More

    ರಸ್ತೆಅಗೆತದ ಅನುಮತಿ ಪತ್ರ ಹಿಂಪಡೆದ ಪಾಲಿಕೆ

    ಬೆಂಗಳೂರು: ನಗರದ ನಾಲ್ಕು ವಾರ್ಡ್‌ಗಳಲ್ಲಿ ಹೊಸದಾಗಿ ಡಾಂಬರೀಕರಣ ಮಾಡಿದ್ದ ರಸ್ತೆಗಳನ್ನು ಅಗೆದು ಹಾಳುಗೆಡವಿದ್ದ ಗೇಲ್ ಕಂಪನಿಯ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಹಾಳಾಗಿರುವ ರಸ್ತೆಯನ್ನು ಕಂಪನಿಯಿಂದಲೇ ದುರಸ್ತಿಗೊಳಿಸುವ ನಿರ್ಧಾರ ಕೈಗೊಂಡಿದೆ.

    ಅಡುಗೆ ಅನಿಲ ಕೊಳವೆ ಪೈಪ್‌ಲೇನ್ ಅಳವಡಿಸಲು ಗೇಲ್ ಕಂಪನಿಯು ಕೆ.ಆರ್.ಮಾರುಕಟ್ಟೆ, ಆಜಾದ್‌ನಗರ, ಕಾಟನ್‌ಪೇಟೆ, ದೀಪಾಂಜಲಿನಗರ ವಾರ್ಡ್‌ಗಳಲ್ಲಿ ಇತ್ತೀಚಿಗೆ ಅನುಮತಿ ಪಡೆದುಕೊಂಡಿತ್ತು. ಕಾಮಗಾರಿ ಆರಂಭಿಸುವ ಮುನ್ನ ಸಂಚಾರ ಪೊಲೀಸರ ಒಪ್ಪಿಗೆ ಸಹಿತ ಕೆಲ ಷರತ್ತುಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಕಂಪನಿಯು ಕಾರ್ಯಾದೇಶ ಪಡೆದ ಬಳಿಕ ನಿಯಮ ಪಾಲಿಸಲಿಲ್ಲ. ಜತೆಗೆ ಕತ್ರಿಗುಪ್ಪೆ ಸೇರಿ ಇತರ ಕಡೆಯೂ ಕಾಮಗಾರಿ ಕೈಗೊಂಡು ರಸ್ತೆಗೆ ಹಾನಿ ಮಾಡಿತ್ತು. ಇದರ ವಿರುದ್ಧ ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಬಿಬಿಎಂಪಿಗೆ ದೂರು ನೀಡಿದ್ದರು. ಇದನ್ನಾಧರಿಸಿ ಸಂಸ್ಥೆಗೆ ನಷ್ಟ ಆಗಿರುವ ಕಾರಣ ಗೇಲ್ ಕಂಪನಿಗೆ ನೀಡಿದ್ದ ರಸ್ತೆಅಗೆತ ಕಾರ್ಯಾದೇಶದ ಅನುಮತಿ ಪತ್ರವನ್ನು ಶುಕ್ರವಾರ ಹಿಂಪಡೆಯಲಾಗಿದೆ.

    ಬಿಬಿಎಂಪಿಯು ಇತ್ತೀಚಿಗಷ್ಟೇ ಕೆಲ ಪ್ರದೇಶಗಳಲ್ಲಿ ಹೊಸದಾಗಿ ಡಾಂಬರು ಹಾಕಿತ್ತು. ಇವುಗಳು ಮುಖ್ಯರಸ್ತೆ ಆಗಿದ್ದರಿಂದ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗಿತ್ತು. ರಸ್ತೆಅಗೆತವನ್ನು ವೈಜ್ಞಾನಿಕವಾಗಿ ರೋಡ್ ಕಟ್ಟಿಂಗ್ ಮಷಿನ್‌ನಿಂದ ಕತ್ತರಿಸಿ ಪೈಪ್‌ಲೇನ್ ಅಳವಡಿಸಿದ ನಂತರ ಮೊದಲಿದ್ದಂತೆ ರಸ್ತೆಯನ್ನು ಚಂದ ಮಾಡಿಕೊಡುವಂತೆ ಕಂಪನಿಗೆ ಸೂಚಿಸಲಾಗಿತ್ತು. ಆದರೆ, ಗೇಲ್ ಕಂಪನಿ ನಿಯಮ ಉಲ್ಲಂಸಿದ್ದರಿಂದ ತಕ್ಷಣವೇ ಅನುಮತಿ ಪತ್ರವನ್ನು ವಾಪಸ್ ಪಡೆಯಲಾಗಿದೆ. ಹಾಳಾಗಿರುವ ರಸ್ತೆಗಳನ್ನು ಕೂಡಲೇ ಸಂಪೂರ್ಣವಾಗಿ ಡಾಂಬರೀಕರಣ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts