More

    ರಾತ್ರಿ ರಹಸ್ಯ ಕರೆ ಬೆನ್ನತ್ತಿ ಹೋದ ಪೊಲೀಸರಿಗೆ ರಸ್ತೆ ಬದಿಯಲ್ಲಿ ಗೋಣಿ ಚೀಲ ಪತ್ತೆ: ತೆರೆದಾಗ ಕಾದಿತ್ತು ಶಾಕ್!

    ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೇ ಹೆಚ್ಚಾಗುತ್ತಿದ್ದಂತೆ ಚುನಾವಣಾಧಿಕಾರಿಗಳ ಕಣ್ಣು ಅಭ್ಯರ್ಥಿಗಳ ಮೇಲೆ ಬಿದ್ದಿದ್ದು, ಅದರ ಪರಿಣಾಮವಾಗಿ ಮಂಗಳವಾರ ರಾತ್ರಿ ತಿರುಚನಾಪಲ್ಲಿ ಜಿಲ್ಲೆಯ ರಸ್ತೆಯೊಂದರ ಬದಿಯಲ್ಲಿ ಬಿದ್ದಿದ್ದ ಗೋಣಿ ಚೀಲದಲ್ಲಿ ಹಣದ ರಾಶಿಯೇ ಪತ್ತೆಯಾಗಿದೆ.

    ಒಂದಿಷ್ಟು ಜನರ ಗುಂಪು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಜಗಳ ಆಡುತ್ತಿರುವ ಮಾಹಿತಿಯು ಮಂಗಳವಾರ ರಾತ್ರಿ ಪೆಟ್ಟೈವೈಥಲೈ ಪೊಲೀಸರಿಗೆ ತಿಳಿಯುತ್ತದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ. ಇದೇ ವೇಳೆ ಆ ಜಾಗದಲ್ಲಿ ಕಾರಿನ ಪಕ್ಕದಲ್ಲಿ ಗೋಣಿ ಚೀಲವೊಂದು ಬಿದ್ದಿರುವುದನ್ನು ಪೊಲೀಸರು ನೋಡುತ್ತಾರೆ.

    ಇದಾದ ಬಳಿಕ ಗೋಣಿ ಚೀಲವನ್ನು ತೆಗೆದು ನೋಡಿದಾಗ ಅಧಿಕಾರಿಗಳೇ ಶಾಕ್​ ಆಗುತ್ತಾರೆ. ಏಕೆಂದರೆ ಚೀಲದಲ್ಲಿ ಕಂತೆ ಕಂತೆ ನೋಟುಗಳೇ ಇರುತ್ತವೆ. ಬರೋಬ್ಬರಿ 1 ಕೋಟಿಗೂ ಅಧಿಕ ಹಣ ಇರುವುದು ಪೊಲೀಸರಿಗೆ ಗೊತ್ತಾಗುತ್ತದೆ.

    ಇದನ್ನೂ ಓದಿರಿ: ಕೂದಲು ನೇರಮಾಡಲು ಯೂಟ್ಯೂಬ್‌ ಮೊರೆ ಹೋಗಿ ಬೆಂಕಿಯಲ್ಲಿ ಬೆಂದು ಹೋದ ಬಾಲಕ!

    ಎಐಎಡಿಎಂಕೆ ಪಕ್ಷಕ್ಕೆ ಸೇರಿದ ಜನರನ್ನು ಒಳಗೊಂಡ ಎರಡನೇ ಗುಂಪು ತಾವು ವಾಹನವನ್ನು ನಿಲುಗಡೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾರೆ. ಆದರೆ, ನಗದು ಚೀಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಸದ್ಯ ಲೆಕ್ಕವಿಲ್ಲದ ಹಣವನ್ನು ಸರ್ಕಾರಿ ಖಜಾನೆಗೆ ಡೆಪಾಸಿಟ್​ ಮಾಡಲಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್​ 6ಕ್ಕೆ ನಡೆಯಲಿದೆ. (ಏಜೆನ್ಸೀಸ್​)

    ಅಮ್ಮ ದಯವಿಟ್ಟು ಇದನ್ನು ಫ್ರೆಂಡ್ಸ್​ಗೆ ಕೊಟ್ಬಿಡು: ಪತ್ರ ಬರೆದಿಟ್ಟು 23ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ!

    ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿಗಳ ದುರಂತ ಸಾವು: ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ!

    ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಕೊಹ್ಲಿ, ರೋಹಿತ್‌ಗೆ ಬಡ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts