More

    ಬ್ಯಾಂಕ್​ ಮುಂದೆಯೇ ಹೆಚ್ಚು ಸಮಯ ಕಳೆಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಅಸಲಿ ಮುಖವಾಡ ಬಯಲು!

    ಸಂಗಾರೆಡ್ಡಿ: ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂದು ಮಕ್ಕಳಿಗೆ ಒಳ್ಳೆಯದನ್ನು ಬೋಧಿಸಬೇಕಾಗಿದ್ದ ಮತ್ತು ಸಮಾಜದಲ್ಲಿ ಮಾದರಿಯಾಗಬೇಕಿದ್ದ ಶಿಕ್ಷಕನೇ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

    ಕೈತುಂಬಾ ಸರ್ಕಾರಿ ಸಂಬಳ ಸಿಕ್ಕರೂ ಹಣದ ಆಸೆಗೆ ಕಳ್ಳತನಕ್ಕೆ ಇಳಿದ ಖದೀಮ ಶಿಕ್ಷಕ ಇಂದು ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಶಿಕ್ಷಕನ ಹೆಸರು ಸಾರಾ ಸಂತೋಷ್​. ಸಂಗಾರೆಡ್ಡಿ ಜಿಲ್ಲೆಯ ಎಂಪಿಪಿ ಸರ್ಕಾರಿ ಶಾಲೆಯಲ್ಲಿ ಸಂತೋಷ್​ ಶಿಕ್ಷಕರಾಗಿದ್ದರು. ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡುವ ಜನರನ್ನೇ ಟಾರ್ಗೆಟ್​ ಮಾಡಿ, ಸಂತೋಶ್ ಕಳ್ಳತನ ಮಾಡುತ್ತಿದ್ದ. ಈತ ಬ್ಯಾಂಕ್​ ಮುಂದೆಯೇ ಹೆಚ್ಚು ಕಾಲ ಕಳೆಯುತ್ತಿದ್ದ ಮತ್ತು ಜನರನ್ನು ಗಮನಿಸಿ ಕೃತ್ಯ ಎಸಗಿಯುತ್ತಿದ್ದ.

    ಈ ತಿಂಗಳ 10ನೇ ತಾರೀಖಿನಂದು ಮಧ್ಯಾಹ್ನ ಕೊನ್ಯಾಲಾ ರಾಮುಲು ಎಂಬ ವ್ಯಕ್ತಿ ಸಂಗಾರೆಡ್ಡಿಯ ಎಸ್​ಬಿಐ ಮುಖ್ಯ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ. ಪತ್ನಿಯೊಂದಿಗೆ ಹೋಗುವಾಗ ತರಕಾರಿ ತೆಗೆದುಕೊಳ್ಳಲೆಂದು ಮಾರ್ಗ ಮಧ್ಯೆ ಪೊಥಿರೆಡ್ಡಿಪಲ್ಲಿಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದರು. ರಸ್ತೆಯ ಪಕ್ಕದಲ್ಲಿ ರಾಮುಲು ಬೈಕ್​ ಪಾರ್ಕ್​ ಮಾಡಿದ್ದರು. ಬ್ಯಾಂಕ್​ನಿಂದ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಸಂತೋಷ್​, ರಾಮುಲು ಅವರ ಕೈಯಲ್ಲಿದ್ದ ಬ್ಯಾಗ್​ ಅನ್ನು ಕಸಿದು ಪರಾರಿಯಾಗಿದ್ದ. ತಕ್ಷಣವೇ ರಾಮುಲು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದು.

    ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಖದೀಮನನ್ನು ಸಂತೋಷ್​ನನ್ನು ಗುರುತಿಸಿ, ಬಂಧಿಸಲಾಯಿತು. ಬಳಿಕ ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಪೊಲೀಸರು ಆರೋಪಿಯ ಬಳಿ 1.5 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡು ರಾಮುಲು ಅವರಿಗೆ ನೀಡಿದರು. ಬೇರೆ ಪ್ರಕರಣಗಳಲ್ಲಿ ಸಂತೋಷ್​ ಕಳ್ಳತನ ಮಾಡಿರಬಹುದಾ? ಎಂಬ ಆಯಮದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದರು. ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವವರನ್ನು ಟಾರ್ಗೆಟ್​ ಮಾಡಿ ಸಂತೋಷ್​ ಹಣ ದೋಚುತ್ತಿದ್ದ ಎಂಬ ಸಂಗತಿ ಬಯಲಾಗಿದೆ.

    ಸದ್ಯ ಸಂತೋಷ್​ ವಿರುದ್ಧ ದೂರು ದಾಖಲಾಗಿದ್ದು, ಆತನನ್ನು ಜೈಲಿನಲ್ಲಿ ಬಂಧಿಸಲಾಗಿದೆ. ಈ ಹಿಂದೆ ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಆರೋಪದಲ್ಲಿ ಸಂತೋಷ್​ನನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಅಂದಿನಿಂದ ಕಳ್ಳತನ ಅಭ್ಯಾಸ ಆರಂಭಿಸಿದ ಎನ್ನಲಾಗಿದೆ. ಇದೀಗ ಸಂತೋಷ್​ ಬಂಧನ ಸಂಗಾರೆಡ್ಡಿಯಲ್ಲಿ ಭಾರಿ ಚರ್ಚೆಯಾಗಿದ್ದು, ಯಾರನ್ನು ನಂಬುವುದು ಎನ್ನುವಂತಾಗಿದೆ. (ಏಜೆನ್ಸೀಸ್​)

    ಮತಾಂತರಕ್ಕೆ ನಲುಗಿದ ಗದಗದ ಕುಟುಂಬ: ಗೋವಾದಲ್ಲಿ ಬಾಡಿಗೆ ಮನೆ ಕೊಡಿಸುವ ನೆಪದಲ್ಲಿ ಸಲುಗೆ, ತಾಯಿ, ಮಗಳು ನಾಪತ್ತೆ

    ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ​ಗೆ ಸೇರಿದ BDA ಸೈಟ್​ ಕಬಳಿಕೆ: ಎಫ್​ಐಆರ್​ ದಾಖಲು

    ಹನುಮಂತನಗರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ: 27 ಗ್ರಾಂ ಚಿನ್ನ, 13 ದ್ವಿಚಕ್ರ ವಾಹನ ಸೀಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts