More

    15ನೇ ವಯಸ್ಸಲ್ಲಿ ಸೀಟಿ ನುಂಗಿದ್ದಳು, 40ನೇ ವಯಸ್ಸಲ್ಲಿ ಹೊರ ಬಂತು- ವೈದ್ಯರೇ ಕಂಗಾಲು!

    ಕಣ್ಣೂರು (ಕೇರಳ): ಸುಮಾರು 25 ವರ್ಷಗಳ ಹಿಂದೆ ಬಾಲಕಿಯೊಬ್ಬಳು ಆಟವಾಡುತ್ತಾ ಸೀಟಿ ನುಂಗಿಬಿಟ್ಟಿದ್ದಳು. ಗೆಳೆಯನೊಂದಿಗೆ ಆಟವಾಡುತ್ತಿದ್ದ ವೇಳೆ, ಈಕೆ ಅಚಾನಕ್​ ಆಗಿ ಸೀಟಿಯನ್ನು ನುಂಗಿಬಿಟ್ಟಳು. ಅದು ಬಾಲಕಿಯ ಶ್ವಾಸಕೋಶದಲ್ಲಿ ಸಿಲುಕಿಬಿಟ್ಟಿತ್ತು.

    ಆ ಕ್ಷಣದಲ್ಲಿ ಏನು ಆಗದಿದ್ದರೂ ಕ್ರಮೇಣ ಈಕೆ ನಿರಂತರ ಕೆಮ್ಮಿನಿಂದ ಬಳಲು ಶುರು ಮಾಡಿದ್ದಳು. ಸೀಟಿಯ ವಿಷಯ ಮನೆಯವರ ಗಮನಕ್ಕೂ ಬಂದಿರದ ಕಾರಣ, ಕೆಮ್ಮಿಗೆ ಔಷಧ ಕೊಡಿಸುತ್ತಿದ್ದರು. ಔಷಧ ತೆಗೆದುಕೊಂಡ ತಕ್ಷಣ ಕೆಮ್ಮು ಗುಣಮುಖರಾದರೂ ಮತ್ತೆ ಕೆಮ್ಮಿನ ಬಾಧೆ ಶುರುವಾಯಿತು.

    ಆಸ್ತಮಾ ಕಾರಣದಿಂದ ಉಸಿರಾಟದ ಸಮಸ್ಯೆ ಇದೆ ಎಂದು ವೈದ್ಯರು ಹೇಳಿ ಅದಕ್ಕೂ ಚಿಕಿತ್ಸೆ ಕೊಡುತ್ತಿದ್ದರು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ.

    ಹೀಗೆ ವರ್ಷ ಕಳೆದು 25 ವರ್ಷ ಉರುಳಿಯೇ ಹೋಯಿತು. ಕೆಲ ವರ್ಷಗಳಿಂದ ನಿರಂತರ ಕೆಮ್ಮಿನ ಸಮಸ್ಯೆಯಿಂದ ನರಳತೊಡಗಿದರು ಮಹಿಳೆ. ನಂತರ ಇದರ ಸಮಸ್ಯೆ ತೀವ್ರವಾದಾಗ ಪುನಃ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ರೀತಿ ನಿರಂತರ ಕೆಮ್ಮಿದೆ ಎಂದು ಏನೋ ಸಮಸ್ಯೆ ಇದೆ ಎಂದುಕೊಂಡ ವೈದ್ಯರು ಸ್ಕ್ಯಾನಿಂಗ್​, ಎಕ್ಸ್​ರೇ ಮಾಡಿದ್ದಾರೆ, ನಂತರ ಅವರಿಗೇ ಶಾಕ್​ ಆಗಿದೆ.

    ಶ್ವಾಸಕೋಶದಲ್ಲಿ ಸೀಟಿ ಸೇರಿಕೊಂಡಿರುವುದು ಎಕ್ಸ್​ರೇ ಮೂಲಕ ಕಂಡುಬಂದಿದೆ. ಹೊರಗಿನ ಯಾವುದೋ ವಸ್ತು ದೇಹದೊಳಕ್ಕೆ ಸೇರಿಕೊಂಡಿದೆ ಎಂದು ವೈದ್ಯರು ಅಂದುಕೊಂಡಿದ್ದರೂ, ಸೀಟಿ ಇಷ್ಟು ವರ್ಷಗಳಿಂದ ದೇಹದೊಳಕ್ಕೆ ಇದ್ದುದು ನೋಡಿ ಅವರಿಗೇ ಅಚ್ಚರಿಯಾಯಿತು.

    ಈಗ ವೈದ್ಯರಾದ ರಾಜೀವ್ ರಾಮ್ ಹಾಗೂ ಪದ್ಮನಾಭನ್ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜಿನ ತಂಡವು ಮಹಿಳೆಯ ಸಮಸ್ಯೆಯನ್ನು ಪರಿಶೀಲಿಸಿ, ಆಕೆಯ ಬ್ರಾಂಕಸ್ ಪಥದಲ್ಲಿ ಸಿಲುಕಿದ್ದ ಸೀಟಿಯನ್ನು ಹೊರತೆಗೆದಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಸಮೀಪಿಸುತ್ತಿದೆ ಈ ಕೊಲೆಪಾತಕಿಯ ಸಾವು… ನೇಣಿಗೆ ಕೊರಳೊಡ್ಡುವ ಮುನ್ನ ಇದೋ ಕೊನೆಯ ಪ್ರಯತ್ನ…

    ಮಗನ ಈ ಗುಣ ನಿಖಾ ಮಾಡಿದ್ರೆ ಸರಿಹೋಗತ್ತೆ ಅಂದ್ಕೊಂಡೆ: ಆದ್ರೆ ಸೊಸೆಯನ್ನು ನೋಡೋಕಾಗ್ತಿಲ್ಲ… ಏನು ಮಾಡಲಿ?

    ಮದುವೆಯಾಗಲು ಇಷ್ಟವಿಲ್ಲವೆಂದರೂ ಒತ್ತಾಯ ಮಾಡುತ್ತಿದ್ದೀರಿ… ನನಗೆ ಬೇರೆ ಇಲ್ಲ… ಗುಡ್​ಬೈ

    VIDEO: ಪ.ಬಂಗಾಳದಲ್ಲಿ ಬಾಂಬ್‌ ದಾಳಿ: ಗಂಭೀರ ಗಾಯಗೊಂಡ ಸಚಿವ- ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts