More

    ಐಪಿಎಲ್​ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ವಿರಾಟ್​ ಕೊಹ್ಲಿ

    ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತುಯ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್​ ಮುಖಾಮುಖಿಯಾಗಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಸತತ ಸೋಲುಗಳಿಂದ ಕಂಗೆಟ್ಟು ಭರ್ಜರಿ ಕಮ್​ಬ್ಯಾಕ್​ ಮಾಡಿರುವ ಆರ್​ಸಿಬಿ ರಾಜಸ್ಥಾನ ವಿರುದ್ಧ ಗೆದ್ದು ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸಲು ಸಜ್ಜಾಗಿದೆ.

    ಹಾಲಿ ಐಪಿಎಲ್​ ಆವೃತ್ತಿಯಲ್ಲಿ ಭರ್ಜರುಇ ಫಾರ್ಮ್​​ನಲ್ಲಿರುವ ವಿರಾಟ್​ ಕೊಹ್ಲಿ 709 ರನ್​ಗಳಿಸುವ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಲಿ ಐಪಿಎಲ್​ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ವಿರಾಟ್​ ರಾಜಸ್ಥಾನ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೂ ಮತ್ತೊಂದು ಐತಿಹಾಸಿಕ ರೆಕಾರ್ಡ್​ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

    Virat Kohli

    ಇದನ್ನೂ ಓದಿ: ಗಂಡ-ಹೆಂಡತಿ ಜಗಳ ಮಗಳ ಕೊಲೆಯಲ್ಲಿ ಅಂತ್ಯ; ಶವದೊಂದಿಗೆ ಬೀದಿ ಸುತ್ತಿದ ತಾಯಿ

    ಐಪಿಎಲ್​ ಶುರುವಾದಾಗಿನಿಂದಲೂ ಆರ್​ಸಿಬಿ ಪರ ಆಡುತ್ತಿರುವ ವಿರಾಟ್ 251 ಪಂದ್ಯಗಳ 243 ಇನ್ನಿಂಗ್ಸ್‌ಗಳಲ್ಲಿ 7971 ರನ್ ಗಳಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 8 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಸ್ಥಾನ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ 29 ರನ್​ಗಳಿಸಿದ ವೇಳೆ ವಿರಾಟ್​ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ, ವಿರಾಟ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.

    ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 8 ಶತಕ ಮತ್ತು 50 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ 702 ಬೌಂಡರಿ ಹಾಗೂ 271 ಸಿಕ್ಸರ್ ಬಾರಿಸಿದ್ದಾರೆ. 113 ರನ್​ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಹಾಲಿ ಆವೃತ್ತಿಯಲ್ಲಿ  155 ಸ್ಟ್ರೈಕ್ ರೇಟ್​ನಲ್ಲಿ 708 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 59 ಬೌಂಡರಿ ಹಾಗೂ 37 ಸಿಕ್ಸರ್‌ಗಳನ್ನು ಬಾರಿಸಿ ಟಾಪ್​ ಸ್ಕೋರರ್​ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts