More

    ಸಂಸ್ಕೃತ ಭಾಷೆ ವಿಶ್ವವ್ಯಾಪಿ

    • ಧಾರವಾಡ: ಸಂಸ್ಕೃತ ವಿಶ್ವದ ಅತ್ಯಂತ ಸರಳ ಭಾಷೆ. ಎಲ್ಲರಿಗೂ ಸಂಸ್ಕೃತ ಭಾಷೆಯನ್ನು ತಲುಪಿಸುವಲ್ಲಿ ಸಂಸ್ಕೃತ ಭಾರತಿ ಸಂಘಟನೆ ಕಾರ್ಯೋನ್ಮುಖವಾಗಿದೆ. ಸಂಸ್ಕೃತ ಭಾಷೆ ವಿಶ್ವವ್ಯಾಪಿಯÁಗುತ್ತಿದೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಡಾ. ಎಚ್.ಆರ್. ವಿಶ್ವಾಸ ಹೇಳಿದರು.
      ನಗರದ ಸೃಜನಾ ರಂಗಮAದಿರದಲ್ಲಿ ಸಂಸ್ಕೃತ ಭಾರತಿಯಿಂದ ಶನಿವಾರ ಆಯೋಜಿಸಿದ್ದ ಸಂಸ್ಕೃತಧಾರಾ ಸಮ್ಮೇಳನದ ಉದ್ಘಾಟನಾ ಸಮಾರÀಂಭದಲ್ಲಿ ಅವರು ಮÁತನಾಡಿದರು.
      ೪೦ ವರ್ಷ ಮೊದಲು ಸಂಸ್ಕೃತ ಭಾಷೆಯ ಸ್ಥಿತಿ ಗಂಭೀರವಾಗಿತ್ತು. ಸಂಸ್ಕೃತ ಕಾರ್ಯಕ್ರಮ ಎಂದರೆ ಬೆರಳೆಣಿಕೆಯ ಜನ ಇರುತ್ತಿದ್ದರು. ೧೯೮೦ರ ನಂತರ ಸಂಸ್ಕೃತ ಭಾಷೆಯನ್ನು ಜನರಿಗೆ ತಲುಪಿಸಲು ಜನಾರ್ದನ ಹೆಗಡೆ, ಚ.ಮೂ. ಕೃಷ್ಣಶಾಸ್ತಿç ಮುಂತಾದವರು ಸಂಭಾಷಣಾ ಶಿಬಿರ ಆರಂಭಿಸಿದರು. ಅದು ಬಹುಬೇಗ ಜನಪ್ರಿಯವಾಯಿತು. ಕರ್ನಾಟಕದಲ್ಲಿ ಆರಂಭವಾದ ಈ ಸಂಘಟನೆ ಕೇವಲ ಭಾರತ ಅಲ್ಲದೆ, ದುಬೈ, ಅಮೆರಿಕ ಸೇರಿ ೪೦ಕ್ಕೂ ಅಽಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
      ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮÁತನಾಡಿ, ಸಂಸ್ಕೃತದ ಸೊಗಡು ಅನನ್ಯವಾದುದು. ಪ್ರತಿಯೊಬ್ಬರೂ ಸಂಸ್ಕೃತದಲ್ಲಿ ಮÁತನಾಡುವುದು ಕಾರ್ಯಕ್ರಮದ ಉದ್ದೇಶ. ನಮ್ಮ ಎಲ್ಲ ಜ್ಞಾನಗಳು ಸಂಸ್ಕತದಲ್ಲಿವೆ. ಸಂಸ್ಕೃತ ಕಲಿತರೆ ಮÁತ್ರ ಸಾಲದು, ಅದನ್ನು ನಿತ್ಯ ಜೀವನದಲ್ಲಿ ಬಳಸಬೇಕು ಎಂದರು.
      ಮನೋವೈದ್ಯ ಡಾ. ಆನಂದ ಪಾಂಡುರAಗಿ ಮÁತನಾಡಿದರು. ಪ್ರಾಂತ ಸಂಘಟನಾ ಮಂತ್ರಿ ಲಕ್ಷಿ÷್ಮÃನಾರಾಯಣ ಭುವನಕೋಟೆ, ಸುಮಂಗಲಾ ದಾಂಡೇವಾಲೆ, ಮುಕುಂದ ಜಠಾರ, ಡಾ. ಚಂದ್ರಮೌಳಿ ನಾಯ್ಕರ, ಸುಽÃಂದ್ರ ದೇಶಪಾಂಡೆ, ಸತೀಶ ಪರ್ವತೀಕರ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts