More

    ಎರಡೆರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್​ಗೆ ಸೋಲು: ಹೊಸ ಪಕ್ಷಕ್ಕೆ ಕೈ ಹಿಡಿಯದ ಮತದಾರ

    ನವದೆಹಲಿ: ಪಂಜಾಬ್​ನ ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆಮ್ ಆದ್ಮಿ ಪಾರ್ಟಿಯ ಎದುರು ಸೋಲನ್ನು ಕಂಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ಅವರ ವಿರುದ್ಧ ಅಮರೀಂದರ್​ ಸಿಂಗ್​ ಪರಾಭವಗೊಂಡಿದ್ದಾರೆ.

    ಅಮರೀಂದರ್​ ಸಿಂಗ್​ ಅವರಿಗೆ 22,862 ಮತಗಳು ಬಂದಿದ್ದು, ಕೊಹ್ಲಿ ಅವರಿಗೆ 36, 645 ಮತಗಳು ಬಿದ್ದಿವೆ.

    ಈ ಹಿಂದೆ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್​ (ಪಿಎಲ್​ಸಿ) ಕಟ್ಟಿಕೊಂಡಿದ್ದರು. ಅವರು ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಮತದಾರ ಅವರ ಕೈ ಹಿಡಿಯಲಿಲ್ಲ. ಕಳೆದ ಬಾರಿಯ ಚುನಾವಣೆ ಅಂದರೆ, 2017ರ ಚುನಾವಣೆಯಲ್ಲಿ ಶೇ. 49ರಷ್ಟು ಅಂತರದಿಂದ ಗೆಲುವು ಕಂಡಿದ್ದ ಅಮರೀಂದರ್ ಸಿಂಗ್ ಅವರಿಗೆ ಈಗ ಭಾರಿ ಹಿನ್ನಡೆಯುಂಟಾಗಿದೆ.

    ಅಮರೀಂದರ್ ಸಿಂಗ್ ಅವರನ್ನು ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಪಟ್ಟದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು. ಹೈಕಮಾಂಡ್​​ನಿಂದ ತಮಗೆ ಅವಮಾನವಾಗಿದೆ, ತನ್ನ ಎದುರಾಳಿಯಾದ ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿ ಅವರು ರಾಜೀನಾಮೆ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅವರ ಪಕ್ಷ ಚುನಾವಣೆಯನ್ನು ಎದುರಿಸಿತ್ತು.

    ‘ಉತ್ತರ ಪ್ರದೇಶ ಸುಂದರಿ’ಗೆ ಒಲಿಯದ ಮತದಾರ! ಬಿಜೆಪಿ ಎದುರು ‘ಮಿಸ್​ ಬಿಕಿನಿ ಗರ್ಲ್’​ಗೆ ಭಾರಿ ಹಿನ್ನಡೆ…

    ಭಾರಿ ಸಂಚಲನ ಸೃಷ್ಟಿಸಿದ್ದ ಉ.ಪ್ರದೇಶದ ಹಾಥರಾಸ್​, ಲಖೀಂಪುರ ಕ್ಷೇತ್ರಗಳಲ್ಲಿ ಅಚ್ಚರಿಯ ಬೆಳವಣಿಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts