More

    ಬೆಂಗಳೂರು ಎಂಟ್ರಿಗೂ ಮುನ್ನ ಕರೊನಾ ನೆಗೆಟಿವ್‌ ವರದಿ ಕಡ್ಡಾಯ- ಯಾರಿಗೆಲ್ಲಾ ಅನ್ವಯ? ಎಂದಿನಿಂದ ಜಾರಿ? ಇಲ್ಲಿದೆ ಡಿಟೇಲ್ಸ್‌

    ಬೆಂಗಳೂರು: ಕರೊನಾ ಹೊಸ ರೂಪ ಪಡೆದುಕೊಂಡು ಬಂದಿದ್ದು, ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನು ಪ್ರವೇಶ ಮಾಡುವವರಿಗೆ ಕಡ್ಡಾಯ ನಿಯಮಗಳನ್ನು ಮಾಡಲಾಗಿದೆ.

    ಏಪ್ರಿಲ್‌ 1ರಿಂದ ಈ ನಿಯಮ ಜಾರಿಯಾಗಲಿದೆ. ಕರ್ನಾಟಕದ ಹೊರ ಭಾಗದಿಂದ ಬೆಂಗಳೂರು ಪ್ರವೇಶಿಸುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ನೆರೆಯ ಕೆಲವು ರಾಜ್ಯಗಳಲ್ಲಿ ಕರೊನಾ ಹೊಸರೂಪಾಂತರಿ ಅಟ್ಟಹಾಸ ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ, ಇಂಥದ್ದೊಂದು ನಿಯಮ ಜಾರಿಯಾಗಿದೆ.
    ಏನು ನಿಯಮಗಳು? ಕರ್ನಾಟಕ ಬಿಟ್ಟು ಹೊರಭಾಗಗಳಿಂದ ಏಪ್ರಿಲ್‌ 1ರಿಂದ ರಾಜ್ಯವನ್ನು ಪ್ರವೇಶಿಸುವವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿರಬೇಕು (Reverse transcription polymerase chain reaction) ಹಾಗೂ ಕರೊನಾವರದಿ ನೆಗೆಟಿವ್‌ ಇರಬೇಕು. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ ನೀಡಿದ್ದಾರೆ.

    ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಮಾತ್ರವೇ ಈ ನಿಯಮ ಅನ್ವಯವಾಗಲಿದ್ದು, ರಾಜ್ಯದ ಉಳಿದ ಭಾಗಗಳಿಗೆ ಅಲ್ಲ. ಏಪ್ರಿಲ್‌ 1ರಿಂದಲೇ ಈ ನಿಯಮ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಕರೊನಾ ಪ್ರಕರಣಗಳ ಪೈಕಿ ಶೇ 60ರಷ್ಟು ಅಂತರ್ ರಾಜ್ಯ ಪ್ರಯಾಣಿಕರಲ್ಲಿ ವರದಿಯಾಗಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ವಾಸಿಸುವವರು ಹೊರ ರಾಜ್ಯಗಳಿಂದ ಬರುತ್ತಿದ್ದರೆ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಬೇಕು. ಯಾವುದೇ ರಾಜ್ಯದಿಂದ ಬಂದರೂ ಪರೀಕ್ಷೆ ಕಡ್ಡಾಯ. ಬಿಬಿಎಂಪಿ ಕಮಿಷನರ್‌ ಈ ಕುರಿತು ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
    ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಇರುವುದು ಕಡ್ಡಾಯ, ಒಂದು ವೇಳೆ ಅವರು ಆ ವರದಿಯನ್ನು ತಾರದೇ ಬೆಂಗಳೂರು ಪ್ರವೇಶಿಸಿದರೆ ಅವರಿಗೆ ಇಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ. ಅವರು ಪರೀಕ್ಷೆಯ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.

    ಪ್ರಸ್ತುತ ಮಹಾರಾಷ್ಟ್ರ, ಕೇರಳ, ಪಂಜಾಬ್‌ ಹಾಗೂ ಚಂಡೀಗಡದಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಿದೆ. ಈಗ ಎಲ್ಲಾ ರಾಜ್ಯಗಳಿಗೂ ಇದು ಅನ್ವಯ ಆಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಲು ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ಅವರು ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳು, ಚಿತ್ರ ಮಂದಿರಗಳು, ಮದುವೆ ಹಾಗೂ ಸಮಾರಂಭಗಳ ಸಭಾಂಗಣಗಳು, ಶಾಲೆಗಳು ಹಾಗೂ ಕಾಲೇಜುಗಳ ಆವರಣಗಳಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ.

    20ರಿಂದ 40 ವರ್ಷ ವಯಸ್ಸಿನವರಲ್ಲಿ ಕರೊನಾ ಹೆಚ್ಚಾಗುತ್ತಿದ್ದು, ಅವರು ಐಸೋಲೇಷನ್‌ನಲ್ಲಿ ಇರುವ ಸಂದರ್ಭಗಳಲ್ಲಿ ಹೊರಗಡೆ ತಿರುಗಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ವಾಚ್‌ ಆ್ಯಪ್‌ ಶುರು ಮಾಡಿದ್ದೇವೆ. ಇದರಿಂದ ಐಸೋಲೇಷನ್‌ನಲ್ಲಿ ಇರುವವರ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

    ಅಯ್ಯಯ್ಯೋ ಬಂದೇ ಬಿಟ್ರು ಎನ್ನುತ್ತಲೇ ₹20 ಲಕ್ಷ ಗರಿಗರಿ ನೋಟ್‌ ಸುಟ್ಟು ಭಸ್ಮ ಮಾಡಿದ ತಹಶೀಲ್ದಾರ್‌!

    ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

    ಬ್ಯಾಂಕ್‌ನಲ್ಲಿ ಕೆಲಸ ಇದೆಯಾ? ಬೇಗ ಬೇಗ ಮುಗಿಸಿಕೊಳ್ಳಿ: ಶುರುವಾಗಲಿದೆ ಸರಣಿ ರಜೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts