More

    ಗಂಡ ಸೆಕ್ಸ್‌ಗೆ ಒಪ್ಪುತ್ತಿಲ್ಲ, ಕಂಡರೆ ಅಸಹ್ಯ ಪಡ್ತಾರೆಂದು ಅಳುತ್ತಾ ಕೂರುವ ಬದಲು ಕಾರಣವೂ ತಿಳಿಯಬೇಕಲ್ವಾ?

    ಗಂಡ ಸೆಕ್ಸ್‌ಗೆ ಒಪ್ಪುತ್ತಿಲ್ಲ, ಕಂಡರೆ ಅಸಹ್ಯ ಪಡ್ತಾರೆಂದು ಅಳುತ್ತಾ ಕೂರುವ ಬದಲು ಕಾರಣವೂ ತಿಳಿಯಬೇಕಲ್ವಾ?ನಾನೊಬ್ಬನನ್ನು ಪ್ರೀತಿಸುತ್ತಿದ್ದೆ. ಆದರೆ ಅಮ್ಮ ಒಂಟಿಯಾಗಿ ನನ್ನನ್ನು ಸಾಕಿದ್ದರಿಂದ ಅವಳು ಹೇಳಿದ ಹುಡುಗನನ್ನೇ ಮದುವೆಯಾದೆ. ಆತ ನನ್ನ ಮಾವನ ಮಗ. ನನಗಾಗಿ ಜೀವವನ್ನೇ ತೇಯ್ದ ಅಮ್ಮನಿಗಾಗಿ ನನ್ನ ಪ್ರೀತಿಯನ್ನು ಬಲಿಕೊಟ್ಟು, ಮಾವನ ಮಗನನ್ನೇ ಪ್ರೀತಿಸಲು ಶುರುಮಾಡಿದೆ. ಮದುವೆಗೆ ಮೊದಲು ಮಾವನ ಮಗ ನನ್ನ ಬಳಿ ಚೆನ್ನಾಗಿಯೇ ವರ್ತಿಸುತ್ತಿದ್ದರು.
    ಆದರೆ ಮದುವೆಯಾದ ಮೇಲೆ ನನ್ನ ಬದುಕಿನ ಚಿತ್ರಣವೇ ಬೇರೆಯಾಗಿದೆ. ನನ್ನ ಅತ್ತೆ ಮಾವ ಸ್ನೇಹದಿಂದ ಇದ್ದಾರೆ. ಆದರೆ ಈ ನನ್ನ ಗಂಡನೇ ನನ್ನನ್ನು ಸದಾ ಬಯ್ಯುತ್ತಿರುತ್ತಾರೆ.

    ಹೊರಗಡೆ ಎಲ್ಲರೊಂದಿಗೆ ಚೆನ್ನಾಗಿರುವ ಅವರು ನನ್ನ ಹತ್ತಿರ ಮಾತ್ರ ಹೀಗೆ ಯಾಕೆ? ನನಗೂ ವಯಸ್ಸಿಗೆ ಸಹಜವಾಗಿ ಆಸೆ ಆಕಾಂಕ್ಷೆಗಳು ಇರುವುದಿಲ್ಲವಾ? ಬಾಯಿ ಬಿಟ್ಟು ಹೇಳಿದರೂ ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ನಾನು ಓದುತ್ತಿರುವುದು ಕಂಬೈನ್ಡ್ ಕಾಲೇಜು. ಅಲ್ಲಿ ಹುಡುಗರ ಜತೆ ಮಾತಾಡಿದರೂ ಜಗಳ ಆಡುತ್ತಾರೆ. ನಮ್ಮ ಮದುವೆಯಾಗಿ ಎರಡೂವರೆ ವರ್ಷಗಳಾಗಿವೆ. ಜೀವನವೇ ಸಾಕೆನಿಸಿದೆ. ಸಾಯುವುದಕ್ಕೂ ಆಗದೇ ಬದುಕುವುದಕ್ಕೂ ಆಗದೇ ತೊಳಲಾಡುತ್ತಾ ಇದ್ದೀನಿ. ಈ ನನ್ನ ಸಮಸ್ಯೆಗೆ ಏನು ಪರಿಹಾರ ದಯವಿಟ್ಟು ಹೇಳಿ.

    ಉತ್ತರ: ನಿಮ್ಮ ವಯಸ್ಸು 21ರ ಆಸುಪಾಸು ಇರಬಹುದು. ನಿಮ್ಮ ಪತ್ರದಲ್ಲಿ ನಿಮ್ಮ ಗಂಡನ ವಯಸ್ಸು ಬರೆದಿಲ್ಲ. ಇರಲಿ, ಅವರೂ ಇನ್ನೂ 25ರ ಯುವಕ ಇರಬಹುದು. ಬಹುಶಃ ನಿಮ್ಮಿಬ್ಬರಿಗೂ ಮನಸ್ಸು ಇನ್ನೂ ಪ್ರೌಢವಾಗಿಲ್ಲವೆನ್ನಬಹುದು. ಆದ್ದರಿಂದ ನಿಮ್ಮಿಬ್ಬರ ಸಂಬಂಧ ಗಾಢವಾಗಬೇಕಾದರೆ ತಾಳ್ಮೆಯಿಂದ ಇಬ್ಬರೂ ಇನ್ನೂ ಸ್ವಲ್ಪ ದಿನ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಈಗಲೇ ಸಾವು, ಜೀವನ ಬೇಜಾರು ಇಂಥಾ ಮಾತುಗಳನ್ನು ಮನಸ್ಸಿಗೆ ತಂದುಕೊಳ್ಳಬಾರದು.

    ಪ್ರೀತಿ ಪ್ರೇಮವನ್ನು ಸ್ವಲ್ಪ ಕಾಲ ವಿರಾಮದಲ್ಲಿರಿಸಿ, ನಿಮ್ಮ ಫೈನಲ್ ಪರೀಕ್ಷೆಯ ಸಿದ್ಧತೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ನಿಮಗೆ ಇನ್ನೂ ವಿದ್ಯೆಯನ್ನು ಮುಂದುವರೆಸಬೇಕೆಂದಿದ್ದರೆ ಅದರ ಕಡೆಗೂ ಗಮನ ಹರಿಸಬಹುದಲ್ಲ? ಅಥವಾ ಯಾವುದಾದರೂ ಉದ್ಯೋಗದ ಬಗ್ಗೆ ಚಿಂತಿಸಬಹುದಲ್ಲ? ಬದುಕು ಎನ್ನುವುದು ಪ್ರೀತಿ -ಪ್ರೇಮ- ಮದುವೆ ಇಷ್ಟಕ್ಕೇ ಸೀಮಿತವಲ್ಲ. ಅದರಾಚೆ ಇನ್ನೂ ತುಂಬಾ ವಿಶಾಲವಾಗಿದೆ. ಏನಾದರೂ ಸಾಧನೆ ಮಾಡುವುದರ ಕಡೆ ಗಮನ ಹರಿಸಬಹುದು. ನಿಮ್ಮ ಪತ್ರ ಓದಿದರೆ ನೀವು ತುಂಬಾ ತರ್ಕಬದ್ಧವಾಗಿ ಚೆನ್ನಾಗಿ ಮಾತಾಡುವ ಜಾಣೆಯೆನಿಸುತ್ತದೆ. ಈ ನಿಮ್ಮ ಜಾಣತನವನ್ನೇ ಉದ್ಯೋಗವಾಗಿ ಪರಿವರ್ತಿಸಿಕೊಳ್ಳಬಹುದು.

    ನಿಮ್ಮ ಗಂಡ ನಿಮ್ಮನ್ನು ಕಂಡರೆ ಮಾತ್ರ ಯಾಕೆ ಕೋಪಗೊಳ್ಳುತ್ತಾರೆ ಎನ್ನುವುದನ್ನು ನೀವು ಬರೆದಿಲ್ಲ. ಮದುವೆಗೆ ಮುಂಚೆ ಸರಸವಾಗಿದ್ದವರು ಮದುವೆಯ ನಂತರ ಯಾಕೆ ಬದಲಾಗಿದ್ದಾರೆ? ಇದನ್ನು ನೀವು ನಿಮ್ಮ ಮಾವ ಅತ್ತೆಯ ಹತ್ತಿರವೇ ಕೇಳಬೇಕು. ಅವರು ಸೆಕ್ಸ್‌ಗೆ ಒಪ್ಪುತ್ತಿಲ್ಲ ಎಂದು ಅಳುತ್ತಾ ಕೂರುವ ಬದಲು ಕಾರಣವನ್ನೂ ತಿಳಿಯಬೇಕಲ್ಲವೆ? ಎರಡೂವರೆ ವರ್ಷಗಳ ಹಿಂದೆ ಎಂದರೆ ಆಗಿನ್ನೂ ನಿಮಗೆ 18 ವರ್ಷವೂ ಆಗಿರಲಿಲ್ಲವೇನೋ. ಅಷ್ಟು ಸಣ್ಣ ವಯಸ್ಸಿಗೇ ಯಾಕೆ ಮದುವೆಯಾದಿರಿ? ಇರಲಿ ಎಲ್ಲವೂ ನಡೆದುಹೋದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ.

    ನಿಮಗೆ ಈಗ ಎರಡು ದಾರಿಗಳಿವೆ. ನಿಮ್ಮ ಅತ್ತೆ, ಮಾವ, ನಿಮ್ಮ ತಾಯಿ, ನಿಮ್ಮ ಗಂಡ ಎಲ್ಲರನ್ನೂ ಕೂಡಿಸಿ, ಜತೆಗೆ ಇನ್ನು ಯಾರಾದರೂ ಹಿರಿಯರಿದ್ದರೆ ಅವರನ್ನೂ ಕರೆದು ಎಲ್ಲರ ಎದುರಿಗೆ ನಿಮಗೆ ಆಗುತ್ತಿರುವ ಅನ್ಯಾಯವನ್ನು ಹೇಳುವುದು. ಚೆನ್ನಾಗಿ ಸಂಸಾರ ಮಾಡಲು ನಿಮ್ಮ ಗಂಡನಿಗೆ ಬುದ್ಧಿ ಹೇಳಿಸುವುದು. ಈ ಬಗ್ಗೆ ಮನೆಯ ಮಾನ ಮರ್ಯಾದೆ ಎಂದೆಲ್ಲಾ ಯೋಚಿಸಬಾರದು. ನಿಮಗೆ ಅನ್ಯಾಯವಾಗಿದೆ. ಮತ್ತು ಅದನ್ನು ಸರಿ ಪಡಿಸಿಕೊಳ್ಳುವ ಹಕ್ಕು ನಿಮಗಿದೆ. ಇಲ್ಲದಿದ್ದರೆ ನಿಮ್ಮಿಬ್ಬರ ಮನಸ್ಸೂ ಪ್ರೌಢವಾಗುವವರೆಗೆ ಅಂದರೆ ಇನ್ನೂ ಒಂದೆರಡು ವರ್ಷ ತಾಳ್ಮೆಯಿಂದ ಕಾಯಬೇಕು. ಆ ಹೊತ್ತಿಗೆ ನಿಮ್ಮ ಗಂಡನ ಗುಣ ನಿಮಗೆ, ನಿಮ್ಮ ಗುಣ ನಿಮ್ಮ ಗಂಡನಿಗೆ ಸ್ವಲ್ಪವಾದರೂ ಅರ್ಥವಾಗಿರುತ್ತದೆ. ಆ ನಂತರ ಬಹುಶಃ ನಿಮ್ಮ ದಾಂಪತ್ಯ ಜೀವನದ ಹದ ನಿಮಗೆ ಸಿಕ್ಕಬಹುದು. ಅಲ್ಲಿಯವರೆಗೆ ಸಾವು ಬದುಕು ಎಂದೆಲ್ಲಾ ಯೋಚಿಸಬೇಡಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಲಿವಿಂಗ್‌ ಟುಗೆದರ್‌ ಏನೆಂದು ತಿಳಿಯದೇ ಮೋಸ ಹೋಗಿಬಿಟ್ಟೆ- ಗರ್ಭಿಣಿಯಾಗಿರೋ ನನ್ನ ಗತಿಯೇನು ಮೇಡಂ?

    ಮೆಸೇಜ್‌ ನೋಡಿ ಮರುಳಾಗಿ ಲವ್‌ ಮಾಡೋಕೆ ಹೋಗಿದ್ಯಾ? ಅವನು ಹುಡುಗನೇ ಅಂತಾ ನಿಂಗೊತ್ತಾ?

    https://www.vijayavani.net/s-married-lady-fraud-nandondu/ 

    ಯಾವನದ್ದೋ ಜತೆ ಹಾಸಿಗೆಯಲ್ಲಿ ಸಿಕ್ಕಿಬಿದ್ದ ಪತ್ನಿ ನನ್ನ ಮೇಲೆಯೇ ಕೇಸ್‌ ಹಾಕಿದ್ದಾಳೆ- ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts