More

    ಮೇ 9, 10ರಂದು UNCCD COP15 ಅಧಿವೇಶನದಲ್ಲಿ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಸದ್ಗುರು ಭಾಷಣ

    ನವದೆಹಲಿ: ಈಶ ಫೌಂಡೇಶನ್ ಸ್ಥಾಪಕರು ಹಾಗೂ 100 ದಿನಗಳ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿರುವ ಸದ್ಗುರು ಜಗ್ಗಿ ವಾಸುದೇವ್ ಅವರು UNCCD (ಮರುಭೂಮೀಕರಣ ಎದುರಿಸುವ ವಿಶ್ವಸಂಸ್ಥೆಯ ಸಮಾವೇಶ) ಕಾನ್ಫರೆನ್ಸ್ ಆಫ್ ಪಾರ್ಟೀಸ್ (COP15) ಹದಿನೈದನೇ ಅಧಿವೇಶನದಲ್ಲಿ 195 ದೇಶಗಳ ಮುಖಂಡರನ್ನು ಉದ್ದೇಶಿಸಿ ಪ್ರಮುಖ ಸ್ಪೀಕರ್ ಆಗಿ ಮಾತನಾಡಲಿದ್ದಾರೆ.

    ಈ ಅಧಿವೇಶನವು ಮೇ 9ರಿಂದ 20 ರವರೆಗೆ ಐವರಿ ಕೋಸ್ಟ್​, ಅಬಿಡ್ಜನ್ ನಗರದಲ್ಲಿ ನಡೆಯಲಿದೆ. ಅಧಿವೇಶನದ ವಿಷಯ -“ಭೂಮಿ. ಬದುಕು. ಪರಂಪರೆ: ಬರಗಾಲದಿಂದ ಸಮೃದ್ಧಿಯವರೆಗೆ “.

    ಮೇ 9, 10ರಂದು UNCCD COP15 ಅಧಿವೇಶನದಲ್ಲಿ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಸದ್ಗುರು ಭಾಷಣ

    ಮೇ ಒಂಬತ್ತು ಮತ್ತು ಹತ್ತರಂದು ಸದ್ಗುರು ಅವರು ರಾಜಕೀಯ ಮುಖಂಡರೊಂದಿಗೆ ಅವರವರ ದೇಶಗಳಲ್ಲಿ ಮಣ್ಣನ್ನು ಉಳಿಸಲು ನೀತಿ ಸುಧಾರಣೆಯ ಬಗ್ಗೆ ಮಾತನಾಡಲಿದ್ದಾರೆ. ಸದಸ್ಯ ರಾಷ್ಟ್ರಗಳು ಭೂಮಿಯ ಅವನತಿ ಮತ್ತು ಮಣ್ಣಿನ ಅಳಿವನ್ನು ಸುಧಾರಿಸುವ ಕ್ರಮಗಳನ್ನು ಕೈಗೊಳ್ಳಲು ಪ್ರಭಾವ ಬೀರಬೇಕೆಂಬ ನಿರೀಕ್ಷೆಯನ್ನು ಈ COP15 ಅಧಿವೇಶನ ಹೊಂದಿದೆ.

    ಪ್ರಸ್ತುತ ಮಣ್ಣು ಉಳಿಸಿ ಅಭಿಯಾನದ ಸಲುವಾಗಿ ಯೂರೋಪ್, ಮಧ್ಯ ಏಷ್ಯಾ, ಮತ್ತು ಮಿಡಲ್ ಈಸ್ಟಿನ ದೇಶಗಳಲ್ಲಿ ನೂರು ದಿನದ 30,000 ಕಿಲೋಮೀಟರುಗಳ ಪಯಣದಲ್ಲಿ ಏಕಾಂಗಿಯಾಗಿ ಸದ್ಗುರು ತೊಡಗಿಕೊಂಡಿದ್ದಾರೆ. ಜಾಗತಿಕ ಮುಖಂಡರು, ವಿಜ್ಞಾನಿಗಳು, ಮಣ್ಣಿನ ತಜ್ಞರು ಮತ್ತು ಉಳಿದ ಮಧ್ಯಸ್ಥಗಾರರನ್ನು ಭೇಟಿಯಾಗಿ ಮಣ್ಣನ್ನು ಉಳಿಸಲು ತುರ್ತು ನೀತಿ ಚಾಲಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸದ್ಗುರು ಒತ್ತಾಯ ಮಾಡಲಿದ್ದಾರೆ.

    ಮರುಭೂಮೀಕರಣದಿಂದ 2045 ಇಸವಿಯವರೆಗೆ ಆಹಾರ ಉತ್ಪಾದನೆಯಲ್ಲಿ ಶೇಕಡ 40ರಷ್ಟು ಇಳಿಕೆ ಆಗಲಿದೆ ಎಂದು UNFAO ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಅಲ್ಲಿಯವರೆಗೆ ಜಗತ್ತಿನ ಜನಸಂಖ್ಯೆ 9 ಬಿಲಿಯನ್ ಆಗಲಿದೆ. UNCCDಯ ಪ್ರಕಾರ, ಒಂದು ವೇಳೆ ಇದೇ ಪ್ರಮಾಣದಲ್ಲಿ ಭೂಮಿಯ ಅವನತಿ ನಡೆಯುತ್ತಿದ್ದರೆ, ಭೂಮಿಯ ಶೇಕಡ 90ರಷ್ಟು ಭಾಗ 2050 ಇಸವಿಯವರೆಗೆ ಮರುಭೂಮಿ ಆಗುವ ಸಾಧ್ಯತೆ ಇದೆ. ಅಂದರೆ ಇಂದಿನಿಂದ ಮೂವತ್ತು ವರ್ಷಕ್ಕಿಂತ ಕಮ್ಮಿ ಸಮಯದಲ್ಲಿ ಮರುಭೂಮಿಯ ಸಾಧ್ಯತೆ ಇದೆ.

    ಮೇ 9, 10ರಂದು UNCCD COP15 ಅಧಿವೇಶನದಲ್ಲಿ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಸದ್ಗುರು ಭಾಷಣ

    ಮಣ್ಣಿನ ಅಳಿವಿನಿಂದ ಆಗುವ ಬೃಹತ್ ಪರಿಣಾಮವೆಂದರೆ ಜಗದುದ್ದಕ್ಕು ಆಹಾರ ಮತ್ತು ನೀರಿನ ಕೊರತೆ, ಹೆಚ್ಚಾಗುವ ಹವಾಮಾನ ವೈಪರಿತ್ಯದ ತೀವ್ರತೆ ಮತ್ತು ಆವರ್ತನಗಳು ಹಾಗು ಹಿಂದೆಂದೂ ಕಂಡಿಲ್ಲದ ಸಾಮೂಹಿಕ ವಲಸೆಗಳು. ಈ ದುಷ್ಪರಿಣಾಮಗಳಿಂದ ಜಗತ್ತಿನಲ್ಲಿ ಬದುಕುಳಿಯುವಿಕೆಯ ಸಲುವಾಗಿ ಆಂತರಿಕ ಕಲಹಗಳು ಹೆಚ್ಚಾಗಬಹುದು.

    ಮಾರ್ಚ್ 21ರಿಂದ ಲಂಡನ್ ನಗರದಿಂದ ಸದ್ಗುರು ಪ್ರಯಾಣವನ್ನು ಶುರು ಮಾಡಿದರು. ಮಣ್ಣನ್ನು ಉಳಿಸಿ ಅಭಿಯಾನಕ್ಕೆ ಜಗತ್ತಿನಾದ್ಯಂತ ಜನರು ಆಸಕ್ತಿ ಹಾಗೂ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಜಗತ್ತಿನ ಮುಖಂಡರು, ಪರಿಸರ ಸಂಸ್ಥೆಗಳು ಮತ್ತು ಬಹುತೇಕ UN ಶಾಖೆಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿವೆ. ಸುಮಾರು 70 ದೇಶಗಳ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಅವರವರ ದೇಶಗಳಲ್ಲಿ ಮಣ್ಣನ್ನು ಉಳಿಸಲು ಪಣ ತೊಟ್ಟಿದ್ದಾರೆ. ಕೆಲವರು MOUಗಳಿಗೆ ಸಹಿ ಹಾಕಿದ್ದಾರೆ.

    ಕೃಷಿ ಭೂಮಿಗಳಲ್ಲಿ ಕನಿಷ್ಠ 3-6% ಸಾವಯವ ಅಂಶವಿರಬೇಕು ಎಂಬ ನೀತಿಯನ್ನು ದೇಶಗಳು ತರಬೇಕು ಎಂಬುದೇ ಮಣ್ಣನ್ನು ಉಳಿಸಿ ಅಭಿಯಾನದ ಮುಖ್ಯ ಉದ್ದೇಶ. ಇದರಿಂದ ಜಗತ್ತಿನಾದ್ಯಂತ ಆಹಾರ ಮತ್ತು ನೀರಿನ ಭದ್ರತೆ, ಹವಾಮಾನ ಬದಲಾವಣೆಯ ದುಷ್ಪರಿಣಾಮದ ಇಳಿಕೆ ಮತ್ತು ಜೀವಗಳ ಅಳಿವನ್ನು ನಿಲ್ಲಿಸಿ ಪರಿಸರದ ಸಂರಕ್ಷಣೆ ಆಗುವುದು.

    ನೂರು ದಿನಗಳ ಮಣ್ಣು ಉಳಿಸಿ ಪಯಣದ 44ನೇ ದಿನದಂದು ಜಾರ್ಡನ್ ತಲುಪಿದ ಸದ್ಗುರು

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಜತೆ ರೊಮೇನಿಯಾ ಕೃಷಿ ಸಚಿವಾಲಯ ಒಪ್ಪಂದ

    UNCCD ನಲ್ಲಿ ಸದ್ಗುರು: ಮಣ್ಣು ಒಂದು ಸಂಪನ್ಮೂಲವಲ್ಲ, ಅದು ನಮ್ಮ ಜೀವನದ ಮೂಲ…

    ಪ್ಯಾರಿಸ್​ನಲ್ಲಿ ಸದ್ಗುರು ಜತೆ ವಿಜ್ಞಾನಿಗಳ ಸಂವಾದ; ಮಣ್ಣು ರಕ್ಷಣೆ, ಹವಾಮಾನ ಬದಲಾವಣೆ ಬಗ್ಗೆ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts