More

    ಐಟಿ ದಾಳಿ ವೇಳೆ ನಿವೃತ್ತ ಐಪಿಎಸ್​ ಅಧಿಕಾರಿ ಮನೆಯಲ್ಲಿ ದಾಖಲೆಯಿಲ್ಲದ ಕೋಟಿಗಟ್ಟಲೆ ಹಣ ಪತ್ತೆ!

    ನೊಯ್ಡಾ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಶೋಧ ಕಾರ್ಯಾಚರಣೆ ವೇಳೆ ನಿವೃತ್ತ ಐಪಿಎಸ್​ ಅಧಿಕಾರಿಯ ಮನೆಯಲ್ಲಿ ದಾಖಲೆಯಿಲ್ಲದ ಕೋಟಿಗಟ್ಟಲೇ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. 2000 ಮತ್ತು 500 ರೂ. ಹೊಸ ನೋಟಗಳನ್ನು ಐಟಿ ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ. ಹಣವನ್ನು ಕಟ್ಟಡದ ನೆಲಮಾಳಿಗೆಯಲ್ಲಿ ಇಡಲಾಗಿತ್ತು. ಮಾಹಿತಿ ಅಧಿಕಾರಿಯ ಪ್ರಕಾರ ನೆಲಮಾಳಿಗೆಯಲ್ಲಿ 650 ಲಾಕರ್‌ಗಳನ್ನು ಹೊಂದಿರುವ ಸಂಸ್ಥೆಯನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

    ಪತ್ತೆಯಾಗಿರುವ ಹಣ ಬೇನಾಮಿ ಆಸ್ತಿಗೆ ಹೊಂದಿದೆಯಾ ಅಥವಾ ಇಲ್ಲವಾ ಎಂಬುದರ ಕುರಿತಾಗಿ ತನಿಖೆಯನ್ನು ನಡೆಸುತ್ತಿದ್ದಾರೆ. ನಿವೃತ್ತ ಐಪಿಎಸ್​ ಅಧಿಕಾರಿಯು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ತುಂಬಾ ಆಪ್ತರು ಎಂದು ತಿಳಿದುಬಂದಿದೆ.

    ನೊಯ್ಡಾದ ಸೆಕ್ಟರ್​ 50 ನೇ ಏರಿಯಾ ಸೇರಿದಂತೆ ಉತ್ತರ ಪ್ರದೇಶದ ಸುಮಾರು 10 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ನಡುವೆಯೇ ಜ್ಯುವೆಲ್ಲರಿ ಶಾಪ್​ ಮಾಲೀಕರು ರಹಸ್ಯವಾಗಿ ಹವಾಲ ವ್ಯವಹಾರ ನಡೆಸುತ್ತಿದ್ದಾರೆ ಎಂಬ ರಹಸ್ಯ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ. ಕೆಲವೊಂದು ಅನುಮಾಕರ ವ್ಯವಹಾರಗಳು ನಡೆದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದನ್ನು ಅನುಸರಿಸಿ ಅಧಿಕಾರಿಗಳು ಕೆಲವು ಜ್ಯುವೆಲ್ಲರಿ ಅಂಗಡಿ ಮಾಲೀಕರ ಹೆಸರನ್ನು ಪಟ್ಟಿ ಮಾಡಿದ್ದಾರೆ.

    ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳಿಗೆ ಹವಾಲಾ ಹಣ ಲಭ್ಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತೀರ್ಮಾನಿಸಿದೆ. ಇದನ್ನು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸುತ್ತಿರುವ ಅನುಮಾನ ವ್ಯಕ್ತವಾಗಿದೆ. (ಏಜೆನ್ಸೀಸ್​)

    ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ ಕೇಸ್​: ಚಿಕ್ಕಮನ ಜತೆ ಅಕ್ರಮ ಸಂಬಂಧ, ಸಹೋದರನಿಂದಲೇ ಹತ್ಯೆ

    ಮೊದಲ ರಾತ್ರಿ ಮುಗಿಸಿ ಬೆಳಗಿನ ಜಾವವೇ ಎಸ್ಕೇಪ್​ ಆದ ವರ: ನಂತ್ರ ವಧುವಿಗೆ ತಿಳಿದಿದ್ದು ಘೋರ ಸತ್ಯ!

    ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts