More

    ತವರು ನೆಲದ ಪ್ರೀತಿ ಎಂದಿಗೂ ಮರೆಯಲಾಗದು

    ಕಡೂರು: ವ್ಯಕ್ತಿ ಎಷ್ಟೇ ಉನ್ನತ ಸ್ಥಾನ ಪಡೆದರೂ ತವರು ನೆಲದ ಪ್ರೀತಿಯ ಅಭಿಮಾನ ಎಂದಿಗೂ ಮರೆಯಲಾಗದು ಎಂದು ರಾಜ್ಯ ಪರಿಸರ ಮತ್ತು ಮೌಲ್ಯಮಾಪನಾ ಪ್ರಾಧಿಕಾರದ ಅಧ್ಯಕ್ಷ ಬಿ.ಗುರುಪ್ರಸಾದ್ ಹೇಳಿದರು.
    ಗದ್ಲೇಹಳ್ಳಿಯ ಶ್ರೀ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಶ್ರೀಬಯಲು ಬಸವೇಶ್ವರ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಶಿಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ನಮ್ಮ ಕಾರ್ಯವೈಖರಿಯನ್ನು ಗುರುತಿಸಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಹುದ್ದೆಯನ್ನು ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಲಾಗುತ್ತದೆ. ಪ್ರಾಧಿಕಾರ ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗದೆ ಇದೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದಾದ ಪ್ರಾಧಿಕಾರವಾಗಿದ್ದು. ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುವ ಗಾಳಿ, ನೀರು ಮಣ್ಣು ,ಮರ ಗಿಡಗಳು ಪ್ರಾಧಿಕಾರದ ವ್ಯಾಪ್ತಿಗೆ ಬರಲಿದೆ ಎಂದರು.
    ಕೇಂದ್ರ ಸರ್ಕಾರ ದೊಡ್ಡ ಜವಬ್ದಾರಿ ನೀಡಿದೆ. ಗಣಿಗಾರಿಕೆಯಿಂದ ಪರಿಸರದ ಹಾನಿ, ದೊಡ್ಡ ಕಟ್ಟಡಗಳ ನಿರ್ಮಾಣ, ಕೈಗಾರಿಕೆ ಪ್ರಾರಂಭಿಸುವ ಮುನ್ನ ಪ್ರಾಧಿಕಾರದ ಅನುಮತಿ ಅಗತ್ಯ. ದೊಡ್ಡ ಕೈಗಾರಿಕೆಯಿಂದ ಮನುಷ್ಯ ಮತ್ತು ಪರಿಸರದ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ಪರಿಶೀಲಿಸಿದ ನಂತರ ಅನುಮತಿ ನೀಡಲಾಗುವುದು. ಯಾವುದೇ ವ್ಯಕ್ತಿ ಪರಿಸರ ನಾಶ ಮಾಡಿದರೆ ಆ ವ್ಯಕ್ತಿಯೇ ಜವಬ್ದಾರಿಯಾಗಲಿದ್ದಾನೆ. ಇದು ಸುಪ್ರಿಂಕೋರ್ಟ್‌ನ ಆದೇಶವಾಗಿದೆ. ಯಾವುದೇ ವ್ಯಕ್ತಿಗೆ ಮಣ್ಣನ್ನು ಹಾಳುಮಾಡುವ ಹಕ್ಕು ಇರುವುದಿಲ್ಲ ಎಂದು ತಿಳಿಸಿದರು.
    ಹಿರಿಯ ಮುಖಂಡರಾದ ಎಸ್.ವಿ.ಉಮಾಪತಿ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ತಾಲೂಕಿಗೆ ಸಂದ ಗೌರವವಾಗಿದೆ ಎಂದರು.
    ಟ್ರಸ್ಟ್‌ನ ಉಪಾಧ್ಯಕ್ಷ ಶೇಖರಪ್ಪ, ಕಾರ್ಯದರ್ಶಿ ಕೆ.ಬಿ.ಬಸವರಾಜ್, ಜಗದೀಶ್, ವಕೀಲ ರಾಜು, ಎಸ್.ವಿ.ನಾಗರಾಜ್, ಕುಶುಕುಮಾರ್, ನೊಳಂಬ ಲಿಂಗಾಯಿತ ಸಂಘದ ರಾಜ್ಯ ನಿರ್ದೇಶಕ ಬಿ.ಓಂಕಾರ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts