More

    ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕ

    ಮೋದಿ ನಾಯಕತ್ವದಲ್ಲಿ ಭಾರತ ಸದೃಢವಾಗಿದೆ. ಅಭಿವೃದ್ಧಿ ಯೋಜನೆಗಳು ಪರಿಣಾಮಕಾರಿಯಾಗಿ ಜನರನ್ನು ತಲುಪಿವೆ. ರೈತರ ಹಿತಕ್ಕಾಗಿ ಹಲವು ಕಾರ್ಯಕ್ರಮಗಳು ಮಹತ್ವದ ಮೈಲಿಗಲ್ಲಾಗಿ ಪರಿವರ್ತಿತವಾಗಿವೆ. ಕರೊನಾ ವಿರುದ್ಧ ಸಮರದಲ್ಲೂ ದೇಶ ನಿಯಂತ್ರಣ ಸಾಧಿಸಿದೆ. ಇವೆಲ್ಲವೂ ಸಮರ್ಥ ನಾಯಕತ್ವದ ಫಲ.

    ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕಕಳೆದೈದು ದಶಕಗಳಿಂದ ಕನ್ನಡನಾಡಿನಲ್ಲಿ ಸಾರ್ವಜನಿಕ ಸೇವೆಯ ಬದುಕು ನಡೆಸಿದ್ದೇನೆ. ಜನಸೇವೆ ನನಗೆ ಉಸಿರಾಗಿದೆ. ಬದುಕಿರುವಷ್ಟು ಕಾಲ ಜನತೆಯಲ್ಲಿ ಜನಾರ್ದನನನ್ನು ಕಾಣುವ ಅಭಿಲಾಷೆ ನನ್ನದು. ರಾಜಕಾರಣಿಯಾಗಿ ಮನಸ್ಸಿನ ಅಂತರಾಳದ ಭಾವನೆಗಳನ್ನಾಗಲೀ, ಬೇಕು-ಬೇಡಗಳನ್ನಾಗಲೀ ಬಹಿರಂಗವಾಗಿ ಎಂದೂ ಹೇಳಿಕೊಂಡಿಲ್ಲ. ವೈಯಕ್ತಿಕ ಏಳಿಗೆ ಅಥವಾ ಲಾಭಕ್ಕಾಗಿ ನಾಯಕ ಇಲ್ಲವೇ ನಾಯಕಗಣವನ್ನು ವಿನಾಕಾರಣ ಸ್ತುತಿಸಿಲ್ಲ; ಹೊಗಳಿಲ್ಲ. ಸಾರ್ವಜನಿಕ ಸಭೆ ಸಮಾರಂಭ, ಚುನಾವಣೆ ರ್ಯಾಲಿಗಳಲ್ಲಿ, ಉಳಿದ ರಾಜಕಾರಣಿಗಳಂತೆ ಭಾಷಣ ಮಾಡಿದ್ದೇನೆ. ಆದರೆ, ಲೇಖನದ ಮೂಲಕ ಅನಿಸಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು.ಮೊದಲೇ ಅರಿಕೆ ಮಾಡಿಕೊಂಡಂತೆ ನಾನೊಬ್ಬ ಸಾಮಾನ್ಯ ಸಾರ್ವಜನಿಕ ಕಾರ್ಯಕರ್ತ. ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ನಾನು ಕಂಡ ಮಹೋನ್ನತ ಗುಣ ಮತ್ತು ಸಾಧನೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

    ಇದನ್ನೂ ಓದಿ   ಖಾಸಗಿ ಬಸ್ ಚಾಲಕರು, ಅರ್ಚಕರಿಗೆ ಕಿಟ್ ವಿತರಣೆ

    ‘ಜನನಾಯಕ’ ಎಂಬ ಪದವೊಂದಿದೆ. ಸಾಧನೆಗಿಂತ ಸೇವೆಗೆ ಹೊಂದುವಂತೆ ಪೂರಕ ಅರ್ಥಕೊಡುವ ಪರ್ಯಾಯ ಪದ ಇದು. ಪ್ರಧಾನಿ ನರೇಂದ್ರ ಮೋದಿ ವಿಶ್ವದ ಜನನಾಯಕರಲ್ಲೊಬ್ಬರು. ವಿಶ್ವ ಸಮುದಾಯದೆತ್ತರಕ್ಕೆ ಭಾರತೀಯರ ಜನಸೇವಾ ಕಾರ್ಯಗಳನ್ನು ಎತ್ತಿ ತೋರಿದ ಮಹಾನ್ ನಾಯಕ. ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ವಪಕ, ದಿಗ್ದರ್ಶಕ, ಸ್ವಚ್ಛ ಭಾರತ ನಿರ್ವತೃ, ಆಯುಷ್ಮಾನ್ ಭಾರತದ ರೂವಾರಿ ಹಾಗೂ ಅಂತ್ಯೋದಯ ಚಿಂತನೆಗಳ ಕಾರ್ಯಸಾಧಕ. ಮೋದಿ ಎರಡನೆಯ ಬಾರಿ ಪ್ರಧಾನಮಂತ್ರಿಯಾಗಿ ಇಂದಿಗೆ (ಮೇ 30) ಒಂದು ವರ್ಷ. ಮೋದಿ ಜನಕಲ್ಯಾಣಕ್ಕಾಗಿ ನೂರೆಂಟು ಕಾರ್ಯಯೋಜನೆಗಳನ್ನು ರೂಪಿಸಿ, ಕಾರ್ಯಗತ ಗೊಳಿಸಿದುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆ ಕಂಡಿದ್ದಾರೆ.

    ಪ್ರಧಾನಮಂತ್ರಿ ಜನಧನ ಯೋಜನೆ: ಕಡುಕಷ್ಟ ಬದುಕನ್ನು ಸಾಗಿಸುತ್ತಿದ್ದ 38 ಕೋಟಿ ಭಾರತೀಯ ಪ್ರಜೆಗಳಿಗೆ ಬ್ಯಾಂಕುಗಳಲ್ಲಿ, ಅವರ ಹೆಸರು, ವಿಳಾಸಗಳಲ್ಲೇ ಹಣ ಒಟ್ಟುಗೂಡಿಸುವ ಜನತಾ ಜನಾರ್ದನನ ನಿತ್ಯ ಸೇವೆ ಇದು. ಸರ್ಕಾರದಿಂದ ಕೊಡಮಾಡುವ ಹಣ ನೇರವಾಗಿ ಬಡಪ್ರಜೆಗೆ ಸಂದಾಯವಾದದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಭಾಗ್ಯದ ಲಕ್ಷ್ಮಿಯಾಗಿದೆ ಜನಧನ ಯೋಜನೆ. ದೀನ-ದಲಿತರ ಸಲುವಾಗಿ ಮೋದಿ ಜಾರಿಗೆ ತಂದಿರುವ ಮತ್ತೊಂದು ಕಾರ್ಯಕ್ರಮ ‘ಜನ ಸುರಕ್ಷಾ ಯೋಜನೆ’. ಪಿಂಚಣಿ ಮತ್ತು ವಿಮಾಹಣದ ಸುರಕ್ಷತೆಯ ರಕ್ಷಾಕವಚ ಇದು.

    ಇದನ್ನೂ ಓದಿ  ಬಿಬಿಎಂಪಿ ಕಾರ್ಪೋರೇಟರ್‌ಗೂ ಬಂತು ಕರೊನಾ ಪಾಸಿಟಿವ್!

    ಉಜ್ವಲಾ ಯೋಜನೆ: ಮಹಿಳೆಯರಿಗಾಗಿ, ವಿಶೇಷವಾಗಿ ಕಾಡುಮೇಡುಗಳಲ್ಲಿ ಅಲೆದು ಸೌದೆ ಸಂಗ್ರಹಿಸಿ ತಂದು ಅಡುಗೆ ಮಾಡುವ ಗ್ರಾಮೀಣ ಗೃಹಿಣಿಯರಿಗಾಗಿ ‘ಪ್ರಧಾನ ಮಂತ್ರಿ ಉಜ್ವಲಾ ಯೋಜನೆ’ ರೂಪಿಸಲಾಗಿದೆ. ದೇಶದ 715 ಜಿಲ್ಲೆಗಳ 8 ಕೋಟಿ ಮನೆಗಳಿಗೆ ರಿಯಾಯಿತಿ ದರದಲ್ಲಿ ಎಲ್​ಪಿಜಿ ಸಂಪರ್ಕ ನೀಡಲಾಗಿದೆ. ಸ್ವಾತಂತ್ರ್ಯ ನಂತರದ 70 ವರುಷಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಕಾಣದಿದ್ದ ದೇಶದ ಮೂಲೆಮೂಲೆಗಳಲ್ಲಿನ 18 ಸಹಸ್ರ ಗ್ರಾಮಗಳಿಗೆ ‘ವಿದ್ಯುತ್ ವಿಸ್ತಾರ ಯೋಜನೆ’, 2014ರಿಂದ 2019ರ ವರೆಗಿನ ಅಧಿಕಾರದ ಮೊದಲ ಅವಧಿಯಲ್ಲಿ ಗ್ರಾಮೀಣ ವಸತಿ ಯೋಜನೆಯಡಿ 1.25 ಕೋಟಿ ಮನೆ ನಿರ್ವಣ, ಮುಖ್ಯವಾಗಿ ಕೃಷಿಕ್ಷೇತ್ರದ ವ್ಯಾಪಕ ಅಭಿವೃದ್ಧಿ ಮತ್ತು ಬಡರೈತರ ನೆರವಿಗಾಗಿ ಅನುಷ್ಠಾನಕ್ಕೆ ತಂದಿರುವ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಂತೂ ಗ್ರಾಮೀಣ ಪುನರುಜ್ಜೀವನಕ್ಕೆ ಜ್ವಲಂತ ಸಾಕ್ಷಿ. ರೈತರ ಕಲ್ಯಾಣಕ್ಕಾಗಿ ವರ್ಷಕ್ಕೆ -ಠಿ; 87 ಸಾವಿರ ಕೋಟಿ ವಿನಿಯೋಗಿಸುತ್ತಿರುವುದನ್ನು ದೇಶದ ಕೃಷಿಕವರ್ಗ ಕೃತಜ್ಞತೆಯಿಂದ ಕಾಣುತ್ತಿದೆ.

    ದೇಶದಲ್ಲಿನ ನೇತಾರರು ಮತ್ತು ರಾಜಕೀಯ ಕಾರ್ಯಕರ್ತರಿಗೆ ಮಹಾನ್ ನಾಯಕನಾಗಿ ಕಂಡಿದ್ದಾರೆ ಮೋದಿ. ಸೃಜನಾತ್ಮಕ ಅಭಿವೃದ್ಧಿ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ದಾರಿದೀಪ ಆಗಿದ್ದಾರೆ. ಜನಮನ ಮೆಚ್ಚಿದ ಮತ್ತೆರಡು ವಿಶಿಷ್ಟ ಕಾರ್ಯಕ್ರಮಗಳನ್ನು ಸ್ಮರಿಸಬೇಕಾದದ್ದು ಅಗತ್ಯ. ವಿಶೇಷವಾಗಿ ಭಾರತೀಯ ಜನತಾಪಕ್ಷದ (ಬಿಜೆಪಿ) ಕಾರ್ಯಕರ್ತ ಸಮೂಹಕ್ಕೆ ಸ್ಪೂರ್ತಿ ಮತ್ತು ಉತ್ಸಾಹ ಮೂಡಿಸಿದ ಕಾರ್ಯಕ್ರಮಗಳಿವು. ಮೊದಲನೆಯ ಹೆಜ್ಜೆ ಎಂದರೆ ರಾಜಕೀಯ ಸಿದ್ಧಾಂತ-ತತ್ತ್ವಗಳ ಜನಾದರಣೆಯ ಸಲುವಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಮೋದಿ ನಡೆಸಿಕೊಟ್ಟ ಯಾತ್ರೆಗಳು. ಎರಡನೆಯದು ಕೊವಿಡ್-19 ಮಹಾಮಾರಿ ವಿರುದ್ಧ ಭಾರತದ ಸಮರಸಿದ್ಧತೆ. ಇದು ಮೋದಿ ಸರ್ಕಾರದ ಬೃಹತ್ ಪ್ರಮಾಣದ ಆರ್ಥಿಕ, ಸಾಮಾಜಿಕ ಮತ್ತು ಜನಾರೋಗ್ಯ ಸಿದ್ಧತೆ.

    ಇದನ್ನೂ ಓದಿ  ತಬ್ಲಿಘ್ ಜಮಾತ್ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ

    ಆತ್ಮನಿರ್ಭರ ಭಾರತ ಕುರಿತು ಪ್ರಧಾನಿ ನೀಡಿರುವ ಸಂದೇಶವು ದೇಶವನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ. ಪ್ರತಿಯೊಬ್ಬ ಭಾರತೀಯನೂ ಜಾಗೃತಗೊಂಡು ಉತ್ಪಾದನೆ ಹೆಚ್ಚಿಸುವುದು, ಜನಶಕ್ತಿ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳುವುದು. ಇದರಿಂದ ಸ್ವಾವಲಂಬಿ ಭಾರತವನ್ನು ರೂಪಿಸುವುದು ಹಾಗೂ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಚಿಂತನೆಯನ್ನು ಪ್ರಧಾನಿ ನೀಡಿದ್ದಾರೆ. ಭಾರತಕ್ಕೆ ಅಪರೂಪದ ಅಂತಃಶಕ್ತಿ ಇದೆ. (1) ಆರ್ಥಿಕತೆ (2) ಮೂಲಸೌಕರ್ಯ (3) ತಂತ್ರಜ್ಞಾನ ಆಧಾರಿತ ವ್ಯವಸ್ಥೆ (4) ಜನಸಂಖ್ಯೆ (5) ಬೇಡಿಕೆ- ಈ 5 ಅಂಶಗಳನ್ನು ದೇಶದ ಅಭಿವೃದ್ಧಿಗಾಗಿ ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ಈ ವಿಪತ್ತಿನ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ನಿಲ್ಲಿಸಬೇಕಿದೆ. ಆಗ ಮೋದಿ ಹೇಳುತ್ತಿರುವಂತೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ. ಇವೇ ಅಂಶಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಸ್ವದೇಶಿ ಚಳವಳಿಯ ಮೂಲಕ ನೀಡಿದ್ದರು.

    ಯಡಿಯೂರಪ್ಪನವರ ಕೊಡುಗೆ: ಈ ಹಂತದಲ್ಲಿ ಪಕ್ಷವನ್ನು ಸಮಗ್ರವಾಗಿ ದೇಶಸೇವೆಗೆ ಅಣಿ ಮಾಡುವಲ್ಲಿ ಪ್ರಧಾನಮಂತ್ರಿ ಯೊಂದಿಗೆ ಭಾಜಪದ ನಾಯಕರುಗಳು ಸಂಪೂರ್ಣ ಸಹಕಾರ ನೀಡಿರುವುದನ್ನು ಸ್ಮರಿಸಲೇಬೇಕು. ಉದಾಹರಣೆಗೆ, ಹಲವಾರು ದಶಕಗಳಿಂದ ಕನ್ನಡನಾಡಿನ ಜನಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ. ರಾಷ್ಟ್ರನಾಯಕ ಮೋದಿ ಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಯಡಿಯೂರಪ್ಪ. ಕರೊನಾ ವಿರುದ್ಧ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳು ದೇಶದ ಗಮನವನ್ನು ಸೆಳೆದಿವೆ.

    ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಎಗ್ಗು ತಗ್ಗಿಲ್ಲದೆ ನಡೆದಿದ್ದ, ಸ್ವಾರ್ಥ, ದೌರ್ಜನ್ಯ, ಭ್ರಷ್ಟಾಚಾರ, ಅಕ್ರಮ- ಇವುಗಳ ವಿರುದ್ಧ ಸಿಡಿದೆದ್ದು ಪ್ರಾಮಾಣಿಕ ಮತ್ತು ಸತ್ಯನಿಷ್ಠ ರಾಜಕೀಯ ಆಡಳಿತ ಕಾಣಲು ಮೋದಿಯವರು ಸಂಘಟಿಸಿದ ಹಲವಾರು ಯಾತ್ರೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಬಡವರು, ಅಲೆಮಾರಿಗಳು ಕುಲಕಸುಬು ನಂಬಿ ಜೀವನ ಸಾಗಿಸುವ ಜನರ ಬಗ್ಗೆ ತೋರಿದ ಕಳಕಳಿ ಮತ್ತು ಅವರು ನೀಡಿದ ವಿಶೇಷ ಪ್ಯಾಕೇಜ್ ದೇಶದ ಎಲ್ಲ ರಾಜ್ಯಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ   ತಬ್ಲಿಘ್ ಜಮಾತ್ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ

    ಯಾತ್ರೆಗಳ ಪರಿಣಾಮ: 1987ರ ನ್ಯಾಯ ಯಾತ್ರೆ, 1989ರ ಲೋಕಶಕ್ತಿ ಯಾತ್ರೆ, ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ನಡೆಸಿದ ಸೋಮನಾಥದಿಂದ ಅಯೋಧ್ಯವರೆಗಿನ ರಥಯಾತ್ರೆ, ಕಾಶ್ಮೀರದಲ್ಲಿ ರಕ್ತಪಿಪಾಸು ವಿಧ್ವಂಸಕ ಮತಾಂಧರು ನಡೆಸುತ್ತಿದ್ದ ದೌರ್ಜನ್ಯ ಹತ್ತಿಕ್ಕಲು ಡಾ.ಮುರುಳಿ ಮನೋಹರ ಜೋಷಿ ನೇತೃತ್ವದಲ್ಲಿನ ಏಕತಾ ಯಾತ್ರೆ, 2012ರ ವಿವೇಕಾನಂದ ಯುವವಿಕಾಸ ಯಾತ್ರೆ- ಇವೇ ಮೊದಲಾದ ರಾಷ್ಟ್ರೀಯ ಜಾಗೃತಿ ಆಂದೋಲನಗಳ ಯಶಸ್ಸು ಹಾಗೂ ತನ್ಮೂಲಕ ರಾಷ್ಟ್ರೀಯ ಸಮಗ್ರತೆಗಾಗಿ ನಡೆದ ಚಳವಳಿಗಳ ನಿರ್ವಹಣೆಯಲ್ಲಿ ಮೋದಿ ಮಹತ್ವದ ಪಾತ್ರ ವಹಿಸಿದರು. ಇವು ಭಾರತೀಯ ರಾಜಕಾರಣದ ಇತಿಹಾಸದಲ್ಲಿ ಚಿರಕಾಲ ನೆನಪಿನಲ್ಲಿ ಇಡುವ ಘಟನೆಗಳು.

    ಕರೊನಾ ವಿರುದ್ಧ ಭಾರತದ ಸಮರ: ಕರೊನಾ ವಿರುದ್ಧದ ಸಮರದಲ್ಲಿ ಮೋದಿ ಆಡಳಿತದ ಜಾಗರೂಕತೆ ಕ್ರಮಗಳ ಬಗ್ಗೆ ದೇಶದಾದ್ಯಂತ ಮೆಚ್ಚುಗೆ ಮತ್ತು ಸಮಾಧಾನದ ಮಾತುಗಳು ಕೇಳಿ ಬಂದಿವೆ. ಸೂಕ್ತ ವಿವೇಚನೆ, ಸಮಯೋಚಿತ ಕ್ರಮಗಳು, ಬೃಹತ್ ಪ್ರಮಾಣದ ಆರೋಗ್ಯ ವ್ಯವಸ್ಥೆ, ಮತ್ತಿತರ ಮುನ್ನೆಚ್ಚರಿಕೆ ಕ್ರಮಕ್ಕಾಗಿ ವಿಶ್ವದ ನಾಯಕರುಗಳು ಮೋದಿ ಆಡಳಿತವನ್ನು ಮುಕ್ತಕಂಠದಿಂದ ಪ್ರಶಂಸಿಸಿದುದನ್ನು ಕಂಡಿದ್ದೇವೆ. ಮಾರ್ಚ್ ತಿಂಗಳ ಮೂರನೆಯ ವಾರದಿಂದ ಮೇ ಕೊನೆಯವರೆಗಿನ ಆತಂಕದ ದಿನಗಳಲ್ಲಿ ರಾಷ್ಟ್ರದ ಸಮಗ್ರ ಆರೋಗ್ಯ ಆಡಳಿತದ ಹೊಣೆಹೊತ್ತ ಮೋದಿ ಈ ಅವಧಿಯಲ್ಲಿ ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಬದುಕು ನಮ್ಮೆಲ್ಲರ ಹಿನ್ನೆಲೆ. ಗ್ರಾಮೀಣ ಕುಟುಂಬಗಳ ಕಷ್ಟದ ಬದುಕನ್ನು ಹಂಚಿಕೊಂಡು ಬೆಳೆದ ಜನನಾಯಕ ನರೇಂದ್ರ ಮೋದಿ. ಪ್ರತಿ ಹಂತದಲ್ಲಿಯೂ ಬಡಜನರ ಕಣ್ಣೀರು ಒರೆಸುವ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟ ಮೋದಿಯವರ ಆಡಳಿತ ನೂರೆಂಟು ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾಗಿದೆ. ಆದರೂ, ಅದಕ್ಕೆ ತಲೆಕೆಡಿಸಿಕೊಳ್ಳದೆ ಕೆಲಸದ ಮೂಲಕವೇ ಉತ್ತರ ನೀಡಿದ್ದಾರೆ. ಕರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟದ ವಿರುದ್ಧ ಹೋರಾಡಲು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದು, ಜನತೆಗೆ ಆಶಾದಾಯಕವೆನಿಸಿದೆ.

    ಇದನ್ನೂ ಓದಿ   ಮೋದಿ ಗೆದ್ದೇ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಇನ್ನಿಲ್ಲ; ಸಾವಿನಲ್ಲೂ ಗೊಂದಲ…!

    ‘ಮಾಡಿದೆ’ ಎನ್ನದ ನಾಯಕ: ಪ್ರಜಾತಂತ್ರ ವ್ಯವಸ್ಥೆಯ ಜನನಾಯಕನಲ್ಲಿ ಇರಬೇಕಾದ ಆದರ್ಶದ ಗುಣವೆಂದರೆ ಸಂಘಶಕ್ತಿ. ಜನಪರ ಕಾರ್ಯಕ್ರಮಗಳು ಜನತೆಯಿಂದಲೇ ಅನುಷ್ಠಾನಗೊಳ್ಳಬೇಕೆಂಬ ಸಾಮೂಹಿಕ ನಿರ್ವಹಣಾ ಮನೋಧರ್ಮ. ಭಾರತದಂಥ ಜನಬಾಹುಳ್ಯ ಪ್ರಜಾತಂತ್ರದ ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ಸಿಗಾಗಿ ದಿನವಿಡೀ ಶ್ರಮಿಸಿದರೂ ಒಮ್ಮೆಯೂ ಮೋದಿ ತಾನೇ ಎಲ್ಲಕ್ಕೂ ಕಾರಣಕರ್ತ ಎಂದಾಗಲೀ, ತನ್ನಿಂದಲೇ ಸರ್ವಸ್ವವೆಂದಾಗಲೀ ಹೊಗಳಿಕೊಂಡಿಲ್ಲ. ಆತ್ಮಪ್ರಶಂಸೆ, ಪ್ರತಿಪಕ್ಷಗಳ ಬಗೆಗಿನ ಕೀಳರಿಮೆ- ಯಾವುದೂ ಇಲ್ಲ. ಪ್ರಾಯಶಃ ಇದೊಂದೇ ಗುಣದಿಂದ ಮೋದಿ ವಿಶ್ವಮಾನ್ಯತೆ ಗಳಿಸಲು ಅರ್ಹತೆ ಪಡೆದಿದ್ದಾರೆ.

    ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಮಾತನ್ನು ಮೋದಿ ವ್ಯಕ್ತಿತ್ವಕ್ಕೆ ಅನ್ವಯ ಮಾಡಿ ಹೇಳಿದರೆ ಸತ್ಯ ಹೇಳಿದಂತೆ:

    ನಾ ಮಾಡಿದೆನೆಂಬುದು ಮನದೊಳು ಸುಳಿದೊಡೆ

    ಏಡಿಸಿ ಕಾಡಿತ್ತು ಶಿವನ ಡಂಗುರ;/ ನಾ ಮಾಡಿದೆನೆನ್ನದಿರು ಲಿಂಗಕ್ಕೆ,

    ನಾ ಮಾಡಿದೆನೆನ್ನದಿರು ಜಂಗಮಕ್ಕೆ,/ ನಾ ಮಾಡಿದೆನೆಂಬುದು ಮನದೊಳಿಲ್ಲದಿದ್ದೊಡೆ

    ಬೇಡಿದನೀವ ನಮ್ಮ ಕೂಡಲ ಸಂಗಮದೇವ

    ಆಯುಷ್ಮಾನ್ ಭಾರತ

    ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಪ್ರಮುಖವಾದದ್ದು. 50 ಕೋಟಿ ಭಾರತೀಯರಿಗೆ, ವಿಶೇಷವಾಗಿ ಜನಸಾಮಾನ್ಯರು ಮತ್ತು ಅಶಕ್ತ-ದುರ್ಬಲ-ದೀನರಿಗೆ ಆರೋಗ್ಯ ವಿಮೆ ಒದಗಿಸಿದ ಹೆಗ್ಗಳಿಕೆ ಇದರದ್ದು. ಆಯುಷ್ಮಾನ್ ಯೋಜನೆಯ ವ್ಯಾಪಕತೆ, ಆಯಾಮ, ಜನರಿ ಗಾಗುತ್ತಿರುವ ಪ್ರಯೋಜನ ಕಂಡು ಮುಂದುವರಿದ ರಾಷ್ಟ್ರಗಳು ಬೆರಗಾಗಿವೆ.

    (ಲೇಖಕರು ಕರ್ನಾಟಕದ ಉಪ ಮುಖ್ಯಮಂತ್ರಿ)

    ಪ್ರಿಯಕರ ಮದುವೆ ಆಗಲ್ಲ ಅಂದರೂ ಪೊಲೀಸ್ ಸ್ಟೇಷನ್‌ಗೆ ಕರೆಸಿ ತಾಳಿ ಕಟ್ಟಿಸಿಕೊಂಡ ಗಟ್ಟಿಗಿತ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts