More

    ವಿಶ್ವ ಶಾಂತಿಗೆ ಪ್ರೇರಕ ಶಕ್ತಿಯೇ ಶ್ರೀರಾಮ

    ರಿಪ್ಪನ್‌ಪೇಟೆ: ಗುರುವಿಗೆ ಶಿಷ್ಯನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಸತಿಗೆ ತಕ್ಕ ಪತಿಯಾಗಿ ಅಯೋಧ್ಯೆಯ ಎಲ್ಲ ಜನರ ಪ್ರೀತಿ ಪಾತ್ರರಾಗಿ ಸಭ್ಯ ಸಮಾಜದ ಮರ್ಯಾದ ಪುರುಷೋತ್ತಮನಾಗಿ ಬಾಳಿದವ ಶ್ರೀರಾಮ. ಅವನ ಆದರ್ಶ ಜೀವನ ಎಲ್ಲರಿಗೂ ಮಾದರಿ ಎಂದು ಹೊಂಬುಜ ಜೈನಮಠದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
    ಅಯೋಧ್ಯೆ ಭವ್ಯ ಶ್ರೀ ರಾಮ ಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಸೋಮವಾರ ಸಂಜೆ ದೀಪೋತ್ಸವ ನೆರವೇರಿಸಿ ಮಾತನಾಡಿ, ರಾಮಾಯಣದ ರಘುರಾಮ ಜೈನ ಪುರಾಣದ ಪದ್ಮನೇ ಬಲಭದ್ರನಾಗಿ ಕೇವಲಿ(ಅರಿಹಂತ)ಯಾಗಿ ಮಾಂಗಿ-ತುAಗಿ(ಮಹಾರಾಷ್ಟç)ಯಲ್ಲಿ ಮುಕ್ತಿ ಹೊಂದಿದ ಸಿದ್ಧಪುರುಷ ಶ್ರೀರಾಮ ಎಂದು ತಿಳಿಸಿದರು.
    ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವನ್ನು ನಿರ್ಮಿಸಿ ಪ್ರತಿಮೆ ಸ್ಥಾಪಿಸಿದ್ದು, ಈ ಭೂಮಿ ಎಂದೆAದಿಗೂ ಪುಣ್ಯಭೂಮಿ. ಶಾಶ್ವತ ದೇವಭೂಮಿ. ಜನ ಮಾನಸದಲ್ಲಿ ಶ್ರೀರಾಮನ ನಾಮ ಮತ್ತೊಮ್ಮೆ ರಾರಾಜಿಸಿದೆ. ಭಾರತದ ಪರಂಪರೆಯನ್ನು ವಿಶ್ವಕ್ಕೆ ಪಸರಿಸಿದೆ ಎಂದು ಹೇಳಿದರು.
    ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಮಾಡಲಾಯಿತು. ಶಿಕ್ಷಕ ಅನಿಲ್ ಜೈನ್ ರಚಿಸಿದ ಶ್ರೀರಾಮನ ಕಲಾಕೃತಿಗೆ ದೀಪ ಹಚ್ಚಿ ಸಂಭ್ರಮಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts