More

    VIDEO: ಹಿಮಪಾತದ ನಡುವೆ ಯೋಧರ ಗಸ್ತು- ಕೊರೆಯುವ ಚಳಿಯಲ್ಲೂ ದೇಶಪ್ರೇಮ: ಹೃದಯತುಂಬಿ ಬರುವ ವಿಡಿಯೋ ವೈರಲ್‌

    ನವದೆಹಲಿ: ಡಿಸೆಂಬರ್‌ ಬಂತೆಂದರೆ ಸಾಕು. ಚಳಿ ಚಳಿ ಎಂದು ಮನೆಯಿಂದ ಹೊರಗೆ ಹೋಗುವುದೇ ಕಷ್ಟ. ಸ್ಟೆಟ್ಟರ್‌, ಕಂಬಳಿ ಹಾಕಿ ಮಲಗಿದರೂ ಚಳಿ ಹೋಗಲ್ಲ, ಇಂಥ ಪರಿಸ್ಥಿತಿ ನಮ್ಮದಾದರೆ ಹಿಮಪಾತವಾಗುತ್ತಿರುವಲ್ಲಿಯೇ ವಾಸಿಸುವುದೆಂದರೆ? ಅದೂ 24 ಗಂಟೆ ಎಚ್ಚರವಾಗಿದ್ದು, ಮೈಯೆಲ್ಲಾ ಕಣ್ಣಾಗಿದ್ದು, ಸ್ವಲ್ಪ ಶಬ್ದವಾದರೂ ಪ್ರಾಣಕ್ಕೆ ಸಂಚಕಾರ ಎನಿಸಿಕೊಂಡು ವಾಸಿಸಬೇಕು ಎಂದರೆ?

    ನೆನೆಸಿಕೊಂಡರೂ ಮೈ ಝುಂ ಎನ್ನುತ್ತದೆಯಲ್ಲವೆ? ಇವರೇ ನಮ್ಮ ಯೋಧರು. ಇದೀಗ ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾಗುತ್ತಿದೆ. ಕಾಲಿಟ್ಟರೆ ಪೂರ್ತಿ ಕಾಲು ಮುಳುಗುವಷ್ಟು ಹಿಮ, ಮೈಮರಗಟ್ಟಿಸುವ ಚಳಿ. ಈ ರೀತಿಯ ಹಿಮಪಾತದಿಂದಾಗಿ ‘ರೆಡ್ ಅಲರ್ಟ್’ ಘೋಷಿಸಿದೆ. ಜತೆಗೆ ಹಿಮಕುಸಿತ ಪೀಡಿತ ಪ್ರದೇಶಗಳಿಗೆ ಜನರು ಹೋಗದಂತೆ ಮತ್ತು ಸಂಚಾರ ಸಲಹೆ ಅನುಸರಿಸುವಂತೆ ಜನರಿಗೆ ಮನವಿ ಮಾಡಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆಯಾದ ಶ್ರೀನಗರ-ಜಮ್ಮು ಹೆದ್ದಾರಿಯನ್ನು ಬಂದ್​​ ಮಾಡಲಾಗಿದೆ .ಶ್ರೀನಗರ-ಲೇಹ್ ಹೆದ್ದಾರಿ ಕೂಡ ಬಂದ್‌ ಆಗಿದೆ. ಮಾತ್ರವಲ್ಲದೇ ಶ್ರೀನಗರ-ಸೋನಾಮಾರ್ಗ್-ಗುಮ್ರಿ ರಸ್ತೆ, ಶೋಪಿಯಾನ್ ಅನ್ನು ಪೂಂಚ್-ರಜೌರಿ ಜಿಲ್ಲೆಗಳೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಸಹ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರೀಕ್ಷೆಗಳನ್ನು ಮುಂದೂಡಲಾಗಿದೆ.

    ಇದು ಸದ್ಯ ಅಲ್ಲಿರುವ ಸ್ಥಿತಿ. ಆದರೆ ಇದ್ಯಾವುದರ ಅರಿವೇ ಇಲ್ಲದೇ, ನಮ್ಮ ರಕ್ಷಣೆಗಾಗಿ ಯೋಧರು ಗಡಿಯಲ್ಲಿ, ಮೈಕೊರೆಯುವ ಚಳಿಯಲ್ಲಿ, ಹಿಮಪಾತದ ನಡುವೆಯೇ ಗಸ್ತು ತಿರುಗುತ್ತಿದ್ದು, ಅದರ ವಿಡಿಯೋ ವೈರಲ್‌ ಆಗಿದೆ. ಯಾವುದೇ ನಿಶ್ಚಿಂತೆ ಇಲ್ಲದೆಯೇ, ವೈರಿದೇಶಗಳ ಬಗ್ಗೆ ಕಿಂಚಿತ್‌ ಯೋಚನೆಯೂ ಇಲ್ಲದೇ, ಯಾವ ಕ್ಷಣದಲ್ಲಿ ನಮ್ಮ ಪ್ರಾಣ ಹೋಗುತ್ತದೆ ಎಂಬ ಆತಂಕವೂ ಇಲ್ಲದೇ ನೆಮ್ಮದಿಯಿಂದ ಬೆಚ್ಚಗೆ ಕುಳಿತ ಎಲ್ಲ ಜನರೂ ಈ ವಿಡಿಯೋವನ್ನೊಮ್ಮೆ ನೋಡಬೇಕಾದ ಅಗತ್ಯವಿದೆ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ.

    ಇಲ್ಲಿದೆ ನೋಡಿ ವಿಡಿಯೋ:

    VIDEO: ಆಹಾರಗಳ ಮೇಲಾಯ್ತು- ತಲೆಯ ಮೇಲೂ ಉಗುಳಿದ ಸುಪ್ರಸಿದ್ಧ ಕೇಶ ವಿನ್ಯಾಸಕಾರ! ಎಲ್ಲೆಡೆ ಭಾರಿ ಆಕ್ರೋಶ

    VIDEO: ‘ಏನ್‌ ಕಥೇರಿ ನಿಮ್ದು.. ಅವ್ನು ನನ್ನ ಮಗ ಕಣ್ರೀ…’ ಬಿಜೆಪಿ ಮುಖಂಡನ ಕೆನ್ನೆಗೆ ಹೊಡೆದು ಬೇಸ್ತು ಬಿದ್ದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts