More

    ತೆಲಂಗಾಣದಲ್ಲಿ ಖಾಸಗಿ ಕಂಪೆನಿಯ 248 ಕೋಟಿ ರೂ.ಹಗರಣ ಬಯಲು

    ಹೈದರಾಬಾದ್​: ತೆಲಂಗಾಣದ ಸಾಹಿತಿ ಇನ್ಫ್ರಾಟೆಕ್ ವೆಂಚರ್ಸ್ ಕಂಪನಿಯಿಂದ ಸುಮಾರು 248.27 ಕೋಟಿ ರೂ. ಹಗರಣ ನಡೆದಿರುವುದು ಬೆಳಕಿದೆ ಬಂದಿದೆ. ಈ ಕಂಪನಿ ವಿರುದ್ಧ ಇದುವರೆಗೆ 50ಕ್ಕೂ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ‘ನೀವೇ ಅಶ್ಲೀಲ’ ಜನ ಎಂದಿದ್ದೇಕೆ ಕಂಗನಾ ರನೌತ್? 

    ಸಾಹಿತಿ ಇನ್ಫ್ರಾಟೆಕ್ ವೆಂಚರ್ಸ್ ಐಷಾರಾಮಿ ಫ್ಲ್ಯಾಟ್​ ಮತ್ತು ವಿಲ್ಲಾಗಳನ್ನು ನೀಡಲು ಮುಂಗಡ ಹಣಕ್ಕಾಗಿ ಜನರಿಂದ ದೊಡ್ಡ ಮೊತ್ತದ ಹಣವನ್ನು ಸಂಗ್ರಹ ಮಾಡಿತ್ತು. 9 ಯೋಜನೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡಿದೆ.

    ಸಾಹಿತಿ ಸ್ವಾದ್​ ಹೆಸರಿನಲ್ಲಿ 65 ಕೋಟಿ ರೂ., ಸಿಸ್ಟಾ ಅಡೋಬ್​ 79 ಕೋಟಿ ರೂ., ಸಾಹಿತಿ ಗ್ರೀನ್​ ಹೆಸರಿನಲ್ಲಿ 40 ಕೋಟಿ ರೂ., ಸಾಹಿತಿ ಸಿತಾರ ಹೆಸರಿನಲ್ಲಿ ಸುಮಾರು 135 ಕೋಟಿ ರೂ., ಸಾಹಿತಿ ಮಹಾತ್​ ಹೆಸರಿನಲ್ಲಿ 44 ಕೋಟಿ ರೂ., ಆನಂದ್ ಪರ್ಚೂನ್ ಹೆಸರಿನಲ್ಲಿ 45 ಕೋಟಿ ರೂ., ಸಾಹಿತಿ ಕೃತಿ ಹೆಸರಿನಲ್ಲಿ 16 ಕೋಟಿ ರೂ., ಸಾಹಿತಿ ಸುದೀಕ್ಷಾ ಹೆಸರಿನಲ್ಲಿ 22 ಕೋಟಿ ರೂ., ರುಬೀಕಾನ್​ ಸಾಹಿತಿ ಹೆಸರಿನಲ್ಲಿ 7 ಕೋಟಿ ರೂ. ಸಂಗ್ರಹಿಸಿ ವಂಚಿಸಲಾಗಿದೆ ಎಂದು ವರದಿಯಾಗಿದೆ.

    ವಸೂಲಿ ಮಾಡಿದ ಅಪಾರ ಹಣವನ್ನು ವೈಯಕ್ತಿಕ ಜೀವನಕ್ಕೆ ಬಳಕೆ ಮಾಡಿಕೊಂಡಿರುವುದು, ಮತ್ತು ಜಮೀನು ಖರೀದಿ ಮಾಡಿ ರಿಯಲ್​ಎಸ್ಟೇಟ್​ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿದ್ದರು ಎಂದು ತಿಳಿದು ಬಂದಿದೆ.

    ಫ್ಲ್ಯಾಟ್‌ಗಳು, ವಿಲ್ಲಾಗಳನ್ನು ವಿತರಿಸುವುದಾಗಿ ಭರವಸೆ ನೀಡಿ ಗ್ರಾಹಕರಿಂದ 248.27 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ಹೇಳಲಾಗಿತ್ತು. ಇನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಾಹಿತಿ ಇನ್‌ಫ್ರಾಟೆಕ್ ವೆಂಚರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ 161.50 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿದ್ದನ್ನು ಸ್ಮರಿಸಬಹುದು.

    ಪ್ರಧಾನಿ ಮೋದಿ ನಿಂದಿಸಿದ ಮೂವರು ಮಾಲ್ಡೀವ್ಸ್ ಸಚಿವರು ಸಸ್ಪೆಂಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts