"ಆ ದಿನ ಪುನೀತ್​ ಮೊದಲು ಹೋದ ಕ್ಲಿನಿಕ್​​ನ ಸಿಸಿಟಿವಿ ಫೂಟೇಜ್​ ಬಿಡುಗಡೆ ಮಾಡಿ"

puneeth-anushree
Published on

ಬೆಂಗಳೂರು: ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನರಾದ ದಿನ ಅವರು ಮೊದಲು ಹೋಗಿದ್ದ ಡಾ.ರಮಣ್​ರಾವ್​ ಕ್ಲಿನಿಕ್​ನ ವಿಡಿಯೋ ಫೂಟೇಜ್​ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಅವರ ಅಭಿಮಾನಿ ಎನ್ನಲಾದ ಅರುಣ್​ ಪರಮೇಶ್ವರ್​ ಆಗ್ರಹಿಸಿದ್ದಾರೆ.

ಡಾ.ರಮಣರಾವ್​ ಕ್ಲಿನಿಕ್​ನಲ್ಲಿ ಪುನೀತ್​​ಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಆಪಾದಿಸಿ ತನಿಖೆ ಕೋರಿ ಪೊಲೀಸರಿಗೆ ದೂರು ನೀಡಿರುವ ಕುರುಬರಹಳ್ಳಿಯ ಅರುಣ್​ ಪರಮೇಶ್ವರ್ ಇಂದು ದಿಗ್ವಿಜಯ ನ್ಯೂಸ್​​ನೊಂದಿಗೆ ಮಾತನಾಡಿದರು.

"ಪ್ರಾಥಮಿಕ ಚಿಕಿತ್ಸೆಗಾಗಿ ಅಪ್ಪು ತೆರಳಿದ ಕ್ಲಿನಿಕ್​ನಲ್ಲಿ ಏನು ನಡೆಯಿತು? ಪುನೀತ್​ ಪ್ರಾಣ ಉಳಿಸಬಹುದಾಗಿದ್ದ ಗೋಲ್ಡನ್​ ಅವರ್​ ಯಾಕೆ ಮಿಸ್​ ಆಯ್ತು? ಪುನೀತ್​​ರನ್ನು ಆಸ್ಪತ್ರೆಗೆ ಆ್ಯಂಬುಲೆನ್ಸ್​ನಲ್ಲಿ ಯಾಕೆ ಕಳಿಸಲಿಲ್ಲ? ಇವೆಲ್ಲಾ ಪ್ರಶ್ನೆಗಳು ಬಹುತೇಕ ಅಭಿಮಾನಿಗಳನ್ನು ಕಾಡುತ್ತಿವೆ. ಹೀಗಿರುವಾಗ ಅಂದಿನ ಕ್ಲಿನಿಕ್​ನ ಸಿಸಿಟಿವಿ ಫೂಟೇಜನ್ನು ರಿಲೀಸ್​ ಮಾಡದೇ ಇರೋದು ಹೆಚ್ಚು ಅನುಮಾನಗಳಿಗೆ ಆಸ್ಪದ ನೀಡ್ತಾ ಇದೆ. ಡಾ.ರಮಣರಾವ್​ ಮುಂಚೆ ಬೇರೆ ರೀತಿ ಹೇಳಿದ್ದರು, ಈಗ ಬೇರೆ ರೀತಿ ಹೇಳ್ತಾ ಇದ್ದಾರೆ. ಆದ್ದರಿಂದ ಸಿಸಿಟಿವಿ ಫೂಟೇಜನ್ನು ತಕ್ಷಣ ಬಿಡುಗಡೆ ಮಾಡಬೇಕು" ಎಂದು ಪರಮೇಶ್ವರ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net