More

    ಹನುಮಂತನಗರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ: 27 ಗ್ರಾಂ ಚಿನ್ನ, 13 ದ್ವಿಚಕ್ರ ವಾಹನ ಸೀಜ್​

    ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ, ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಅಂಬೇಡ್ಕರ್ ನಗರದ ಪಂತರಪಾಳ್ಯದ ಸುನೀಲ್ ಕುಮಾರ್(37) ಮತ್ತು ವಿನಾಯಕ ಲೇಔಟ್‌ನ ಶ್ರೀನಿವಾಸ(25) ಬಂಧಿತರು. ಆರೋಪಿಗಳಿಂದ 27 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿ ಒಟ್ಟು 13 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಚಡ್ಡಿಯಲ್ಲೇ ಬೈಕ್ ಜೊತೆ ಫೀಲ್ಡಿಗೆ ಇಳಿದು ಕಳ್ಳತನ ಮಾಡ್ತಿದ್ದರು.

    ಹನುಮಂತನಗರ ನಿವಾಸಿ ಜಯಶ್ರೀ ಅವರು ಜ.4ರಂದು ಮಧ್ಯಾಹ್ನ 3.30ರ ಸುಮಾರಿಗೆ ಹನುಮಂತನಗರದ 5ನೇ ಮುಖ್ಯರಸ್ತೆಯ 4ನೇ ಅಡ್ಡರಸ್ತೆಯಲ್ಲಿ ನಡೆದು ಬರುವಾಗ, ಎದುರಿನಿಂದ ದ್ವಿಚಕ್ರ ವಾಹನದಲ್ಲಿ ಬಂದು ಇಬ್ಬರು ದುಷ್ಕರ್ಮಿಗಳು ಜಯಶ್ರೀ ಅವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಘಟನಾ ಸ್ಥಳ ಸೇರಿ ಸುತ್ತಮುತ್ತಲ ಸುಮಾರು 500ಕ್ಕೂ ಅಧಿಕ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹಳೇ ಚಾಳಿ ಮುಂದುವರಿಸಿದ್ದ
    ಪ್ರಮುಖ ಆರೋಪಿ ಸುನೀಲ್ ಕುಮಾರ್ ವೃತ್ತಿಪರ ಕಳ್ಳನಾಗಿದ್ದು, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ರಾಬರಿ ಪ್ರಕರಣದಲ್ಲಿ ಬ್ಯಾಟರಾಯನಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಏಳೂವರೆ ವರ್ಷದ ಜೈಲು ಶಿಕ್ಷೆಯಾಗಿತ್ತು. ಜೈಲುವಾಸ ಅನುಭವಿಸಿ ಇತ್ತೀಚೆಗೆ ಹೊರಗೆ ಬಂದಿದ್ದ ಆರೋಪಿ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಆರೋಪಿಗಳ ಬಂಧನದಿಂದ ಕೆಂಗೇರಿ, ಹನುಮಂತನಗರ, ಸಿ.ಕೆ.ಅಚ್ಚುಕಟ್ಟು, ಕೆ.ಜಿ.ನಗರ, ಗಿರಿನಗರ, ಬನಶಂಕರಿ, ಹಗಲಸೂರು ಗೇಟ್ ಸೇರಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 13 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ​ಗೆ ಸೇರಿದ BDA ಸೈಟ್​ ಕಬಳಿಕೆ: ಎಫ್​ಐಆರ್​ ದಾಖಲು

    ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯ ಮೇಲೆ ಕಾರು ಚಾಲಕನಿಂದ ದೌರ್ಜನ್ಯ: ವಿಡಿಯೋ ಬಹಿರಂಗ

    ರಾಜ್ಯದ ನಾಲ್ಕೂ ದಿಕ್ಕಿನಿಂದ ಬಿಜೆಪಿ ರಥಯಾತ್ರೆ; ಪ್ರಾಥಮಿಕ ಸಭೆಯಲ್ಲಿ ಸಿಕ್ತು ಪ್ರಮುಖರ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts