More

    ನಟ ಸೂರ್ಯ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ!

    ಆಂಧ್ರಪ್ರದೇಶ: ಕಾಲಿವುಡ್ ಚಿತ್ರರಂಗದ ಖ್ಯಾತ ನಟ ಸೂರ್ಯ ಅವರ ಮುಂದಿನ ಸಿನಿಮಾಗಳ ಕುರಿತು ಇದೀಗ ಹೊಸ ಅಪ್ಡೇಟ್​​​ವೊಂದು​​ ದೊರಕಿದೆ.

    ಇದನ್ನೂ ಓದಿ: ಉಲ್ಲಾಸದ ಕಲಿಕೆಗೆ ಬ್ಯಾಗ್ ರಹಿತ ದಿನ; ಸಿಆರ್‌ಪಿ ಮಂಜುನಾಥ ಪೂಜಾರ ಹೇಳಿಕೆ

    ಸಿರುತೈ ಶಿವ ನಿರ್ದೇಶನದಲ್ಲಿ ತಯರಾಗುತ್ತಿರುವ ಕಂಗುವ ಚಿತ್ರದ ಚಿತ್ರೀಕರಣದಲ್ಲಿ ಸೂರ್ಯ ಬ್ಯುಸಿಯಾಗಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್​​ ಬೆಡಗಿ ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ. ಒಂದೆಡೆ ಈ ಚಿತ್ರದ ಬಗ್ಗೆ ಸೂರ್ಯ ಅವರ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದರೇ, ಮತ್ತೊಂದೆಡೆ ಮತ್ತೊಂದು ಸುದ್ದಿ ಕೇಳಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ನಟ ಸೂರ್ಯ ಅವರು ಅಭಿನಯಿಸಿದ ರೊಮ್ಯಾಂಟಿಕ್ ಚಿತ್ರ ‘ಸೂರ್ಯ S/o ಕೃಷ್ಣನ್’ ಅಮೆರಿಕಾದಲ್ಲಿ ಜುಲೈ 19, 2023 ರಂದು ಮತ್ತು ಭಾರತದಲ್ಲಿ ಜುಲೈ 21, 2023 ರಂದು ರೀ-ರಿಲೀಸ್​ ಮಾಡಲು ಚಿತ್ರತಂಡ ಚಿಂತಿಸಿತ್ತು. ಆದ್ರೆ, ಇದು ಸಾಧ್ಯವಾಗಿಲ್ಲ ಎಂಬುದು ಸೂರ್ಯ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ. ಸಿನಿಮಾದ ವಿತರಕರು ವಿಷಾದದಿಂದ ಚಲನಚಿತ್ರದ ಬಿಡುಗಡೆಯನ್ನು ಆಗಸ್ಟ್ 4, 2023ಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

    ಇದನ್ನೂ ಓದಿ: ಉಲ್ಲಾಸದ ಕಲಿಕೆಗೆ ಬ್ಯಾಗ್ ರಹಿತ ದಿನ; ಸಿಆರ್‌ಪಿ ಮಂಜುನಾಥ ಪೂಜಾರ ಹೇಳಿಕೆ

    ಈ ಚಿತ್ರದಲ್ಲಿ ನಟಿ ಸಮೀರಾ ರೆಡ್ಡಿ, ಸಿಮ್ರಾನ್ ಮತ್ತು ದಿವ್ಯಾ ಸ್ಪಂದನಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಈ ಚಿತ್ರಕ್ಕಾಗಿ ಚಾರ್ಟ್‌ಬಸ್ಟರ್ ಆಲ್ಬಂ ಅನ್ನು ಸಂಯೋಜನೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಶೀಘ್ರವೇ ಮುಂದಿನ ದಿನಗಳಲ್ಲಿ ತಿಳಿಸಲಿದ್ದೇವೆ ಎಂದು ಚಿತ್ರತಂಡ ಸಿನಿಪ್ರೇಕ್ಷಕರಿಗೆ ತಿಳಿಸಿದೆ,(ಏಜೆನ್ಸೀಸ್).

    ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts