More

    ಹಿಂದಿಯಲ್ಲಿ ‘ವಿಕ್ರಾಂತ್ ರೋಣ’ ಟೀಸರ್ ಯಾರು ರಿಲೀಸ್ ಮಾಡ್ತಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ…

    ಬೆಂಗಳೂರು: ಸ್ಯಾಂಡಲ್‌ವುಡ್‌ನ ಎರಡು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳು ಅಂದರೆ ಅದು ಕೆಜಿಎಫ್ 2′ ಮತ್ತು ವಿಕ್ರಾಂತ್ ರೋಣ‘. ‘ಕೆಜಿಎಫ್ 2′ ಅಂತು ಏಪ್ರಿಲ್ 14 ರಂದು ಅಭಿಮಾನಿಗಳನ್ನು ರಂಜಿಸೋಕೆ ರೆಡಿ. ಹಾಗಾದರೆ, ‘ವಿಕ್ರಾಂತ್ ರೋಣಕಥೆ ಏನು ಅಂತೀರಾ…? ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ಸಿನಿಮಾ ಬಗ್ಗೆ ಮೊದಲ ದಿನದಿಂದ ಕುತೂಹಲ ಇದೆ. ಇನ್ನು, ಈ ಚಿತ್ರದ ಬಗ್ಗೆ ಸಿನಿಮಾತಂಡ ಪ್ರತಿ ಹಂತದಲ್ಲೂ ಒಂದೊಂದು ಸರ್ಪ್ರೈಸ್ ಕೊಡುತ್ತಾ ಬಂದಿದೆ. 3ಡಿ ಯಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಬರೋಬ್ಬರಿ ಆರು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಇನ್ನು, ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರ ಟೀಮ್ ವಿಕ್ರಾಂತ್ ರೋಣಸಿನಿಮಾದ ಟೀಸರ್ ಯುಗಾದಿ ಹಬ್ಬಕ್ಕೆ ರಿಲೀಸ್ ಮಾಡಿ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡುವುದಾಗಿ ತಿಳಿಸಿದ್ದರು..
    ಇದೇ ಏಪ್ರಿಲ್ 02 ರಂದು ವಿಕ್ರಾಂತ್ ರೋಣ ಟೀಸರ್ 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಟೀಸರ್ ರಿಲೀಸ್​ಗೆ ದಕ್ಷಿಣ ಭಾರತದ ದಿಗ್ಗಜರು ಕೈ ಜೋಡಿಸಿದ್ದಾರೆ. ಹೌದು, ಚಿತ್ರಕ್ಕೆ ಸಾಥ್ ನೀಡಲು ಪರಭಾಷೆಯ ಸ್ಟಾರ್ ನಟರು ‘ದಿ ಡೆವಿಲ್ಸ್ ಅರೈವಲ್’ ಹೆಸರಿನಲ್ಲಿ ‘ವಿಕ್ರಾಂತ್​ ರೋಣ’ದ ಹೊಸ ಟೀಸರ್ ಅನ್ನು ಏಪ್ರಿಲ್ 2 ರಂದು ಬೆಳಗ್ಗೆ 9.55 ಕ್ಕೆ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಅಂದಹಾಗೆ, ಈ ಚಿತ್ರದ ಹೊಸ ಮಲಯಾಳಂನ ಟೀಸರ್ ಅನ್ನು ಮೋಹನ್​ ಲಾಲ್, ತೆಲುಗಿನ ಟೀಸರ್ ​ಅನ್ನು ಮೆಗಾ ಸ್ಟಾರ್ ಚಿರಂಜೀವಿ ಅವರು ರಿಲೀಸ್ ಮಾಡಲಿದ್ದಾರೆ. ಇನ್ನು, ತಮಿಳಿನಲ್ಲಿ ಸಿಂಬು ಈ ಚಿತ್ರದ ಟೀಸರ್ ಲಾಂಚ್ ಮಾಡಲಿದ್ದಾರೆ. ಹೀಗಾಗಿ, ನಿನ್ನೆ ಸಿನಿಮಾದ ಹಿಂದಿ ಟೀಸರ್ ಅನ್ನು ಯಾರು ರಿಲೀಸ್ ಮಾಡಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಇತ್ತು. ಇದೀಗ, ಆ ಕುತೂಹಲಕ್ಕೆ ಕಿಚ್ಚ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ. ವಿಕ್ರಾಂತ್ ರೋಣಹಿಂದಿ ವರ್ಷನ್ ಟೀಸರ್ ಅನ್ನು ಬಾಲಿವುಡ್‌ ಬಾಕ್ಸಾಫೀಸ್ ಸುಲ್ತಾನ್ ಎಂದೇ ಫೇಮಸ್ ಆಗಿರುವ ನಟ ಸಲ್ಮಾನ್ ಖಾನ್ ರಿಲೀಸ್ ಮಾಡಲಿದ್ದಾರೆ. ಟೀಸರ್​ ಅನ್ನು ಈ ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ರಿಲೀಸ್ ಮಾಡುತ್ತಾರೆ ಎನ್ನಲಾಗಿದೆ.
    ಸ್ವತ: ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹಿಂದಿ ಟೀಸರ್ ಬಗ್ಗೆ ತಿಳಿಸಿದ್ದಾರೆ. ಕಿಚ್ಚ ಸುದೀಪ್ ಅವರು, ”ಲೆಜೆಂಡ್, ಸೂಪರ್‌ಸ್ಟಾರ್, ಸೂಪರ್ ಹೂಮನ್ ಸಲ್ಮಾನ್ ಖಾನ್ ಸರ್ ‘ವಿಕ್ರಾಂತ್ ರೋಣ’ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳುವುದಕ್ಕೆ ಖುಷಿ, ಉತ್ಸಾಹವಿದೆ“, ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ, ‘ವಿಕ್ರಾಂತ್ ರೋಣಸಿನಿಮಾವನ್ನು 50 ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡದಿಂದ ತಯಾರಿ ನಡೆಸಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲೂ ರಿಲೀಸ್ ಆಗಲಿರುವ ಸಿನಿಮಾ, ಇದಿಷ್ಟೇ ಅಲ್ಲದೆ ಅರಾಬಿಕ್, ಜರ್ಮನ್, ರಷ್ಯಾ, ಮ್ಯಾಂಡರೀನ್ ಭಾಷೆಗಳಲ್ಲೂ ತೆರೆಕಾಣಲಿದೆ ಎಂಬ ಮಾಹಿತಿ ಇದೆ. ಸದ್ಯಕ್ಕೆ, ಇಷ್ಟೆ ಮಾಹಿತಿ ಹೊರಬಿದ್ದಿದ್ದು, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಗೊತ್ತಾಗ ಬೇಕಿದೆ

    ಹಿಂದಿಯಲ್ಲಿ 'ವಿಕ್ರಾಂತ್ ರೋಣ' ಟೀಸರ್ ಯಾರು ರಿಲೀಸ್ ಮಾಡ್ತಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ...

    ಬ್ರಾಲೆಟ್ ಧರಿಸಿದ ಸಮಂತಾ; ನಿನ್ನ ಡ್ರೆಸ್ಸಿಂಗ್ ಓವರ್ ಆಗುತ್ತಿದೆ ಎಂದ ನೆಟ್ಟಿಗರು!

    ದೆಹಲಿಯಲ್ಲಿ ಕೆಜಿಎಫ್ ಟೀಮ್; ಇಲ್ಲಿವೆ ನೋಡಿ ವೈರಲ್ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts