More

    ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

    ಮದ್ದೂರು: ತಾಲೂಕಿನಲ್ಲಿ ಏ.26ರಂದು ನಡೆಯುವ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ತಿಳಿಸಿದರು. ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಗುರುವಾರ ಚುನಾವಣಾ ಸಂಬಂಧ ನಡೆಯುತ್ತಿದ್ದ ಅಂತಿಮ ಸಿದ್ಧತೆಗಳನ್ನು ಪರಿಶೀಲನೆ ಮಾಡಿ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 2,15,745 ಮತದಾರರಿದ್ದು, ಇದರಲ್ಲಿ ಗಂಡು 1,04,280, ಹೆಣ್ಣು 1,11,443 ಹಾಗೂ ಇತರ 22 ಮತದಾರರಿದ್ದಾರೆ.

    ಪಟ್ಟಣದಲ್ಲಿ 24 ಮತಗಟ್ಟೆಗಳು, ಗ್ರಾಮಾಂತರ ಪ್ರದೇಶದಲ್ಲಿ 230 ಸೇರಿ ಒಟ್ಟು 254 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಿಂಕ್ ಮತಗಟ್ಟೆಗಳು 5, ಎತ್ನಿಕ್ 2, ಯುವ ಮತಗಟ್ಟೆ 2, ಅಂಗವಿಕಲ ಮತಗಟ್ಟೆಗಳನ್ನೂ ಸ್ಥಾಪಿಸಲಾಗಿದೆ ಎಂದರು.

    ಸಾಮಾನ್ಯ ಮತಗಟ್ಟೆಗಳು 187, ಸೂಕ್ಷ್ಮ ಮತಗಟ್ಟೆಗಳು 67, ಅತಿಸೂಕ್ಷ್ಮ ಮತಗಟ್ಟೆ 4, ವೆಬ್ ಕಾಸ್ಟಿಂಗ್ ಮತಗಟ್ಟೆ 167 ನಿರ್ಮಿಸಲಾಗಿದೆ ಎಂದು ವಿವರಿಸಿದರು.

    254 ನಿಯೋಜಿತ ಅಧ್ಯಕ್ಷಾಧಿಕಾರಿಗಳು, 254 ಸಹಾಯಕ ಅಧ್ಯಕ್ಷಾಧಿಕಾರಿಗಳು, 254 ಪೋಲಿಂಗ್ ಅಧಿಕಾರಿಗಳು ಹಾಗೂ 58 ಮೀಸಲು ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

    37 ಬಸ್ ಮಾರ್ಗಗಳು, 6 ಟೆಂಪೋ ಮಾರ್ಗಗಳು, 11 ಜೀಪ್ ಮಾರ್ಗಗಳು, 2 ಮಿನಿ ಬಸ್‌ಗಳು ಸೇರಿ ಒಟ್ಟು 56 ಮಾರ್ಗಗಳನ್ನು ರೂಪಿಸಲಾಗಿದೆ. ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾ ಅಧಿಕಾರಿಗಳಿಗೆ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಮತದಾನ ಶಾಂತಿ, ಸುವ್ಯವಸ್ಥೆಯಿಂದ ನಡೆಯುವ ಉದ್ದೇಶದಿಂದ 1 ಡಿವೈಎಸ್ಪಿ, 3 ಸಿಪಿಐ, 9 ಪಿಎಸ್‌ಐ ಒಳಗೊಂಡ 400 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ಬಂದು ಮತ ಚಲಾಯಿಸಲು ನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts