More

    ಕರೊನಾ ವೈರಸ್‌ 3ನೇ ಅಲೆ ತಡೆಯಬೇಕೆ? ಹಾಗಿದ್ದರೆ ಯಜ್ಞ ಮಾಡಿಸಿ ಎಂದ ಸಚಿವೆ ಉಷಾ

    ಭೋಪಾಲ್: ಭಾರತದಲ್ಲಿ ಯಜ್ಞಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಇದೇ ಕಾರಣಕ್ಕೆ ವಿದೇಶದಲ್ಲಿಯೂ ಭಾರತದ ಈ ಪದ್ಧತಿಯನ್ನು ಅನುಸರಿಸುವವರು ಇದ್ದಾರೆ. ಆದರೆ ಇದೇ ಯಜ್ಞದ ಕುರಿತು ಹೇಳಿಕೆ ನೀಡಿರುವ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್‌ ಈಗ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ, ನಾಲ್ಕು ದಿನಗಳ ಕಾಲ ಯಜ್ಞ ಚಿಕಿತ್ಸೆ ನಡೆಸಿದರೆ ಕೋವಿಡ್‌ನ ಮೂರನೇ ಅಲೆ ಭಾರತವನ್ನು ತಲುಪಲು ಸಾಧ್ಯವಿಲ್ಲ ಎಂದಿದ್ದಾರೆ. ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ಬುಡಸಹಿತ ಕಿತ್ತು ಹಾಕಲು ಯಜ್ಞ ಚಿಕಿತ್ಸೆ ಮಾಡುತ್ತಿದ್ದರು. ಈಗಲೂ ಅದನ್ನೇ ಮಾಡಬೇಕಿದೆ. ಹೀಗೆ ಮಾಡುವುದರಿಂದ ಕೋವಿಡ್ ಮೂರನೇ ಅಲೆ ಭಾರತವನ್ನು ಮುಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.

    ಸದ್ಯ ಭಾರತ ಕೋವಿಡ್‌ನ ಎರಡನೇ ಅಲೆಗೆ ನಲುಗುತ್ತಿರುವ ಸಂದರ್ಭದಲ್ಲಿ, ಇಡೀ ದೇಶವೇ ಅಲ್ಲೋಲ ಕಲ್ಲೋವಾಗಿರುವಾಗ ಇದು ಅತ್ಯಂತ ವಿಷಾದನೀಯ ಹೇಳಿಕೆ ಎನ್ನುವ ಮೂಲಕ ಹಲವಾರು ಮಂದಿ ಸಚಿವೆ ವಿರುದ್ಧ ಹರಿಹಾಯ್ದಿದ್ದಾರೆ.

    ಇಂದೋರ್‌ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಉಷಾ ಈ ವಿಷಯ ತಿಳಿಸಿದ್ದಾರೆ. ಯಜ್ಞ ಚಿಕಿತ್ಸೆ ನಿಜಕ್ಕೂ ಉಪಯೋಗಕಾರಿ ಎಂದ ಅವರು, ಮೂರನೆಯ ಅಲೆ ತಡೆಗೆ ಮಧ್ಯಪ್ರದೇಶ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದಿದ್ದಾರೆ.

    ಕರ್ನಾಟಕ ಪೊಲೀಸರ ವಿರುದ್ಧವೇ ಫೇಕ್‌ ವಿಡಿಯೋ! ದನಿ ಕೊಟ್ಟು ಅರೆಸ್ಟ್‌ ಆದ ಕಾಂಗ್ರೆಸ್‌ ಕಾರ್ಯಕರ್ತೆ

    ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?

    ‘ಮುದ್ದುಲಕ್ಷ್ಮಿ’ಗೆ ಶಾಕ್‌ ಕೊಟ್ಟ ಪೊಲೀಸರು- ಮನೆಯೊಳಗೆ ದಿಢೀರ್‌ ಪ್ರವೇಶಿಸಿ ಪರಿಶೀಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts