More

    ನೂರು ದಿನಗಳ ಮಣ್ಣು ಉಳಿಸಿ ಪಯಣದ 44ನೇ ದಿನದಂದು ಜಾರ್ಡನ್ ತಲುಪಿದ ಸದ್ಗುರು

    ಅಮ್ಮಾನ್​: ನೂರು ದಿನಗಳ “ಮಣ್ಣಿಗಾಗಿ ಪ್ರಯಾಣ”ದ ಅಂಗವಾಗಿ, 44ನೇ ದಿನವಾದ ಇಂದು ಸದ್ಗುರು ಜಗ್ಗಿ ವಾಸುದೇವ್​ ಅವರು ಮಧ್ಯ ಪ್ರಾಚ್ಯವನ್ನು ತಲುಪಿ, ಸುಂದರ ದೇಶ ಜಾರ್ಡನ್ ಪ್ರವೇಶಿಸಿದ್ದಾರೆ. ವಿಶ್ವದ ಅತ್ಯಂತ ಶುಷ್ಕ ದೇಶಗಳಲ್ಲಿ ಒಂದಾದ ಜಾರ್ಡನ್​ನಲ್ಲಿ, ಅಭಿಯಾನದ ಚಲನಗತಿಯನ್ನು ಇನ್ನಷ್ಟು ತೀವ್ರಗೊಳಿಸಲು ಸದ್ಗುರುಗಳು ಅಲ್ಲಿನ ನಾಯಕರನ್ನು ಮತ್ತು ನಾಗರಿಕರನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ

    ಮುಂದಿನ ದಿನಗಳಲ್ಲಿ ಸದ್ಗುರು ಸೌದಿ ಅರೇಬಿಯಾ, ಯುಎಇ, ಬಹರೇನ್ ಮತ್ತು ಮಸ್ಕಟ್​ಗೆ ಭೇಟಿ ನೀಡಿ ಅಲ್ಲಿನ ನಾಗರೀಕರು, ನಾಯಕರು ಮತ್ತು ನಿರ್ಣಾಯಕರನ್ನು ಉದ್ದೇಶಿಸಿ, ಕೆಳಮಟ್ಟಕ್ಕಿಳಿಯುತ್ತಿರುವ ನಮ್ಮ ಭೂಮಿಯ ಕಡೆ ತುರ್ತಾಗಿ ಗಮನ ಹರಿಸುವಂತೆ ಚರ್ಚಿಸಲಿದ್ದಾರೆ.

    ನೂರು ದಿನಗಳ ಮಣ್ಣು ಉಳಿಸಿ ಪಯಣದ 44ನೇ ದಿನದಂದು ಜಾರ್ಡನ್ ತಲುಪಿದ ಸದ್ಗುರು

    ಅಕಾಬಾದ ಮೂಲಕ ಜಾರ್ಡನ್ ಪ್ರವೇಶಿಸಿದ ಸದ್ಗುರುಗಳು ಜಾರ್ಡನಿನ ಭಾರತೀಯ ರಾಯಭಾರಿಯಾದ ಮಾನ್ಯ ಅನ್ವರ್ ಹಲೀಮ್ ಮತ್ತು ಭಾರತೀಯ ರಾಯಭಾರ ಕಚೇರಿಯಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದರು.

    ವಿಶ್ವದ ಅತ್ಯಂತ ಶುಷ್ಕ ದೇಶಗಳಲ್ಲಿ ಒಂದಾದ ಜಾರ್ಡನ್, ಈಗಾಗಲೇ ದೊಡ್ಡ ಪ್ರಮಾಣದ ಮಣ್ಣಿನ ಅವನತಿಯ ಪರಿಣಾಮಗಳೊಡನೆ ಹರಸಾಹಸ ಪಡುತ್ತಿದೆ. ವಿಶ್ವಸಂಸ್ಥೆಯ ಮರುಭೂಮೀಕರಣ ಸಂಸ್ಥೆ, ತನ್ನ ಇತ್ತೀಚಿನ ಗ್ಲೋಬಲ್ ಲ್ಯಾಂಡ್ ಔಟ್ ಲುಕ್ 2 ರಿಪೋರ್ಟಿನಲ್ಲಿ, ಹವಾಮಾನ ಬದಲಾವಣೆ ಹೆಚ್ಚಿದಂತೆ ಮತ್ತು ಕೃಷಿ ಭೂಮಿಯ ನಿರ್ವಹಣೆಯ ಅಭ್ಯಾಸಗಳು ಕಳಪೆಯಾಗಿ ಮುಂದುವರೆಯುತ್ತಾ ಹೋದಂತೆ, ಆಹಾರ ಪೂರೈಕೆಯಲ್ಲಿ ತೊಂದರೆಗಳು, ಬಲವಂತದ ವಲಸೆ, ನೀರಿನ ಅಭಾವ ಮತ್ತು ಜೀವ ಸಂಕುಲದ ಉಳಿವಿಕೆಯ ಮೇಲೆ ಹೆಚ್ಚಿದ ಒತ್ತಡ ತೀವ್ರವಾಗುತ್ತಾ ಹೋಗುತ್ತವೆ ಎಂದು ಎಚ್ಚರಿಕೆ ನೀಡಿದೆ. 2030ರಷ್ಟರಲ್ಲಿ 700 ದಶ ಕೋಟಿ ಜನರು ಬರಗಾಲದ ಕಾರಣದಿಂದ ಸ್ಥಳಾಂತರಗೊಳ್ಳಬೇಕಾಗಬಹುದು ಎಂದು ಎಚ್ಚರಿಸಿದೆ

    ನೂರು ದಿನಗಳ ಮಣ್ಣು ಉಳಿಸಿ ಪಯಣದ 44ನೇ ದಿನದಂದು ಜಾರ್ಡನ್ ತಲುಪಿದ ಸದ್ಗುರು

    ವಿಷಯ ಎಷ್ಟು ಆತಂಕಕಾರಿಯಾಗಿದೆ ಎಂಬುದು ಈ ಎಚ್ಚರಿಕೆ ಸಂದೇಶದಿಂದ ತಿಳಿಯುತ್ತದೆ. ಹಾಗೇ, ಜಾರ್ಡನ್ ಅಂಥ ದೇಶದಲ್ಲಿ ಇದನ್ನು ಹಿಮ್ಮುಖವಾಗಿಸಲು, ಪ್ರಜೆಗಳು ಮತ್ತು ಸರ್ಕಾರಗಳು ಎಷ್ಟು ಧೃಡ ಸಂಕಲ್ಪ ಮಾಡಬೇಕಾಗುತ್ತದೆ ಎಂದೂ ತೋರಿಸುತ್ತದೆ. ಜಾರ್ಡನ್ನಿನ ರಾಜಧಾನಿ ಅಮ್ಮನ್ ಅಲ್ಲಿ ಸದ್ಗುರು ಅವರು ಅಲ್ಲಿನ ನಾಯಕರು ಮತ್ತು ನಾಗರಿಕರು ಅಭಿಯಾನದ ಚಲನಗತಿಯನ್ನು ತೀವ್ರಗೊಳಿಸಲೆಂದು ಭೇಟಿ ಮಾಡಲಿದ್ದಾರೆ.

    ಯೂರೋಪಿನ ಪ್ರಯಾಣ ಭಾಗದಲ್ಲಿ ಆಲಿಕಲ್ಲುಗಳು, ಬಲವಾದ ಗಾಳಿ, ಹಿಮ, ಮಳೆ ಮತ್ತು ಉಪ ಶೂನ್ಯ ಕೊರೆವ ತಾಪಮಾನಗಳನ್ನು ಸದ್ಗುರು ಎದುರಿಸಿದರೆ, ಮಧ್ಯ ಪ್ರಾಚಿ ಪ್ರಯಾಣ ಭಾಗ ಬೇರೆ ರೀತಿಯ ಭೂ ಪ್ರದೇಶವಾಗಿದ್ದು ತನ್ನದೇ ಸವಾಲುಗಳನ್ನು ಒಡ್ಡುತ್ತಿವೆ. ಸದ್ಗುರು ಅದ್ಭುತವಾದ “ಗುಲಾಬಿ ಕೆಂಪು ನಗರ” (ರೋಸ್ ರೆಡ್ ಸಿಟಿ ) ಪೆಟ್ರಾ ಪ್ರವೇಶಿಸಿದಾಗ ಬೀಸಿದ ಮರಳು ಬಿರುಗಾಳಿ ಕೂಡ ಮಣ್ಣು ಉಳಿಸುವ ಅವರ ಅವಿರತ ಪ್ರಯತ್ನವನ್ನು ತಡೆಯಲಾಗಲಿಲ್ಲ.

    ನೂರು ದಿನಗಳ ಮಣ್ಣು ಉಳಿಸಿ ಪಯಣದ 44ನೇ ದಿನದಂದು ಜಾರ್ಡನ್ ತಲುಪಿದ ಸದ್ಗುರು

    ತುಂಬಿದ ಗ್ರಾಮ ಸಭೆಯಲ್ಲಿ ಸರ್ಕಾರಿ ಅಧಿಕಾರಿಗೆ ಚಪ್ಪಲಿಯಲ್ಲಿ ಬಾರಿಸಿದ ಗ್ರಾ.ಪಂ ಉಪಾಧ್ಯಕ್ಷೆಗೆ ಮರುಕ್ಷಣವೇ ಶಾಕ್!​

    ನಟ ಮಹೇಶ್​ ಬಾಬುಗೆ ಕಪಾಳ ಮೋಕ್ಷ ಮಾಡಿ ಕ್ಷಮೆಯಾಚಿಸಿದ ಕೀರ್ತಿ ಸುರೇಶ್​! ನಡೆದಿದ್ದೇನು? ಇಲ್ಲಿದೆ ಸ್ಫೋಟಕ ಮಾಹಿತಿ

    ಸುಳ್ಳು ಮಾಹಿತಿ ನೀಡಿದ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಿದ ಚಾಮರಾಜನಗರದ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts