More

    5.29 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ

    ಕಲಬುರಗಿ: ನಗರದ ದರಿಯಾಪುರ ಕೋಟನೂರದ ಜಿಡಿಎ ಲೇಔಟ್‌ನಲ್ಲಿ ಮಹೇಶ ಮಾನು ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ೫.೨೯ ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾದ ಘಟನೆ ನಡೆದಿದೆ. ಮೇ ೯ರಂದು ಮಹೇಶ ಮಾನು ಅವರ ತಂದೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಸೊಲ್ಲಾಪುರಕ್ಕೆ ಹೋಗಿದ್ದು, ಮೇ ೧೦ರಂದು ವಾಪಸ್ ಮನೆಗೆ ಬಂದ ವೇಳೆ ಕಳ್ಳತನವಾಗಿದ್ದು ತಿಳಿದಿದೆ. ಮನೆಯಲ್ಲಿದ್ದ ಬಂಗಾರದ ಬಳೆ, ಎರಡೆಳೆ ಸರ, ಸುತ್ತುಂಗುರಗಳು, ಉಂಗುರ, ಕಿವಿಯೋಲೆ, ಕಿವಿ ಬಟನ್, ಜುಮಕಿ ಬೆಂಡೋಲೆ, ನೋಜ್ ಪೀಸ್, ನಾಲ್ಕು ತೊಲೆಯ ಬೆಳ್ಳಿ ಕುಂಕುಮ ಭರಣಿ ಸೇರಿ ಒಟ್ಟು ೫.೨೯ ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾಗಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts