More

    ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

    ಲಖನೌ: ಉತ್ತರ ಪ್ರದೇಶದಲ್ಲಿ ಎಲ್ಲಾ ಪಕ್ಷಗಳನ್ನು ಧೂಳಿಪಟ ಮಾಡಿ ಬಿಜೆಪಿ ಗೆದ್ದು ಮೆರೆಯುತ್ತಿದೆ. ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ವಿರೋಧ ಪಕ್ಷಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

    ಈ ನಡುವೆಯೇ ಅಚ್ಚರಿಯೊಂದು ನಡೆದೇ ಬಿಟ್ಟಿದೆ. ಯಾರೂ ಕಾಲಿಡದ ಜಾಗದಲ್ಲಿ ಕಾಲಿಟ್ಟಿದ್ದ ಯೋಗಿ ಆದಿತ್ಯನಾಥ ಅವರು, 29 ವರ್ಷಗಳ ನಂಬಿಕೆಯನ್ನು (ಮೂಢ) ಸಂಪೂರ್ಣ ಸುಳ್ಳು ಮಾಡಿ ಗೆದ್ದು ಬೀಗುತ್ತಿದ್ದಾರೆ.

    ಅಷ್ಟಕ್ಕೂ ಅಂಥದ್ದೊಂದು ನಂಬಿಕೆ ಏನು ಎಂದರೆ ಉತ್ತರ ಪ್ರದೇಶದ ನೋಯ್ಡಾಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ತಲೆತಲಾಂತರಗಳಿಂದಲೂ ಕೇಳಿ ಬರುತ್ತಿದೆ. ಇಲ್ಲಿಗೆ ಭೇಟಿ ನೀಡಿರುವವರು ಅಧಿಕಾರ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಇದೇ ಕಾರಣಕ್ಕೆ ಕಳೆದ 29 ವರ್ಷಗಳಿಂದ ಯಾವ ಮುಖ್ಯಮಂತ್ರಿಗಳು ಅಥವಾ ಉನ್ನತ ಅಧಿಕಾರಿಗಳು ಇಲ್ಲಿಗೆ ಕಾಲಿಟ್ಟ ಉದಾಹರಣೆ ಇಲ್ಲ. ಕರ್ನಾಟಕದಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತಾರೆಂಬ ನಂಬಿಕೆ ಇರುವಂತೆ ಉತ್ತರ ಪ್ರದೇಶದಲ್ಲಿ ನೊಯ್ಡಾ ಇದೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಕಲ್ಯಾಣ್ ಸಿಂಗ್ ಮತ್ತು ರಾಜನಾಥ್ ಸಿಂಗ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಕ್ಕೆ ಭೇಟಿ ನೀಡಿರಲಿಲ್ಲ.

    ಆದರೆ ಅದೀಗ ಸುಳ್ಳಾಗಿದೆ. ಏಕೆಂದರೆ ಚುನಾವಣೆ ಘೋಷಣೆಯಾದ ಮೇಲೆಯೂ ಯೋಗಿ ಆದಿತ್ಯನಾಥ ಅವರು ನೊಯ್ಡಾಗೆ ಭೇಟಿ ನೀಡಿ ಬಂದಿದ್ದಾರೆ. ಆದ್ದರಿಂದ ಯಾವುದೇ ಕ್ಷೇತ್ರ ಅಥವಾ ಸ್ಥಳಕ್ಕೆ ಭೇಟಿ ನೀಡಿದರೆ ಅದು ತಪ್ಪು ಎಂದಲ್ಲ, ಬದಲಿಗೆ ಉತ್ತಮ ಕೆಲಸ ಮಾಡಿದರೆ ಗೆಲುವು ತಂತಾನೇ ಬರುತ್ತದೆ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ಹೇಳಿದೆ.

    2018ರಲ್ಲಿ ಕೂಡ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಇದಾದ ಬಳಿಕ 2021ರಲ್ಲಿ ಮತ್ತೊಂದು ನೋಯ್ಡಾಗೆ ತೆರಳಿ ಕೋವಿಡ್ ಆಸ್ಪತ್ರೆ ಉದ್ಘಾಟನೆ ಮಾಡಿದ್ದರು. ತಮ್ಮ ಅಧಿಕಾರ ಅವಧಿಯಲ್ಲಿ ಯೋಗಿ  10ಕ್ಕೂ ಹೆಚ್ಚು ಸಲ ಇಲ್ಲಿಗೆ ಭೇಟಿ ನೀಡಿದ್ದಾರೆ.

    ‘ಉತ್ತರ ಪ್ರದೇಶ ಸುಂದರಿ’ಗೆ ಒಲಿಯದ ಮತದಾರ! ಬಿಜೆಪಿ ಎದುರು ‘ಮಿಸ್​ ಬಿಕಿನಿ ಗರ್ಲ್’​ಗೆ ಭಾರಿ ಹಿನ್ನಡೆ…

    ಹಾಸ್ಯಗಾರನಿಗೆ ಒಲಿದ ಪಂಜಾಬ್​ ಗದ್ದುಗೆ: ಅಮ್ಮ ಹೇಳಿದ್ದು ನಿಜವಾಯ್ತು… ಕುಡುಕ ಎಂದವರಿಗೆ ಮುಖಭಂಗವಾಯ್ತು

    ಎರಡೆರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್​ಗೆ ಸೋಲು: ಹೊಸ ಪಕ್ಷಕ್ಕೆ ಕೈ ಹಿಡಿಯದ ಮತದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts