More

    ಸೋಲು-ಗೆಲವು ಸಮನಾಗಿ ಸ್ವೀಕರಿಸಿ

    ಅರಕೇರಾ: ಯುವಕರು ಕ್ರೀಡೆಗಳ ಆಯೋಜನೆ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಎಂದು ದೇನಾ ಬ್ಯಾಂಕ್ ನಿವೃತ್ತ ಅಧಿಕಾರಿ ಕೆ.ಅನಂತರಾಜ ನಾಯಕ ಹೇಳಿದರು.

    ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೇಹ್ವಾಗ್ ಬಾಯ್ಸ ತಂಡದಿಂದ ಹಮ್ಮಿಕೊಂಡಿದ್ದ ಅರಕೇರಾ ಪ್ರೀಮಿಯರ್ ಲೀಗ್ ಸೀಜನ್ 3 ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆ ಅವಿಭಾಜ್ಯ ಅಂಗವಾಗಿದ್ದು, ಅದರಲ್ಲಿ ಭಾಗವಹಿಸುವುದು ಮುಖ್ಯ. ಆಟಗಾರರು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.

    ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಮಾತನಾಡಿ, ಆಟಗಾರರಿಗೆ ಪಟ್ಟಣದಲ್ಲಿ ಸೂಕ್ತ ಮೈದಾನವಿದೆ. ಯುವಕರು ಒಂದೇ ಕ್ರೀಡೆಗೆ ಸೀಮಿತವಾಗಬಾರದು. ಸ್ವಚ್ಛತೆ ಸೇರಿ ಇತರ ಶ್ರಮದಾನ ಮಾಡುವ ಕೆಲಸವಾಗಬೇಕು ಎಂದರು. ಪ್ರಮುಖರಾದ ಭಗವಂತ್ರಾಯ ನಾಯಕ, ಬಾಷಾ ಸಾಬ್ ವೆಲ್ಡಿಂಗ್, ಮಹಾಂತೇಶ ಪೂಜಾರಿ, ತಿಮ್ಮನಗೌಡ, ವಿಶ್ವನಾಥ ಹೊಸಮನಿ, ವೆಂಕಟೇಶ ಕರ್ನಾಳ, ಭೀಮಣ್ಣ ನಾಯಕ, ಇಮ್ರಾನ್, ವೀರೇಶ ಬೇರಿ, ಶರಣಪ್ಪ ಖಾನಾಪುರ, ಸೂಗೂರೇಶ ಹೂಗಾರ, ತಿಮ್ಮಣ್ಣ ನಾಯಕ ಗುರಿಕೇರಾ, ಚನ್ನಪ್ಪ ನಗರ, ಶಿವರಾಯ, ರಾಘವೇಂದ್ರ ನಾಯಕ, ಆಂಜನೇಯ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts