More

    ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದು

    ಸಂಡೂರು: ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದು ಎಂದು ಜೆಎಸ್‌ಡಬ್ಲುೃ ಸ್ಟೀಲ್‌ನ ಅಧ್ಯಕ್ಷ ಮುರುಗನ್ ಹೇಳಿದರು.

    ತಾಲೂಕಿನ ತೋರಣಗಲ್‌ನ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಹೊಸ ರಕ್ತನಿಧಿ ಕೇಂದ್ರ ಮತ್ತು ರಕ್ತದಾನ ಶಿಬಿರವನ್ನು ಗುರುವಾರ ಉದ್ಘಾಟಿಸಿ, ಮಾತನಾಡಿದರು.

    ರಕ್ತನಿಧಿ ಸ್ಥಾಪಿಸುವುದರಿಂದ ಅಪಘಾತ, ಅನಾರೋಗ್ಯ ಸಂದರ್ಭಗಳಲ್ಲಿ ಸಿಲುಕಿರುವ ಜನರಿಗೆ ಉಪಯೋಗವಾಗುತ್ತದೆ. ಇಂದು ಲಕ್ಷಾಂತರ ಜನ ರಕ್ತದಾನ ಮಾಡುತ್ತಿದ್ದಾರೆ. ಇದರಿಂದ ಹೃದಯಾಘಾತ, ಮಾನವನ ಕೊಬ್ಬಿನ ಶೇಖರಣೆ ಕುಸಿತ ಮೊದಲಾದ ಲಾಭಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಯ ಉದ್ಯೋಗಿಗಳು ರಕ್ತದಾನ ಮಾಡಬೇಕು ಎಂದರು. ಇದೇ ವೇಳೆ 80ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಆಸ್ಪತ್ರೆ ಮುಖ್ಯಸ್ಥರಾದ ಎಸ್.ಪಿ.ಸಿಂಗ್, ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts