More

    ಡ್ರಗ್ ಮಾಫಿಯಾ ಬಳಿಕ ಇದೀಗ ಲ್ಯಾಂಡ್​ ಮಾಫಿಯಾ ವಿರುದ್ಧ ಸಲ್ಮಾನ್​ ಖಾನ್ ಧ್ವನಿ!

    ಮುಂಬೈ: ಬಾಲಿವುಡ್​ನಲ್ಲಿ ಈಗಾಗಲೇ ಡ್ರಗ್​ ಮಾಫಿಯಾ ದೊಡ್ಡ ಹಾವಳಿಯನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ಘಟಾನುಘಟಿಗಳಿಗೂ ಡ್ರಗ್ ಮಾಫಿಯಾದ ನಂಟಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದೀಗ ಆ ಡ್ರಗ್​ ಮಾಫಿಯಾ ಮತ್ತು ಲ್ಯಾಂಡ್ ಮಾಫಿಯಾ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್​ ಧ್ವನಿ ಎತ್ತಿದ್ದಾರೆ.

    ಇದನ್ನೂ ಓದಿ: ಪಾರ್ಟಿ ಮೂಡ್​ನಲ್ಲಿ ನಿಶ್ವಿಕಾ – ಚಂದನ್ ಶೆಟ್ಟಿ ಹೊಸ ಆಲ್ಬಂನಲ್ಲಿ ನಿವೇದಿತಾ

    ಹಾಗಂತ ನಿಜ ಜೀವನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಬದಲಿಗೆ ಇನ್ನೇನು ಬಿಡುಗಡೆಗೆ ರೆಡಿಯಾಗಿರುವ ರಾಧೆ ಸಿನಿಮಾದಲ್ಲಿ ಡ್ರಗ್​ ಮಾಫಿಯಾ ವಿರುದ್ಧ ಸಮರ ಸಾರುವ ಖಡಕ್​ ನಾಯಕನಾಗಿ ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದಾರೆ.

    ಇದೀಗ ಆಯುಷ್ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಅಂತಿಮ್; ದಿ ಫೈನಲ್ ಟ್ರುತ್ ಸಿನಿಮಾದಲ್ಲಿಯೂ ಸಲ್ಮಾನ್​ ಖಾನ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಸಿಂಗ್​ ವೇಷದಲ್ಲಿ ಈಗಾಗಲೇ ಸಲ್ಲು ಲುಕ್​ ಹೊರಬಂದಿದ್ದು, ಇಲ್ಲಿ, ಲ್ಯಾಂಡ್​ ಮಾಫಿಯಾದ ವಿರುದ್ಧ ಸಿಡಿದೇಳುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಲ್ಮಾನ್​ ಕಾಣಿಸಿಕೊಳ್ಳಲಿದ್ದಾರೆ. ಸಿಕ್​ ಟರ್ಬನ್​ನಲ್ಲಿ ರಗಡ್​ ಲುಕ್​ನಲ್ಲಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

    ಇದನ್ನೂ ಓದಿ: ‘ಫ್ಯಾಂಟಮ್’ ಕೊನೇ ಹಂತದ ಶೂಟಿಂಗ್​ನಲ್ಲಿ ಕಿಚ್ಚ ಸುದೀಪ್

    ಅಂದಹಾಗೆ 2018ರಲ್ಲಿ ಮರಾಠಿಯಲ್ಲಿ ತೆರೆಕಂಡಿದ್ದ ಮುಲ್ಶಿ ಪ್ಯಾಟರ್ನ್​ ಸಿನಿಮಾವನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಲಾಗುತ್ತಿದ್ದು, ಮಹೇಶ್​ ಮಂಜ್ರೇಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. (ಏಜೆನ್ಸೀಸ್​)

    ‘ಪೆಟ್ರೋಮ್ಯಾಕ್ಸ್’ ಎರಡನೇ ಹಂತದ ಚಿತ್ರೀಕರಣ ಶುರು …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts