ್ಲಿ ಶೇಖರಣೆಗೊಳ್ಳುತ್ತವೆ. ರಾತ್ರಿ ವೇಳೆ ನಿದ್ರೆ ಮಾಡುವಾಗ ಆ ನೆನಪು ಹಿಪೊಕ್ಯಾಂಪಸ್​ನಿಂದ ಮೆದುಳಿನ ಮುಂಭಾಗಕ್ಕೆ ಬರುತ್ತದೆ. ದಿನಕಳೆದಂತೆ ಹಿಪೊಕ್ಯಾಂಪಸ್​ನಲ್ಲಿರುವ ನೆನಪು ನಶಿಸಿಹೋಗುತ್ತದೆ.

    ಬೋಸ್ಟನ್​ ವಿವಿಯ ಸಂಶೋಧಕರು 20 ಇಲಿಗಳನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡಿದ್ದರು. 10 ಇಲಿಗಳನ್ನು ಬಾದಾಮಿ ವಾಸನೆಯಿರುವ ಕಂಟೈನರ್​ಗಳಲ್ಲಿಟ್ಟು ಶಾಕ್​ ನೀಡಿದ್ದರು. ಇನ್ನುಳಿದ 10 ಇಲಿಗಳನ್ನು ಯಾವುದೇ ವಾಸನೆಯಿಲ್ಲದ ಕಂಟೈನರ್​ಗಳಲ್ಲಿಟ್ಟು ಶಾಕ್​ ನೀಡಿದ್ದರು. ಇದಾದ 20 ದಿನಗಳ ನಂತರ ಆ ಇಲಿಗಳನ್ನು ಮತ್ತೆ ಶಾಕ್​ ನೀಡುವುದಕ್ಕೆ ಕಂಟೈನರ್​ನಲ್ಲಿ ಇಡಲಾಗಿದೆ. ಆಗ ನಡೆಸಿದ ವೈದ್ಯಕೀಯ ಪರೀಕ್ಷೆಯ ವರದಿಯ ಪ್ರಕಾರ ಬಾದಾಮಿ ವಾಸನೆಯ ಕಂಟೈನರ್​ಗಳಲ್ಲಿ ಶಾಕ್​​ ತೆಗೆದುಕೊಂಡ ಇಲಿಗಳಲ್ಲಿ 20 ದಿನಗಳ ಹಿಂದೆ ಶಾಕ್​ ತೆಗೆದುಕೊಂಡ ಭಯ ಉಳಿದುಕೊಂಡಿತ್ತು. ಆದರೆ ವಾಸನೆ ರಹಿತ ಕಂಟೈನರ್​ಗಳಲ್ಲಿ ಇದ್ದ ಇಲಿಗಳಿಗೆ ಶಾಕ್​ನ ನೆನಪೂ ಸಹ ಉಳಿದಿರಲಿಲ್ಲ. ಎಂದರೆ ಅವುಗಳ ಹಿಪೊಕ್ಯಾಂಪಸ್​ನಲ್ಲಿ ಆ ದಿನದ ನೆನಪು ಸಂಪೂರ್ಣವಾಗಿ ನಶಿಸಿಹೋಗಿತ್ತು.

    ಆದರೆ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ ಇಲಿಗಳು ಬಾದಾಮಿ ವಾಸನೆಯಲ್ಲಿ ಶಾಕ್​ ತೆಗೆದುಕೊಂಡಿದ್ದು ಮತ್ತೊಮ್ಮೆ ಅದೇ ವಾಸನೆಯಲ್ಲಿ ಅಂತದ್ದೇ ಶಾಕ್​ ಎದುರಾದಾಗ ಅವುಗಳಿಗೆ ಆ ನೆನಪು ಮರುಕಳಿಸಿದೆ. ಮುಮ್ಮೆದುಳಿನಿಂದ ಹಿಪೊಕ್ಯಾಂಪಸ್​ಗೆ ಆ ಬಾದಾಮಿ ವಾಸನೆ ಸೂಚನೆಯೊಂದನ್ನು ರವಾನೆ ಮಾಡುವಂತೆ ಮಾಡಿದೆ.

    ಈ ಸಂಶೋಧನೆಯನ್ನು ನಡೆಸಿರುವ ಸಂಶೋಧಕರು ತಮ್ಮ ಸಂಶೋಧನೆಯಿಂದ ಸಾಕಷ್ಟು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ. ಇದಿನ್ನೂ ಪ್ರಾರಂಭಿಕ ಹಂದತಲ್ಲಿದ್ದು ಇದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

    ಬೆಂಗಳೂರಿನಲ್ಲಿ ಮತ್ತಿಬ್ಬರಲ್ಲಿ ಕರೊನಾ ಸೋಂಕು ಧೃಡ; ಕಲಬುರಗಿಯಲ್ಲಿ ಆರಂಭವಾಗಲಿದೆ ಕರೊನಾ ಲ್ಯಾಬ್​

    ಇಟಲಿಯ ನಗರದ ಚಿತಾಗಾರದಲ್ಲಿ ದಿನದ 24 ಗಂಟೆಯೂ ಕೆಲಸ: ಪತ್ರಿಕೆಯ 10 ಪುಟಗಳಲ್ಲಿ ಶ್ರದ್ಧಾಂಜಲಿ ಜಾಹೀರಾತು- ಇದು ಕರೊನಾ ಎಫೆಕ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts