More

    ಅಕ್ರಮ ಹಣ ವರ್ಗಾವಣೆ; ಎಎಪಿ ನಾಯಕ ಸತ್ಯೇಂದರ್​ ಜೈನ್​ಗೆ ಜಾಮೀನು ನಿರಾಕರಣೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಮಾಜಿ ಸಚಿವ, ಎಎಪಿ ನಾಯಕ ಸತ್ಯೇಂದರ್​ ಜೈನ್​ಗೆ ದೆಹಲಿ ಹೈಕೋರ್ಟ್​​ ಜಾಮೀನು ನಿರಾಕರಿಸಿದೆ.

    ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್​ ಕುಮಾರ್​ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ಇತರೆ ಆರೋಪಿಗಳಾದ ವೈಭವ್​ ಜೈನ್​ ಮತ್ತು ಅಂಕುಶ್​ ಜೈನ್​ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

    ಸತ್ಯೇಂದರ್​ ಜೈನ್​ ಪರ ವಕೀಲರು ತಮ್ಮ ಕಕ್ಷಿದಾರರು ತನಿಖೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ಧಾರೆ. ಜೊತೆಗೆ ಅವರ ಆದಾಯವನ್ನು ತಪ್ಪಾಗಿ ನಮೂದಿಸಲಾಗಿದ್ದು ಈ ಹಿನ್ನಲೆಯಲ್ಲಿ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.

    ಇದನ್ನೂ ಓದಿ: ಮುಸ್ಲಿಮರಿಗೆ ಪ್ರಶಸ್ತಿಕೊಡಲ್ಲ ಎಂದುಕೊಂಡಿದ್ದೆ, ಪ್ರಧಾನಿ ನನ್ನ ಅಭಿಪ್ರಾಯ ಬದಲಿಸಿದರು: ಪದ್ಮಶ್ರೀ ಪ್ರಶಸ್ತಿ ವಿಜೇತ

    ಆರೋಪಿ ಸ್ಥಾನದಲ್ಲಿರುವ ಸತ್ಯೇಂದರ್​ ಜೈನ್​ ಅವರು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು ಒಂದು ವೇಳೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದಲ್ಲಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ. ಆದ ಕಾರಣ ಅವರಿಗೆ ಜಾಮೀನು ನೀಡಬಾರದು ಎಂದು ED ಪರ ವಕೀಲರು ಔಆದ ಮಂಡಿಸಿದ್ದರು.

    ಮೇ 30,2022ರಂದು ಸತ್ಯೇಂದರ್​ ಜೈನ್​ ಒಡೆತನದ ಕಂಪನಿಗಳಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಎಎಪಿ ನಾಯಕನನ್ನು ವಶಕ್ಕೆ ಪಡೆದಿತ್ತು,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts