More

  ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಪಾತ್ರ ಹಿರಿದು

  ಮದ್ದೂರು: ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲದೆ ರಾಜ್ಯ ಸರ್ಕಾರಗಳು ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

  ತಾಲೂಕಿನ ಹೂತಗೆರೆ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೇಂದ್ರದಿಂದ ನಮಗೆ ಯಾವುದೇ ಅನುದಾನ ಬೇಡ ಎಂದು ನಿರ್ಣಯ ಮಾಡಿ ಕಳುಹಿಸಲಿ. ಅಲ್ಲದೆ ಕೇಂದ್ರದ ಯಾವುದೇ ಅನುದಾನ ಪಡೆಯದೆ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

  ಪ್ರಧಾನಿ ನರೇಂದ್ರಮೋದಿ ಅವರು ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ನಾವು ಕೊಟ್ಟಿದ್ದು ಎಂದು ಕಾಂಗ್ರೆಸ್ ಬೊಗಳೆ ಬಿಡುತ್ತಿದ್ದು, ಇದು ಜನರ ದಿಕ್ಕು ತಪ್ಪಿಸುವ ಕೆಲಸ ಎಂದು ಆರೋಪ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts