More

    ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?

    ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?ನಾನು ಒಬ್ಬಳನ್ನು ಪ್ರೀತಿಸುತ್ತದ್ದೆ. ಆದರೆ ಆಕೆಯ ಮನೆಯವರು ಒಪ್ಪದೇ ಬೇರೆ ಮದುವೆಗೆ ನಿರ್ಧರಿಸಿದರು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೇ ವಿಷ ಬೆರೆಸಿ ಕುಡಿದೆವು. ಆದರೆ ನಾನು ಬದುಕಿದೆ, ಅವಳು ನನಗಾಗಿ ಜೀವ ಬಲಿಕೊಟ್ಟಳು.

    ಅವಳ ನೆನಪಿನಲ್ಲಿದ್ದ ನನಗೆ ಒತ್ತಾಯದಿಂದ ಬೇರೆ ಮದುವೆಯನ್ನು ಮಾಡಿಸಿಬಿಟ್ಟರು ಅಪ್ಪ-ಅಮ್ಮ. ಆದರೂ ಪಾಪಪ್ರಜ್ಞೆಯಿಂದ ನರಳುತ್ತಿದ್ದೇನೆ. ಹೆಂಡತಿಗೆ ಮೊದಲ ರಾತ್ರಿಯೇ ಎಲ್ಲವನ್ನೂ ಹೇಳಿದ್ದೇನೆ. ಅವಳು ಮಹಾ ಸದ್ಗುಣಿ. ನನ್ನನ್ನು ಕ್ಷಮಿಸಿದ್ದಾಳೆ. ಆದರೆ ನಾನೇ ಪಾಪ ಮಾಡಿದ್ದೇನೆ. ಅವಳ ಜೊತೆ ಸಾಯಲಿಲ್ಲ. ಇವಳ ಜೊತೆ ಬದುಕಲು ಆಗುತ್ತಿಲ್ಲ. ಈಗ ಹೇಳಿ ಮೇಡಂ ಏನು ಮಾಡಲಿ?

    ಉತ್ತರ: ನಿಮ್ಮ ಬದುಕನ್ನು ಮತ್ತೆ ಪುನರ್ ವಿಮರ್ಶೆಗೆ ಒಳಪಡಿಸುವ ಕಾಲವಿದು. ಈಗ ವಿಶ್ಲೇಷಣೆಯನ್ನು ಹೀಗೆ ಪ್ರಾರಂಭಿಸೋಣ.
    1. ನೀವು ಬಿ.ಇ ಓದಿದ್ದೀರಿ. ಆಕೆ ಎಂ.ಬಿ.ಎ ಪದವಿಧರೆ. ಅಂದರೆ ಇಬ್ಬರೂ ಪ್ರೌಢವಯಸ್ಸಿನಲ್ಲಿ ಪ್ರೀತಿಸಿದ್ದೀರಿ. ನಿಮ್ಮ ನಿಮ್ಮ ವಯಸ್ಸು ಸಹ ಕಾನೂನಿನ ರೀತಿಯಲ್ಲೂ ಮದುವೆಗೆ ಅರ್ಹವಾಗಿತ್ತು. ಮನೆಯಲ್ಲಿ ಕೊಲೆ ಇತ್ಯಾದಿ ಉಗ್ರವಾಗಿ ಬೆದರಿಸಿದರು ಎಂದಿರಿ. ಆಗ ಕಾನೂನಿನ ನೆರವು ಪಡೆಯಬಹುದಿತ್ತಲ್ಲ? ಎಷ್ಟೋ ಹಳ್ಳಿಯ ಹೆಣ್ಣುಮಕ್ಕಳು ಪೊಲೀಸ್​ ಸ್ಟೇಷನ್‍ನಲ್ಲಿ ಮದುವೆಯಾಗಿರುವುದು ಟಿವಿಯಲ್ಲಿ, ಪೇಪರ್​ನಲ್ಲಿ ಬರುತ್ತಿರುತ್ತದೆಯಲ್ಲವೇ? ನೀವಿಬ್ಬರೂ ಅಷ್ಟು ವಿದ್ಯಾವಂತರಾಗಿದ್ದೂ ಭಾವದ ನೆಲೆಯಲ್ಲಿ ಯೋಚಿಸಿ, ಭಯಕ್ಕೆ ಬಿದ್ದು, ನಿಮ್ಮನ್ನು ಅವರು ಬೆಂಗಳೂರಿನಿಂದಲೇ ಓಡಿಸಿದರು. ನೀವೂ ಅವರ ಮಾತನ್ನು ನಂಬಿ ಓಡಿ ಬಂದಿರಿ. ಇದಕ್ಕೆ ಬದಲು ವಿವಾಹವಾಗಲು ಹಲವಾರು ದಾರಿಗಳಿತ್ತು. ಸ್ನೇಹಿತರ ಸಹಾಯ ಪಡೆಯಬಹುದಿತ್ತು. ಕೇವಲ ಸಿನಿಮಾದ ಮಾದರಿಯಲ್ಲಿ ಸಮಸ್ಯೆಯಿಂದ ಓಡುವ ಅಗತ್ಯವಿರಲಿಲ್ಲ. ಇರಲಿ ಆದುದಾಯಿತು.

    2. ಅವರು ನಿಮ್ಮನ್ನು ಹುಡುಕಿಕೊಂಡು ಬಂದರು. ಆಗಲೂ ಬದುಕುವ ಹಲವಾರು ದಾರಿಗಳಿದ್ದವು. ಅವರು `ಸಾಯೋಣ’ ಎಂದರು ನೀವು `ಸರಿ’ ಎಂದಿರಿ! ಇವೆಲ್ಲವೂ ಕೇವಲ ಭಾವದ ನೆಲೆಯಲ್ಲವೇ? ಆಗಲಾದರೂ ನಿಮ್ಮ ಜಾಣತನವನ್ನು ಉಪಯೋಗಿಸಬಹುದಿತ್ತು. ಅವರು ತೀರಾ ಖಿನ್ನತೆಯಲ್ಲಿದ್ದಿರಬಹುದು. ಅವರನ್ನು ವೈದ್ಯರಿಗೆ ತೋರಿಸಬಹುದಿತ್ತು. ಆ ತೀವ್ರಭಾವದ ಘಳಿಗೆಯನ್ನು ತಪ್ಪಿಸಿದ್ದರೆ ಇಬ್ಬರೂ ವಿಷಕುಡಿಯುವ ಪ್ರಸಂಗವೇ ಬರುತ್ತಿರಲಿಲ್ಲ ಅಲ್ಲವೇ?

    3. ಪ್ರತಿಹಂತದಲ್ಲೂ ಅವರು ಹೇಳುವುದು ನೀವು ಕೇಳುವುದು ಇದೇ ನಡೆದಿದೆಯಲ್ಲ? ಓಡಿಹೋಗು ಎಂದರು ಓಡಿಹೋದಿರಿ, ನಾನೂ ನಿನ್ನ ಜೊತೆಗೆ ಬರುತ್ತೇನೆಂದರೆ ಕರೆದುಕೊಂಡು ಹೋದಿರಿ, ವಿಷ ಕುಡಿಯೋಣವೆಂದರು ಕುಡಿದಿರಿ. ಅಂದರೆ ಅವರು ಆಡಿಸಿದಂತೆ ಕೋಲೆಬಸವನ ಹಾಗೆ ನೀವು ಆಡಿದಿರಿ. ಅಂದಮೇಲೆ ಈಗ ಆಗಿರುವ ತಪ್ಪುಗಳಿಗೆ ಆಡಿಸಿದ ಅವರು ಕಾರಣರೋ ಅಥವಾ ಆಡಿದ ನೀವು ಕಾರಣರೋ? ಬುದ್ಧಿಯ ನೆಲೆಯಲ್ಲಿ ಯೋಚಿಸಿ. ಅವರು ನಿಮ್ಮಿಂದ ತಪ್ಪುಗಳನ್ನು ಮಾಡಿಸಿದರು ಪಶ್ಚಾತ್ತಾಪದ ಹೊಣೆಗೆ ಸಿಕ್ಕದಂತೆ ಜಗತ್ತಿನಿಂದಲೇ ದೂರಾಗಿ, ಎಲ್ಲವನ್ನು ಪಾರುಮಾಡಿಕೊಂಡು ಬಿಟ್ಟರು. ಈಗ ನೀವು ಮಾಡದ ತಪ್ಪಿಗೆ ಹೊಣೆಹೊತ್ತುಕೊಂಡು ಬದುಕನ್ನು ನರಕ ಮಾಡಿಕೊಳ್ಳುತ್ತಿದ್ದೀರಿ.

    4. ಆಕೆಯ ಸಾವಿನ ನಂತರವೂ ನೀವು ಮತ್ತೊಬ್ಬರು ನಡೆಸಿದಂತೆ ನಡೆಯುವುದನ್ನು ಬಿಡಲಿಲ್ಲ. ನಿಮ್ಮ ಮನೆಯವರು ನಿಮಗೆ ಮತ್ತೊಂದು ಮದುವೆ ಮಾಡಿದರು. ನೀವು ಮಾಡಿಕೊಂಡಿರಿ. ಈಗ ನಿಧಾನವಾಗಿ ಯೋಚಿಸಿ. ನಡೆದ ಘಟನೆಗಳಲ್ಲಿ ನಿಮ್ಮದು ಎಷ್ಟು ತಪ್ಪಿದೆ ಮತ್ತೊಬ್ಬರದು ಎಷ್ಟು ತಪ್ಪಿದೆ ಎಂದು.

    5. ಆದರೂ ನಿಮಗೊಂದು ಸುವರ್ಣಾವಕಾಶವಿದೆ. ಹೇಗೂ ನೀವು ಬೇರೆಯವರು ಹೇಳಿದ್ದನ್ನು ಕಣ್ಣುಮುಚ್ಚಿಕೊಂಡು ಪಾಲಿಸುತ್ತೀರಲ್ಲ? ಈಗಲೂ ಹಾಗೇ ಮಾಡಿ. ನಿಮ್ಮ ಸುದೈವದಿಂದ ನಿಮಗೆ ಸದ್ಗುಣಿ ಹೆಂಡತಿ ಸಿಕ್ಕಿದ್ದಾರೆ. ಅವರು ಅಗ್ನಿಸಾಕ್ಷಿಯಾಗಿ ನಿಮ್ಮ ಕೈ ಹಿಡಿದಿದ್ದಾರೆ. ಇನ್ನು ಮುಂದೆ ನೀವು ಆಕೆ ಹೇಳಿದಂತೆ ಕೇಳಿ ಸಾಕು. ನಿಮ್ಮ ಬದುಕು ಬಂಗಾರವಾಗುತ್ತದೆ. ನಿಮ್ಮ ಮೊದಲ ಹುಡುಗಿ ನಿಮ್ಮನ್ನು ಸಾವಿನ ಕಡೆ ತಳ್ಳಿದ್ದರು. ಈ ಹುಡುಗಿ ನಿಮ್ಮನ್ನು ಖಂಡಿತ ಬದುಕಿನ ಕಡೆಗೆ ನಡೆಸುತ್ತಾರೆ. ನಡೆದು ಹೋದದ್ದೆಲ್ಲ `ಕಸ’ದಂತೆ. ತಲೆಯಿಂದ ತೆಗೆದು ಆಚೆ ಎಸೆಯಬೇಕು. ಹೊಸ ಬದುಕಿಗೆ ಮುಖಾಮುಖಿಯಾಗಬೇಕು. ದೇವರು `ಈ ಹೆಂಡತಿಯಿಂದ ಮಕ್ಕಳು ಪಡೆದು ಸುಖವಾಗಿ ಬಾಳಲಿ’ ಎಂದು
    ನಿಮ್ಮನ್ನು ಬದುಕಿಸಿದ್ದಾನೆ ಎಂದು ಕೊಳ್ಳಿ. ಆಗ ಪ್ರತಿದಿನವೂ ಹೊಸದಿನವಾಗಿ ಕಾಣಿಸುತ್ತದೆ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…

    ಗಂಡ ಸೆಕ್ಸ್‌ಗೆ ಒಪ್ಪುತ್ತಿಲ್ಲ, ಕಂಡರೆ ಅಸಹ್ಯ ಪಡ್ತಾರೆಂದು ಅಳುತ್ತಾ ಕೂರುವ ಬದಲು ಕಾರಣವೂ ತಿಳಿಯಬೇಕಲ್ವಾ?

    ಮೆಸೇಜ್‌ ನೋಡಿ ಮರುಳಾಗಿ ಲವ್‌ ಮಾಡೋಕೆ ಹೋಗಿದ್ಯಾ? ಅವನು ಹುಡುಗನೇ ಅಂತಾ ನಿಂಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts