More

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯಾಕಾಂಡ- 37 ಮಂದಿಯ ಕೊಲೆ!

    ಲಖನೌ: ಕಳೆದ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಶಾಕ್‌ ಕೊಟ್ಟಿತ್ತು. ಇದಕ್ಕೆ ಕಾರಣ ಭಾರತೀಯ ಜನತಾ ಪಕ್ಷ. ಬಿಜೆಪಿ ಹಿಂದೆಂದೂ ಗೆದ್ದುಕೊಳ್ಳಲಷ್ಟು ಸೀಟನ್ನು ಇಲ್ಲಿ ಗೆಲ್ಲುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಮಾತ್ರವಲ್ಲದೇ ಖುದ್ದು ಮಮತಾ ಎದುರು ಬಿಜೆಪಿಯ ಸುವೇಂದು ಅಧಿಕಾರಿ ರೋಚಕ ಗೆಲುವು ಸಾಧಿಸಿರುವುದು ಕೂಡ ಟಿಎಂಸಿ ಕಾರ್ಯಕರ್ತರನ್ನು ಇನ್ನಿಲ್ಲದ ಅಸಮಾಧಾನಕ್ಕೆ ಗುರಿಮಾಡಿದೆ.

    ಇದೇ ಕಾರಣಕ್ಕಾಗಿ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಚುನಾವಣೆ ಮತ್ತು ಫಲಿತಾಂಶದ ನಂತರ ಅಂದರೆ ಈ ಒಂದೆರಡು ತಿಂಗಳಿನಲ್ಲಿಯೇ 37 ಮಂದಿ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ! ಅಷ್ಟೇ ಅಲ್ಲದೇ ಕಳೆದ ಚುನಾವಣೆಯ ನಂತರ ಅಂದರೆ ಐದು ವರ್ಷಗಳ ಅವಧಿಯಲ್ಲಿ ಕೊಲೆಯಾದ ಬಿಜೆಪಿ ಕಾರ್ಯಕರ್ತರ ಸಂಖ್ಯೆ 166!

    ಈ ಒಂದು ಆಘಾತಕಾರಿ ಅಂಕಿಅಂಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. ಚುನಾವಣೋತ್ತರ ಬಂಗಾಳದ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಲು ಉತ್ತರ ಪ್ರದೇಶ ಬಿಜೆಪಿ ಘಟಕದ ಜತೆ ಆಯೋಜಿಸಲಾಗಿದ್ದ ವರ್ಚುವಲ್ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ಈ ಹತ್ಯಾಕಾಂಡಕ್ಕೆ ಟಿಎಂಸಿಯೇ ಕಾರಣ ಎಂದು ಅವರು ನೇರ ಆರೋಪ ಮಾಡಿದರು.

    ವರ್ಚುವಲ್ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ರಾಧಾಮೋಹನ್ ಸಿಂಗ್, ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಭಾಗವಹಿಸಿದ್ದರು.

    ಮದುವೆಯಾಗೋದಾದ್ರೆ ಕೌನ್ಸೆಲಿಂಗ್‌ ಕಡ್ಡಾಯ- ವಿಚ್ಛೇದನ ತಡೆಗೆ ಸರ್ಕಾರದಿಂದ ಹೀಗೊಂದು ಕಾನೂನು

    ಜನಸಂಖ್ಯೆಯಲ್ಲಿ ಟಾಪ್‌ 1ನಲ್ಲಿರೋ ಚೀನಾದಲ್ಲಿ ಇನ್ಮುಂದೆ ಒಂದಲ್ಲ, ಎರಡಲ್ಲ…. ಮೂರು ಮಕ್ಕಳಾಗ್ಬೋದು!

    ಲಾಕ್‌ಡೌನ್‌ನಲ್ಲಿ ರಸ್ತೆಯ ಮೇಲೆ ಏಲಿಯನ್‌? ಬೆಚ್ಚಿಬಿದ್ದ ವಾಹನ ಸವಾರರು: ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts