More

    800 ಕೋಟಿ ಕೊಟ್ಟು ಅರಮನೆಯನ್ನು ವಾಪಸ್ಸು ಪಡೆದರಾ ಸೈಫ್​?

    ನವದೆಹಲಿ: ಬಾಲಿವುಡ್​ ತುಂಬಾ ಸೈಫ್​ ಅಲಿ ಖಾನ್​​ ಅವರದ್ದೇ ಮಾತು. ಅದಕ್ಕೆ ಕಾರಣ ಸೈಫ್​, ದೆಹಲಿಯಲ್ಲಿರುವ ತಮ್ಮ ಅರಮನೆಯನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಅದಕ್ಕೆ ಅವರು ಖರ್ಚು ಮಾಡಿರುವ ವೆಚ್ಚ 800 ಕೋಟಿ ರೂಗಳು ಎಂದು ಹೇಳಲಾಗುತ್ತಿದೆ.

    ಅರಮನೆಯನ್ನು ವಾಪಸ್ಸು ಪಡೆದಿಕೊಂಡಿದ್ದನ್ನು ಸೈಫ್​ ಸಹ ಒಪ್ಪಿಕೊಂಡಿದ್ದಾರೆ. ಆದರೆ, ಅಷ್ಟೊಂದು 800 ಕೋಟಿ ಎನ್ನುವುದು ಉತ್ಪ್ರೇಕೆಯ ಮೊತ್ತ ಎಂಬುದು ಅವರ ಅಭಿಪ್ರಾಯ. ಹಾಗಾದರೆ, ಆ ಅರಮನೆಯನ್ನು ಅವರು ಎಷ್ಟಕ್ಕೆ ಕೊಟ್ಟು ವಾಪಸ್ಸು ಪಡೆದರು ಎಂಬ ಮಾಹಿತಿಯನ್ನು ಅವರು ಹೇಳುವುದಿಲ್ಲ. ದುಡ್ಡು ಎನ್ನುವುದಕ್ಕಿಂತ, ಅದಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂದು ಹೇಳುತ್ತಾರೆ.

    ಇದನ್ನೂ ಓದಿ: ಪ್ರೇಮ್​ ಜನ್ಮದಿನಕ್ಕೆ ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ..

    ಹಾಗೆ ನೋಡಿದರೆ, ಸೈಫ್​ ಆ ಅರಮನೆಯನ್ನು ಖರೀದಿಸಿಲ್ಲ. ಅದು ಪಟೌಡಿ ಫ್ಯಾಮಿಲಿಗೆ ಸೇರಿದ ಅರಮನೆಯೇ. ಆದರೆ, ಕೆಲವು ವರ್ಷಗಳ ಹಿಂದೆ ಸೈಫ್​ ಅಲಿ ಖಾನ್​ ಅವರ ತಂದೆ ಮನ್ಸೂರ್​ ಅಲಿ ಖಾನ್​ ಅವರು ಅದನ್ನು ಲೀಸ್​ಗೆ ಕೊಟ್ಟಿದ್ದರಂತೆ. ಈಗ ಆ ಲೀಸ್​ ಹಣವನ್ನು ಮರಳಿಸಿರುವ ಸೈಫ್​, ಅದನ್ನು ತಮ್ಮ ಸುಪರ್ದಿ ಪಡೆದುಕೊಂಡಿದ್ದಾರೆ.

    ಆ ಅರಮನೆ ಏನಿಲ್ಲವೆಂದರೂ 100 ವರ್ಷಗಳಷ್ಟು ಹಳೆಯದು ಎಂಬುದು ಸೈಫ್​ ಅಭಿಪ್ರಾಯ. ಅವರ ತಾತ ಇಫ್ತಿಕಾರ್​ ಅಲಿ ಖಾನ್ ಪಟೌಡಿ ಅವರು, ತಮ್ಮ ಪತ್ನಿ ಸಾಜಿದಾ ಸುಲ್ತಾನ್​ ಅವರಿಗಾಗಿ ಕಟ್ಟಿಸಿದ ಅರಮನೆಯಂತೆ ಅದು. ಆ ನಂತರ ಮನ್ಸೂರ್​ ಅಲಿ ಖಾನ್​, ಸೈಫ್​ ಅಲಿ ಖಾನ್​ ಎಲ್ಲರೂ ಅಲ್ಲೇ ಹುಟ್ಟಿ ಬೆಳೆದಿದ್ದಾರೆ.

    ಇದನ್ನೂ ಓದಿ: ಜ್ಯೂ ಎನ್​ಟಿಆರ್​ ಪರಿಚಯಿಸುವ ಟೀಸರ್​ಗೆ ರಾಮ್​ಚರಣ್​ ಧ್ವನಿ

    ಎಲ್ಲಾ ಸರಿ, ಅಷ್ಟು ದೊಡ್ಡ ಅರಮನೆಯನ್ನಿಟ್ಟುಕೊಂಡು ಸೈಫ್​ ಏನು ಮಾಡಬಹುದು ಎಂಬ ಪ್ರಶ್ನೆ ಬರಬಹುದು. ಏನಿಲ್ಲ, ಬಿಡುವಿದ್ದಾಗೆಲ್ಲಾ ಅಲ್ಲಿಗೆ ಬಂದು ಕಾಲ ಕಳೆಯುವುದು ಅವರ ಐಡಿಯಾ. ಕಳೆದ ಒಂದು ತಿಂಗಳಿನಿಂದ ಸೈಫ್​, ತಮ್ಮ ಪತ್ನಿ ಕರೀನಾ ಮತ್ತು ಮಗ ತೈಮುರ್​ ಜತೆಗೆ ಅದೇ ಮನೆಯಲ್ಲಿ ಕಾಲ ಕಳೆದರು. ಜತೆಗೆ ಕರೀನಾ ಅಭಿನಯದ ‘ಲಾಲ್​ ಸಿಂಗ್​ ಚಡ್ಢಾ’ ಚಿತ್ರದ ಚಿತ್ರೀಕರಣವೂ ದೆಹಲಿಯಲ್ಲೇ ನಡೆಯುತ್ತಿತ್ತು.

    ಈಗ ಅದು ಮುಗಿದಿರುವುದರಿಂದ, ಸೈಫ್​ ತಮ್ಮ ಹೆಂಡತಿ ಮತ್ತು ಮಗನ ಜತೆಗೆ ಮುಂಬೈಗೆ ವಾಪಸ್ಸಾಗಿದ್ದಾರೆ.

    ನನ್ನ ತುಂಬಾ ಮಿಸ್​ ಮಾಡಿಕೊಳ್ತಿದ್ದೀರಾ ಅನಿಸುತ್ತೆ … ಕಂಗನಾ ಹೀಗೆ ಹೇಳಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts