More

    ಮಹಾ ಸಚಿವ ನವಾಬ್​​ ಮಲಿಕ್​ ವಿರುದ್ಧ ಮಾನನಷ್ಟ ಮೊಕದ್ದಮೆ; 1.25 ಕೋಟಿ ರೂ. ಪರಿಹಾರ ಬೇಡಿಕೆ

    ಮುಂಬೈ: ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ(ಎನ್​​ಸಿಬಿ)ದ ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಅವರ ತಂದೆ ಧ್ಯಾನ್​​ದೇವ್​ ಕಚ್ರೂಜಿ ವಾಂಖೆಡೆ ಅವರು, ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ವಿರುದ್ಧ ಬಾಂಬೆ ಹೈಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ಪುತ್ರನ ವಿರುದ್ಧ ನಿತ್ಯ ಒಂದೊಂದು ಆರೋಪ ಮಾಡುತ್ತಾ ಬಂದಿರುವ ಮಲಿಕ್​​ರಿಂದ 1.25 ಕೋಟಿ ರೂಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

    ಕ್ರೂಸ್​ ಶಿಪ್​ ಡ್ರಗ್ಸ್​ ಪಾರ್ಟಿ ಕೇಸಿನಲ್ಲಿ ಬಾಲಿವುಡ್​ ನಟ ಶಾರುಖ್​ ಖಾನ್​ರ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದಾಗಿನಿಂದ ಆ ಪ್ರಕರಣದ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿ ಸಮೀರ್​​ ವಾಂಖೆಡೆ ವಿರುದ್ಧ ಹಲವು ರೀತಿಯ ವೈಯಕ್ತಿಕ ಆರೋಪಗಳನ್ನು ನವಾಬ್​ ಮಲಿಕ್ ಮಾಡಿದ್ದಾರೆ. ಇದರಿಂದಾಗಿ ಸಮೀರ್​​ರ ಹೆಸರು ಮತ್ತು ವ್ಯಕ್ತಿತ್ವಕ್ಕೆ ಹಾಗೂ ನಮ್ಮ ಇಡೀ ಕುಟುಂಬದ ಸಾಮಾಜಿಕ ವರ್ಚಸ್ಸಿಗೆ ಸರಿಪಡಿಸಲಾಗದ ಹಾನಿ ಉಂಟಾಗಿದೆ ಎಂದು ಧ್ಯಾನ್​ದೇವ್ ವಾಂಖೆಡೆ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ‘ನಾನು ಜಯಲಲಿತಾರ ಮಗಳು… ಮೈಸೂರಿನವಳು… ಸಾಕ್ಷಿ ಸಮೇತ ಸಾಬೀತು ಪಡಿಸುವೆ…’

    ಜೊತೆಗೆ, ಸಚಿವ ಮಲಿಕ್​, ಅವರ ಪಕ್ಷದ ಇತರ ನಾಯಕರು ಅಥವಾ ಅವರ ಆಣತಿಯಂತೆ ವರ್ತಿಸುವ ಯಾರೊಬ್ಬರೂ ಸಮೀರ್​ ಬಗ್ಗೆ ಇನ್ನು ಮುಂದೆ ಮಾತನಾಡದಂತೆ ಹಾಗೂ ಮಾಧ್ಯಮಗಳಲ್ಲಿ ತಮ್ಮ ಕುಟುಂಬದ ಬಗ್ಗೆ ಬರೆಯುವುದಕ್ಕೆ ಅಥವಾ ಪ್ರಸಾರ ಮಾಡುವುದಕ್ಕೆ ನಿರ್ಬಂಧ ವಿಧಿಸುವಂತೆಯೂ ಕೋರಿರುವ ಧ್ಯಾನ್​ದೇವ್​ ವಾಂಖೆಡೆ, ತಮ್ಮ ಕುಟುಂಬವನ್ನು ವಂಚಕರೆಂಬಂತೆ ಮತ್ತು ಹಿಂದೂಗಳಲ್ಲ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೊಕದ್ದಮೆಯು ನ.8 ರ ಸೋಮವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್)

    “ಆ ದಿನ ಪುನೀತ್​ ಮೊದಲು ಹೋದ ಕ್ಲಿನಿಕ್​​ನ ಸಿಸಿಟಿವಿ ಫೂಟೇಜ್​ ಬಿಡುಗಡೆ ಮಾಡಿ”

    ಬಾಲ ಹೊಂದಿದ ಮಗು ಜನನ! ಅಪರೂಪದ ಸಂಗತಿಗೆ ಬೆರಗಾದ ವೈದ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts