More

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಜತೆ ರೊಮೇನಿಯಾ ಕೃಷಿ ಸಚಿವಾಲಯ ಒಪ್ಪಂದ

    ರೊಮೇನಿಯಾ: ಈಶ ಫೌಂಡೇಷನ್​ನ ಸದ್ಗುರು ಅವರು ಮಣ್ಣು ರಕ್ಷಿಸಿ ಅಭಿಯಾನಕ್ಕಾಗಿ ರೊಮೇನಿಯಾಗೆ ತಲುಪಿದ್ದು, ಅಲ್ಲಿನ ರಾಜಧಾನಿಯ ಬುಚರೆಸ್ಟ್​ನಲ್ಲಿ ಅವರಿಗೆ ಡ್ಯಾಮಿಯನ್​ ಡ್ರಾಗಿಚಿ ಅವರ ಕಚೇರಿಯೊಂದಿಗೆ ಅದ್ಭುತ ಸ್ವಾಗತ ಲಭಿಸಿದೆ.

    ರೊಮೇನಿಯಾದಲ್ಲಿನ ಭಾರತೀಯ ರಾಯಭಾರಿ ರಾಹುಲ್ ಶ್ರೀವತ್ಸ ಮಾತನಾಡಿ, ಮಣ್ಣಿನ ಅಳಿವಿನ ಅಪಾಯಗಳ ಕುರಿತು ಎಚ್ಚರಿಕೆಯ ವಿಷಯಗಳನ್ನು ಹಂಚಿಕೊಂಡರು. ನಾನು ಮಣ್ಣಿನ ರಕ್ಷಣೆ ಬಗ್ಗೆ 30 ವರ್ಷಗಳಿಂದ ಮಾತನಾಡುತ್ತಿದ್ದು, ಪ್ರತಿಯೊಬ್ಬರೂ ನಿಮ್ಮದು ಅದ್ಭುತ ಕೆಲಸ ಎನ್ನುತ್ತಾರೆ ಮತ್ತು ನಂತರ ನಿದ್ರೆ ಮಾಡುತ್ತಾರೆ ಎಂದ ಸದ್ಗುರು, ನಂತರ ಜನರು ಜಾಗೃತರಾಗಬೇಕಿದ್ದರೆ ಬಹುಶಃ ನಾನು ನನ್ನ ಜೀವನವನ್ನೇ ಮುಡಿಪಾಗಿಡಬೇಕು ಎಂದು ಯೋಚಿಸಿದೆ ಎಂದರು.

    ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿ ನೀವೆಲ್ಲ ದನಿ ಎತ್ತಬೇಕಾಗಿದೆ. ಹಾಗಂತ ಪ್ರತಿಭಟನೆ, ಸಿಟ್ಟು, ಚಳವಳಿಯ ಅಥವಾ ಇನ್ಯಾರದೇ ವಿರುದ್ಧದ ದನಿ ಎತ್ತಬೇಕಾಗಿಲ್ಲ. ಬದಲಿಗೆ ನಿಮ್ಮದೇ ಹಾಗೂ ನಿಮ್ಮ ಸುತ್ತಲಿನ ಇತರರ ಜೀವನದ ಮೇಲಿನ ಪ್ರೀತಿಯಿಂದ ಮತ್ತು ಮುಂದಿನ ಪೀಳಿಗೆ ಮೇಲಿನ ಕಾಳಜಿಯಿಂದ ನೀವೆಲ್ಲ ಮಣ್ಣು ರಕ್ಷಣೆ ಬಗ್ಗೆ ಮಾತನಾಡಬೇಕಿದೆ ಎಂದು ಸದ್ಗುರು ಹೇಳಿದರು.

    ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಜತೆ ರೊಮೇನಿಯಾ ಕೃಷಿ ಸಚಿವಾಲಯ ಒಪ್ಪಂದ

    ಇದೇ ಸಂದರ್ಭದಲ್ಲಿ ಸದ್ಗುರು ಅವರು ರೊಮೇನಿಯಾದ ಕೃಷಿ ಸಚಿವ ಎಡ್ರಿಯನ್​ ಲೊನಟ್ ಚೆಸ್ನೌಯ್ಯು ಅವರೊಂದಿಗೆ ಭೇಟಿಯಾಗಿದ್ದು, ಮಣ್ಣು ರಕ್ಷಣೆ ಅಭಿಯಾನದ ಕುರಿತು ಮಾಹಿತಿ ಹಂಚಿಕೊಂಡರು. ಬಳಿಕ ಅಲ್ಲಿನ ಕೃಷಿ ಸಚಿವಾಲಯ ಮತ್ತು ಮಣ್ಣು ರಕ್ಷಿಸಿ ಅಭಿಯಾನದ ಜತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

    1.5 ಕೋಟಿ ರೂ. ದುರ್ಬಳಕೆ ಮಾಡಿಕೊಂಡು ಪರಾರಿಯಾದ ಬ್ಯಾಂಕ್​ ಮ್ಯಾನೇಜರ್​!

    ಈ ಎರಡು ನಂಬರ್​ಗಳಿಂದ ಕರೆ-ಮೆಸೇಜ್​ ಬಂದರೆ ಪ್ರತಿಕ್ರಿಯಿಸಬೇಡಿ ಎಂದ ಎಸ್​ಬಿಐ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts