ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ

ನವದೆಹಲಿ: ಹಿರಿಯ ನಟಿ ಹಾಗೂ ಬಿಜೆಪಿ ಮುಖಂಡೆ ಜಯಪ್ರದಾ ಅವರಿಗೆ ಮಾತೃ ವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ನೀಲವೇಣಿ (85) ಮಂಗಳವಾರ (ಫೆ. 01) ಮೃತಪಟ್ಟಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ನೀಲವೇಣಿ ಅವರನ್ನು ಹೈದರಾಬಾದ್​ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇದೇ ಸಮಯದಲ್ಲಿ ದೆಹಲಿಯಲ್ಲಿದ್ದ ಜಯಪ್ರದಾ ತಾಯಿ ಮೃತಪಟ್ಟಿರುವ ಸುದ್ದಿ ಕೇಳಿ ತಕ್ಷಣ ಹೈದರಾಬಾದ್​ ಕಡೆ ಪ್ರಯಾಣ ಬೆಳೆಸಿದರು. ಜಯಪ್ರದಾ ತಾಯಿಯ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿನಿಮಾ ವಿಚಾರಕ್ಕೆ … Continue reading ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ