More

  ಸಂಸ್ಕೃತ ಪೋಷಣೆಯಲ್ಲಿ ಶಿವಾನಂದಾಶ್ರಮ ಸದಾ ಸಿದ್ಧ

  ಕಂಪ್ಲಿ: ಸಾಹಿತ್ಯ, ಸಂಸ್ಕೃತ ಮತ್ತು ಪುರಾಣ ಪ್ರವಚನಗಳನ್ನು ಪೋಷಿಸುವಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮ ಸದಾ ಮುಂಚೂಣಿಯಲ್ಲಿದೆ ಎಂದು ಗೊಗ್ಗ ಬಸಯ್ಯ ಮಹಾದೇವಮ್ಮ ಸ್ಮಾರಕ ಮಂಗಳಭವನದ ಪ್ರಮುಖ ಗೊಗ್ಗ ಕಾರ್ತೀಕ್ ಹೇಳಿದರು.

  ಇದನ್ನೂ ಓದಿ: ಯುವ ಜನಾಂಗವು ಸಾಸಂಸ್ಕೃತಿಕವಾಗಿ ತೊಡಗಿಸಿಕೊಂಡರೆ ಬದುಕುವ ಕಲೆ ಕರಗತ – ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅಭಿಮತ

  ಇಲ್ಲಿನ ಗುರುಮಠದಲ್ಲಿ ಭಾನುವಾರ ಲಿಂ.ಓದ್ಸೋ ಕರಿಬಸಯ್ಯನವರ 61ನೇ ಪುಣ್ಯಸ್ಮರಣಾರ್ಥ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

  ಜವುಕ ವೀರೇಶಸ್ವಾಮಿ ಹಿರೇಮಠ ಹಾರ‌್ಮೋನಿಯಂ ನುಡಿಸುವ ಜತೆಗೆ ಶಾಸ್ತ್ರೀಯ ಸಂಗೀತ, ವಚನಗಾಯನ, ದಾಸರ ಪದಗಳು, ತತ್ವಪದಗಳನ್ನು ಹಾಡಿದರು. ಗಂಗಾವತಿಯ ಮಹ್ಮದ್ ರಿಜ್ವಾನ್ ತಬಲಾ ಸಾತ್ ನೀಡಿದರು.

  ಪ್ರಮುಖರಾದ ಟಿ.ಎಚ್.ಎಂ.ಗುರುಮೂರ್ತಿ, ಅರವಿ ಬಸವನಗೌಡ, ಕೆ.ಎಂ.ಚಂದ್ರಶೇಖರ ಶಾಸ್ತ್ರಿ, ಎಚ್.ಎಂ.ಜಗದೀಶ, ವಿಶ್ವನಾಥಶಾಸ್ತ್ರಿ, ಯೋಗರಾಜಾಚಾರ್, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಸದಸ್ಯೆಯರಾದ ವಾಲಿಶಾರದಮ್ಮ, ಕಲ್ಗುಡಿ ಬಸಂತಮ್ಮ, ಹಂಪಮ್ಮ, ಎಚ್.ಎಂ.ಶಾಂತಮ್ಮ, ಕೋರಿಶರಣಮ್ಮ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts