More

  ಹೊಸಬರ ‘ಕಂಬ್ಳಿಹುಳ’ಕ್ಕೆ ಹಳಬರ ಬೆಂಬಲ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​

  ಬೆಂಗಳೂರು: ‘ಕಂಬ್ಳಿಹುಳ’ ಎಂಬ ಹೊಸಬರ ಸಿನಿಮಾ ನೋಡಿ ಇತ್ತೀಚೆಗಷ್ಟೇ ನಿರ್ದೇಶಕ ಸಿಂಪಲ್​ ಸುನಿ ಒಂದು ಆಫರ್​ ನೀಡಿದ್ದರು. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕ ಪ್ರಭುಗಳು ಸಿನಿಮಾ ಚೆನ್ನಾಗಿಲ್ಲ ಎಂದರೆ, ಅವರಿಗೆ ಟಿಕೆಟ್​ನ ಅರ್ಧಹಣವನ್ನು ವಾಪಾಸ್ಸು ಮಾಡುವುದಾಗಿ ಹೇಳಿದ್ದರು. ಈಗ ಚಂದನವನದ ಇನ್ನಷ್ಟು ಸೆಲೆಬ್ರಿಟಿಗಳು ‘ಕಂಬ್ಳಿಹುಳ’ ಚಿತ್ರದ ಪರವಾಗಿ ನಿಂತಿದ್ದಾರೆ.

  ಇದನ್ನೂ ಓದಿ: ಟ್ರೋಲ್ ಕುರಿತು ಬೇಸರ ಹೊರಹಾಕಿದ್ದ ರಶ್ಮಿಕಾ ಬೆಂಬಲಕ್ಕೆ ನಿಂತ ರಮ್ಯಾ…

  ಹೊಸಬರ ‘ಕಂಬ್ಳಿಹುಳ’ಕ್ಕೆ ಹಳಬರ ಬೆಂಬಲ; ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ‘ಕಂಬ್ಳಿಹುಳ’ ಚಿತ್ರವು ನ.4ರಂದು ಬಿಡುಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಹಲವು ಚಿತ್ರಗಳ ಬಿಡುಗಡೆ ಮತ್ತು ಪ್ರಚಾರದ ಕೊರತೆಯಿಂದ ಮಂಕಾಗಿತ್ತು. ಈ ಸಂದರ್ಭದಲ್ಲಿ ಚಿತ್ರದ ಕೈಹಿಡಿದಿದ್ದು ಪ್ರೇಕ್ಷಕರು. ಈ ಚಿತ್ರವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ‘ಸಪೋರ್ಟ್ ಕಂಬ್ಳಿಹುಳ’, ‘ನಮ್ಮ ಮಣ್ಣಿನ ಸಿನಿಮಾ’ ಎಂದು ಸೋಷಿಯಲ್​ ಮೀಡಿಯಾದಲ್ಲಿ ಆಭಿಯಾನ ಪ್ರಾರಂಭಿಸಿದ್ದರು.

  ಈಗ ಚಿತ್ರರಂಗದ ಸಾಕಷ್ಟು ಜ ‘ಕಂಬ್ಳಿಹುಳ’ ಪರವಾಗಿ ನಿಂತಿದ್ದರೆ. ಸಿನಿಮಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದೆ. ನಿರ್ದೇಶಕರಾದ ಸಿಂಪಲ್ ಸುನಿ, ಜಯತೀರ್ಥ, ಯೋಗರಾಜ್ ಭಟ್, ಚಾರ್ಲಿ ಕಿರಣ್ ರಾಜ್, ವಿನಯ್ ರಾಜಕುಮಾರ್ ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನಷ್ಟು ಜನ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

  ಇನ್ನು, ನಟ-ನಿರ್ದೇಶಕ ರಿಷಭ್​ ಶೆಟ್ಟಿ, ‘ಕಂಬ್ಳಿಹುಳ’ ಚಿತ್ರವನ್ನು ಆದಷ್ಟು ಬೇಗ ನೋಡುವುದಾಗಿ ಹೇಳಿಕೊಂಡಿದ್ದಾರೆ. ಧನಂಜಯ್, ಧನ್ವೀರ್, ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಚೇತನ್ ಕುಮಾರ್, ಅದಿತಿ ಪ್ರಭುದೇವ ಕೂಡ ಚಿತ್ರಕ್ಕೆ ಸಪೋರ್ಟ್ ಮಾಡಿ ಪೋಸ್ಟ್ ಹಾಕಿದ್ದು ಆದಷ್ಟು ಬೇಗ ಸಿನಿಮಾ ನೋಡೋದಾಗಿ ತಿಳಿಸಿದ್ದಾರೆ.

  ಇದನ್ನೂ ಓದಿ: ಸುನೀಲ್​ ಶೆಟ್ಟಿ ಜತೆ ಹಿಂದಿ ವೆಬ್​ ಸೀರಿಸ್​ನಲ್ಲಿ ‘ಗಾಳಿಪಟ’ದ ಭಾವನಾ..

  ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಸಂಸ್ಥೆಯಡಿ ನಿರ್ಮಾಣವಾದ ಈ ಚಿತ್ರದಲ್ಲಿ ಮಲೆನಾಡಿನ ಪ್ರೇಮಕಥೆ ಇದೆ.

  ಬ್ಯಾಂಕಾಕ್​ಗೆ ಪುಷ್ಪ 2 ತಂಡ; ಮೊದಲ ಶೆಡ್ಯುಲ್​ನಲ್ಲಿ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts