More

    ಮಧ್ಯಪ್ರದೇಶ ರಾಜ್ಯಪಾಲರ ಫ್ಲೋರ್​ಟೆಸ್ಟ್ ನಿರ್ಧಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್ ಹೇಳಿದ್ದೇನು?

    ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರ ಸರ್ಕಾರ ಬಂಡಾಯದ ಬೇಗುದಿಗೆ ಸಿಲುಕಿ ಬಹುಮತ ಕಳೆದುಕೊಂಡ ವೇಳೆ ರಾಜ್ಯಪಾಲ ಲಾಲ್ಜಿ ಟಂಡನ್​ ಅವರ ನಿರ್ಣಯವನ್ನು ಸುಪ್ರೀಂ ಕೋರ್ಟ್​ ಸೋಮವಾರ ಎತ್ತಿಹಿಡಿದಿದೆ.

    ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠವು, ಅಂದಿನ ಕಮಲನಾಥ ಸರ್ಕಾರಕ್ಕೆ ರಾಜ್ಯಪಾಲರು ಅಧಿವೇಶನ ನಡೆಸುವಂತೆ ಸೂಚಿಸಬಹುದಿತ್ತೇ ಹೊರತು, ಫ್ಲೋರ್​ ಟೆಸ್ಟ್ ನಡೆಸುವಂತೆ ಸೂಚಿಸಬಾರದಿತ್ತು. ಅದು ಅವರ ಅಧಿಕಾರದ ವ್ಯಾಪ್ತಿಯಲ್ಲಿ ಇಲ್ಲ ಎಂಬ ಅಂಶವುಳ್ಳ ದಾವೆಯ ಅರ್ಜಿಯನ್ನು ಸೋಮವಾರ ತಳ್ಳಿಹಾಕಿದೆ. ಈ ನಿರ್ಣಯವನ್ನು ಸಮರ್ಥಿಸಿಕೊಳ್ಳಲು ಕೋರ್ಟ್​, 1994ರ ಎಸ್​.ಆರ್​.ಬೊಮ್ಮಾಯಿ ಪ್ರಕರಣದಲ್ಲಿ ಒಂಭತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ನೀಡಿದ ತೀರ್ಪನ್ನು ಉಲ್ಲೇಖಿಸಿದೆ. ಬಹುಮತ ಸಾಬೀತು ಪಡಿಸಿ ಎಂದು ಹೇಳುವ ಹಕ್ಕು ರಾಜ್ಯಪಾಲರಿಗೆ ಇದ್ದೇ ಇದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿತು.

    ಮಾರ್ಚ್ 19ರಂದು ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಾಗಿ ಕಂಡುಬಂದ ಕಾರಣ, ಫ್ಲೋರ್​ಟೆಸ್ಟ್​ ನಡೆಸುವಂತೆ ಸೂಚಿಸಲಾಗಿತ್ತು. ಅಲ್ಲದೇ, ಅಧಿವೇಶನವನ್ನು ಕೇವಲ ಫ್ಲೋರ್​​ಟೆಸ್ಟ್​ ನಡೆಸುವ ಸಲುವಾಗಿಯೆ ನಡೆಸಬೇಕು ಎಂಬ ನಿರ್ದೇಶನವನ್ನೂ ನೀಡಿದ್ದೆವು ಎಂದು ನ್ಯಾಯಪೀಠ ನೆನಪಿಸಿಕೊಂಡಿದೆ.

    ಸುಪ್ರೀಂ ಕೋರ್ಟ್​ ಮಾರ್ಚ್ 19ರಂದು ಅಂದಿನ ಅಸೆಂಬ್ಲಿ ಸ್ಪೀಕರ್​ ಎನ್​.ಪಿ. ಪ್ರಜಾಪತಿ ಅವರಿಗೆ ಮಾರನೇ ದಿನವೇ ಫ್ಲೋರ್​ಟೆಸ್ಟ್ ನಡೆಸುವಂತೆ ಸೂಚಿಸಿತ್ತು. ಅಲ್ಲದೆ, ಅದಕ್ಕೆ ಸಂಬಂಧಿಸಿದ ವಿಸ್ತೃತ ತೀರ್ಪನ್ನು ಕೋರ್ಟ್​ ಮಾರನೇ ದಿನವೇ ನೀಡಿತ್ತು. ಕೋರ್ಟ್ ಆದೇಶದ ಬೆನ್ನಿಗೇ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 15 ತಿಂಳಗಾಗಿದ್ದವು. ಈ ಬೆಳವಣಿಗೆಯ ಬೆನ್ನಲ್ಲೇ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಶಿವರಾಜ್ ಸಿಂಗ್ ಚೌಹಾಣ್​ ಮುಖ್ಯಮಂತ್ರಿಯಾದ ಬಳಿಕ ಈ ರಾಜಕೀಯಕ್ಕೆ ಸಂಬಂಧಿಸಿ ಕೋರ್ಟ್ ಇದುವರೆಗೆ 8 ಮಧ್ಯಂತರ ತೀರ್ಪುಗಳನ್ನು ನೀಡಿದೆ. (ಏಜೆನ್ಸೀಸ್)

    ಕ್ವಾರಂಟೈನ್​ ಕೇಂದ್ರದಲ್ಲಿ ಕೊನೆಯುಸಿರಳೆಯಿತು 10 ತಿಂಗಳ ಹಸುಗೂಸು: ಉತ್ತರ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ

    ಒಂದೇ ಒಂದು ಆ್ಯಪಲ್​ ನಿಂದಾಯಿತು ಭಾರಿ ಅನಾಹುತ!- ಡಿಎನ್​ಎ ಪರೀಕ್ಷೆ ಮಾಡಿ ಅದನ್ನು ಹಿಡಿದವರನ್ನು ಪತ್ತೆ ಹಚ್ಚಿದ ಪೊಲೀಸರು- ಮುಂದೇನಾಯಿತು?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts