More

    ಯೋಗಾಭ್ಯಾಸದಿಂದ ನೆನಪಿನ ಶಕ್ತಿ ಹೆಚ್ಚಳ

    ಮಾನ್ವಿ: ವಿದ್ಯಾರ್ಥಿಗಳು ನಿತ್ಯ ಯೋಗ ಮಾಡುವುದರಿಂದ ಉತ್ತಮ ಆರೋಗ್ಯದ ಜತೆಗೆ ಅಭ್ಯಾಸ ಮಾಡಿದ ವಿಷಯಗಳು ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದು ಹಿರಿಯ ವಕೀಲ ಗುಮ್ಮಾ ಬಸವರಾಜ ಹೇಳಿದರು.

    ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿನಿಯರಿಗಾಗಿ ಯೋಗ ಸನ್ನಿಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೈಹಿಕ ಹಾಗೂ ಮಾನಸಿಕ ಸಧೃಡತೆಗೆ ಯೋಗ ಮಾಡಬೇಕು. ಯೋಗ ಗುರು ಅನ್ನದಾನ್ಯಯಸ್ವಾಮಿ ಬಹಳಷ್ಟು ಜನರಿಗೆ ಯೋಗ ಕಲಿಸಿಕೊಡುತ್ತಿದ್ದಾರೆ. ಇವರ ಕಾರ್ಯ ಶ್ಲಾಘನೀಯವಾಗಿದೆ. ಯೋಗದಿಂದ ಮಧುಮೇಹ, ರಕ್ತದೊತ್ತಡ ನಿಯಂತ್ರಣ ಸಾಧ್ಯ ಎಂದು ತಿಳಿಸಿದರು.

    ಪ್ರಾಚಾರ್ಯ ಡಾ.ರವೀಂದ್ರ ಬಂಡಿ, ಮುಖ್ಯ ಶಿಕ್ಷಕ ಹಂಪಣ್ಣ ಚಂಡೂರು, ಶಿಕ್ಷಕ ಮಹಾದೇವಪ್ಪ, ಉಪನ್ಯಾಸಕರಾದ ರೇವಣಸಿದ್ದಯ್ಯ ಹಿರೇಮಠ, ಸತ್ಯನಾರಾಯಣ ಭಂಡಾರಿ, ಅತಿಥಿ ಶಿಕ್ಷಕ ಲಕ್ಷ್ಮಣ್‌ರಾವ್ ಕಪಗಲ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts