More

    ಬಡ್ತಿ ಮೀಸಲಾತಿ ಪ್ರಕರಣ: ಕೇಂದ್ರ ಸರ್ಕಾರ ಸಿಂಪಲ್ಲಾಗಿ ಲೋಕಸಭೆಯಲ್ಲಿ ಹೇಳಿದ್ದೇನು?: ಕಾಂಗ್ರೆಸ್​ ಸದಸ್ಯರು ಸಭಾತ್ಯಾಗ ಮಾಡಿದ್ದೇಕೆ?

    ನವದೆಹಲಿ: ಉತ್ತರಾಖಂಡ ರಾಜ್ಯ ಸರ್ಕಾರದ ಹುದ್ದೆಗಳ ಬಡ್ತಿ ಮೀಸಲಾತಿ ಪ್ರಕರಣ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸೋಮವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತ್ತು. ಮೀಸಲಾತಿ ವ್ಯವಸ್ಥೆಯನ್ನು ಡಿಫೆಂಡ್ ಮಾಡಿಕೊಳ್ಳುವಳ್ಳಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಿಪಕ್ಷ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದ್ದರು.

    ಇದಕ್ಕೆ ಪ್ರತಿಯಾಗಿ ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ ಅವರು, ಈ ಬಗ್ಗೆ ಕೇಂದ್ರ ಸರ್ಕಾರ ಅಪರಾಹ್ನ ಹೇಳಿಕೆ ನೀಡಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್​ಚಂದ್ ಗೆಹ್ಲೋಟ್ ಹೇಳಿಕೆ ನೀಡುತ್ತಾರೆ ಎಂದು ಹೇಳಿದ್ದರು. ಇಷ್ಟಾಗ್ಯೂ, ಪ್ರತಿಪಕ್ಷದವರ ವಾಗ್ದಾಳಿ ಮುಂದುವರಿದಿತ್ತು.

    ಇದನ್ನೂ ಓದಿ: ಮೀಸಲಾತಿ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ: ಲೋಕಸಭೆಯಲ್ಲಿ ವಿಪಕ್ಷಗಳಿಂದ ತೀವ್ರ ಟೀಕೆ

    ಲೋಕಸಭೆಯಲ್ಲಿ ಅಪರಾಹ್ನ ಈ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್​ಚಂದ್ ಗೆಹ್ಲೋಟ್​, ಉತ್ತರಾಖಂಡ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಲ್ಲಿ ಕೇಂದ್ರ ಸರ್ಕಾರ ಪಾರ್ಟಿ ಆಗಿರಲಿಲ್ಲ. ಅಲ್ಲದೆ, ನೇಮಕಾತಿಯಲ್ಲಿ ಮೀಸಲು ಒದಗಿಸುವುದಕ್ಕೆ ರಾಜ್ಯ ಸರ್ಕಾರಗಳು ಹೊಣೆ ಅಲ್ಲ ಎಂಬುದನ್ನು ತೀರ್ಪು ಹೇಳಿರುವಂಥದ್ದು.

    ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಬಾರದು ಎಂದು ಕೇಳಿಕೊಳ್ಳಲಾಗಿತ್ತು. ಉತ್ತರಾಖಂಡದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ 2012ರಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ವಿಚಾರವನ್ನು ಗರಿಷ್ಠ ಆದ್ಯತೆಯ ವಿಷಯವಾಗಿ ಕೇಂದ್ರ ಸರ್ಕಾರ ಪರಿಗಣಿಸಿದೆ. ಸರಿಯಾದ ನಿರ್ಣಯವನ್ನೇ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಚಿವರು ಲೋಕಸಭೆಗೆ ಸ್ಪಷ್ಟಪಡಿಸಿದರು.

    ಸಚಿವರ ಹೇಳಿಕೆ ಬೆನ್ನಲ್ಲೇ , ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರು ಲೋಕಸಭೆ ಕಲಾಪ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. (ಏಜೆನ್ಸೀಸ್)

    ಉದ್ಯೋಗ ಮತ್ತು ಬಡ್ತಿಗಳಲ್ಲಿ ಮೀಸಲಾತಿ ಒದಗಿಸುವುದು ರಾಜ್ಯ ಸರ್ಕಾರದ ಹೊಣೆಯಲ್ಲ: ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts